ಜಿಯೋ ಫೋನ್​ನಲ್ಲಿ ವಾಟ್ಸಪ್​ ಬಳಕೆ ಹೇಗೆ?

webtech_news18 , Advertorial
ದೇಶದ ಅತ್ಯಂತ ಕಡಿಮೆ ದರ್ಜೆಯ ಸ್ಮಾರ್ಟ್​ಫೋನ್​ಗಳಲ್ಲಿ ಒಂದಾದ ರಿಲಯನ್ಸ್​​ ಜಿಯೋ ಹೊರ ತಂದಿರುವ ಜಿಯೋ ಮೊಬೈಲ್​ ಇದೀಗ ತನ್ನ ಗ್ರಾಹಕರಿಗೆ ಖ್ಯಾತ ಖಾಸಗಿ ಮೆಸೇಜಿಂಗ್​ ಸೇವೆಯಾದ ವಾಟ್ಸ​ಪ್​ ಸೇವೆಯನ್ನು ಆರಂಭಿಸಲು ತೀರ್ಮಾನಿಸಿದೆ.ರಿಲಯನ್ಸ್​​ ಒಡೆತನದ ಮಧ್ಯಮ ದರ್ಜೆ ಮೊಬೈಲ್​ಗಳಾದ ಜಿಯೋ ಮೊಬೈಲ್​ ಫೋನ್​ಗಳಿಗೆ ಸೋಮವಾರದಿಂದ ವಾಟ್ಸ್​ಆ್ಯಪ್​ ಸೇವೆ ಆರಂಭವಾಗಿದೆ. ಈ ಮೊಬೈಲ್​ಗಳು KaiOs ಆಪರೇಟಿಂಗ್​ ಸಿಸ್ಟಂ ಮೂಲಕವೇ ಕಾರ್ಯ ನಿರ್ವಹಿಸುವ ತಂತ್ರಜ್ಞಾನ ಹೊಂದಿದೆ. ಹೀಗಾಗಿ ಜಿಯೋ ಫೋನ್​ ಗ್ರಾಹಕರಿಗಾಗಿಯೇ ಫೇಸ್​ಬುಕ್​ ಒಡೆತನದ ವಾಟ್ಸಪ್​ ಸಂಸ್ಥೆ ಹೊಸ ಶ್ರೀಣಿಯ ವಾಟ್ಸಪ್​ ಆ್ಯಪ್​ನ್ನು ಅಭಿವೃದ್ಧಿ ಪಡಿಸಿದೆ.


ಅತ್ಯಂತ ಕಡಿಮೆ ದರ್ಜೆಯ ಹಾಗೂ ಕೀಪ್ಯಾಡ್​ ಹೊಂದಿರುವ ಟಚ್​ ಸ್ಕ್ರೀನ್​ ಹೊಂದಿರದ ಮೊಬೈಲ್​ಗಳಿಗೆ ಇದೇ ಮೊದಲ ಬಾರಿಗೆ ವಾಟ್ಸಪ್​ ತನ್ನ ಸೇವೆಯನ್ನು ವಿಸ್ತರಿಸಿದೆ. ಕೆಲವೊಂದು ಕೀಗಳ ಮೂಲಕ ವಾಯ್ಸ್​ ರೆಕಾರ್ಡ್​​ ಮಾಡಿ ನಿಮ್ಮವರಿಗೆ ಕಳುಹಿಸಬಹುದು. ಈ ಸೇವೆಯನ್ನು ಆರಂಭಿಸಲು ಜಿಯೋ ಗ್ರಾಹಕರು ಮೊಬೈಲ್​ ನಂಬರ್​ ಮೂಲಕ ವೆರಿಫೈ ಮಾಡಬೇಕು. 'ಜಗತ್ತಿನ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ವಾಟ್ಸಪ್​ ಆ್ಯಪ್​ನ್ನು ನಮ್ಮ ಮೊಬೈಲ್​ನಲ್ಲಿ ಬಳಕೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿರುವ ವಾಟ್ಸಪ್​ ಸಂಸ್ಥೆಗೆ ನಾವು ಖುಣಿಯಾಗಿರುತ್ತೇವೆ' ಎಂದು ಜಿಯೋ ನಿರ್ಧೇಶಕ ಆಕಾಶ್​ ಅಂಬಾನಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.ಸೆ.10 ರಿಂದ ಈ ಸೇವೆ ಆರಂಭವಾಗಿದ್ದರೂ ಸೆ.20ರೊಳಗೆ ಎಲ್ಲಾ ಜಿಯೋ ಫೋನ್​ಗಳಿಗೂ ಈ ಸೇವೆ ದೊರೆಯುವುದಾಗಿ ಸಂಸ್ಥೆ ಭರವಸೆ ನೀಡಿದೆ.ನಿಮ್ಮ ಜಿಯೋ ಫೋನ್​ನಲ್ಲಿ ವಾಟ್ಸಪ್​ ಆರಂಭಿಸುವ ವಿಧಾನ
ಮೊದಲು ಆ್ಯಪ್​ಸ್ಟೋರ್​ನಲ್ಲಿ ವಾಟ್ಸಪ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಿ
ನಿಮ್ಮ ಮೊಬೈಲ್​ ಸಂಖ್ಯೆಯನ್ನು ನಮೂಧಿಸಿ
ಒಟಿಪಿ ವೆರಿಫಿಕೇಶನ್​ ಬಳಿಕ ಸೇವೆಯನ್ನು ಬಳಸಿ 

Trending Now