ಜಿಯೋಫೋನ್‌‌ನಲ್ಲಿ ವಾಟ್ಸ್‌ಆಪ್ ಲಭ್ಯ: ಡೌನ್​ಲೋಡ್ ಮಾಡುವುದು ಹೇಗೆ ಗೊತ್ತಾ?

webtech_news18 , Advertorial
-ನ್ಯೂಸ್ 18 ಕನ್ನಡಮುಂಬಯಿ( ಸೆ.12): ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿದ ರಿಲಾಯನ್ಸ್ ಸಂಸ್ಥೆ ಉಚಿತ ಡೇಟಾ ಮತ್ತು ಕಡಿಮೆ ಬಜೆಟ್​ನ ಜಿಯೋ​ ಫೋನ್ ಒದಿಗಿಸಿತ್ತು. ಈ ಮೂಲಕ ಪ್ರತಿಯೊಬ್ಬ ಫೋನ್ ಬಳಕೆದಾರರು ಇಂಟರ್​ನೆಟ್​ ಬಳಸುವಂತೆ ಮಾಡುವ ಕಾರ್ಯವನ್ನು ಎರಡು ವರ್ಷಗಳ ಹಿಂದೆ ಜಿಯೋ ಪ್ರಾರಂಭಿಸಿತ್ತು. ಅದರಂತೆ ಎರಡು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ 215 ಮಿಲಿಯನ್ ಗ್ರಾಹಕರನ್ನು ಪಡೆದ ಜಿಯೋ ಡಿಜಿಟಲ್ ಯುಗದಲ್ಲಿ ಒಂದು ರೀತಿಯಲ್ಲಿ ವಿಶ್ವ ದಾಖಲೆಯನ್ನೇ ಸೃಷ್ಟಿಸಿತು.


4ಜಿ ಸ್ಮಾರ್ಟ್‌ಫೋನ್ ಬಳಸುತ್ತಿದ್ದ ಬಹುತೇಕ ಗ್ರಾಹಕರು ಜಿಯೋ ಸಿಮ್ ಬಳಸುವಂತೆ ಮಾಡುವಲ್ಲಿ ಯಶಸ್ವಿಯಾದ ರಿಲಾಯನ್ಸ್, ವಿಶ್ವದರ್ಜೆಯ ಸೇವೆಗಳನ್ನು ಪ್ರಪಂಚದಲ್ಲೇ ಕಡಿಮೆ ಬೆಲೆಯಲ್ಲಿ ನೀಡಿತ್ತು. ಆದರೂ ಭಾರತದ ಮೊಬೈಲ್ ಗ್ರಾಹಕರ ಪೈಕಿ ಮೂರನೇ ಎರಡು ಭಾಗ ಗ್ರಾಹಕರು ಫೀಚರ್ ಫೋನ್ ಬಳಕೆಯಿಂದ ಹೊರಗೆ ಉಳಿದಿದ್ದರು.ಈ ಸೇವೆಗಳು ಕೈಗೆಟುಕುವ ದರದಲ್ಲಿ ಲಭ್ಯವಾದರೂ, 500 ಮಿಲಿಯನ್ ಫೀಚರ್ ಫೋನ್ ಬಳಕೆದಾರರಿಗೆ ಸ್ಮಾರ್ಟ್​ಫೋನ್​ ಎಂಬ ದುಬಾರಿ 4ಜಿ ಫೋನ್ ಕೊಳ್ಳುವುದು ಸಾಧ್ಯವಾಗುವಂತಿರಲಿಲ್ಲ. ಈ ಕಾರಣದಿಂದ ಕಡಿಮೆ ಬೆಲೆಯ ಆಧುನಿಕ ತಂತ್ರಜ್ಞಾನದ ಜಿಯೋಫೋನ್ ಅನ್ನು ರೂಪಿಸಲಾಯಿತು. 2017ರ ಆಗಸ್ಟ್​ನಲ್ಲಿ ಈ ಹೊಸ ಫೋನನ್ನು ರಿಲಯನ್ಸ್ ರೀಟೇಲ್ ಲಿ. ಮೂಲಕ ಅದನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು.ಜಿಯೋಫೋನ್ ಈ ಕೆಳಗಿನ ಆಶ್ವಾಸನೆಗಳನ್ನು ನೀಡಿತು1. ಕೈಗೆಟುಕುವ ಬೆಲೆಯ ಸಾಧನ: ಮಾನ್ಸೂನ್ ಹಂಗಾಮ ಕೊಡುಗೆಯ ಜಿಯೋಫೋನ್‌ನ ಎಂಟ್ರಿ ಬ್ಯಾರಿಯರ್ ದರ ಕೇವಲ 501ರೂ ಎಂದು ತಿಳಿಸಿತ್ತು. ಈ ಮೂಲಕ ಶೇ. 100ರಷ್ಟು ಫೋನ್ ಬಳಕೆದಾರರಿಗೆ ಇದು ಕೈಗೆಟುಕುವಂತಾಗಿದೆ.2. ಕೈಗೆಟುಕುವ ಬೆಲೆಯಲ್ಲಿ ವಿಶ್ವದರ್ಜೆಯ ಸೇವೆ: ಗ್ರಾಹಕರಿಗೆಂದೇ ರೂಪಿಸಲಾದ ಆಕರ್ಷಕ ಟ್ಯಾರಿಫ್ ಕೊಡುಗೆಗಳೊಂದಿಗೆ, ಅತ್ಯುತ್ತಮ ಗುಣಮಟ್ಟದ ಡೇಟಾ ಹಾಗೂ ಟ್ರೂ-ಎಚ್‌ಡಿವಾಯ್ಸ್ ಕಾಲಿಂಗ್ ಸೇವೆಗಳನ್ನು  ವಿಶ್ವದಲ್ಲೇ ಕಡಿಮೆ ಬೆಲೆಗೆ ಜಿಯೋಫೋನ್ ನೀಡುತ್ತಿದೆ.3. ಅತ್ಯುತ್ತಮ ಆಪ್ಲಿಕೇಶನ್‌ಗಳು: ಜಿಯೋ ಟೀವಿ, ಜಿಯೋ ಸಿನೆಮಾ, ಜಿಯೋ ಮ್ಯೂಸಿಕ್, ಜಿಯೋ ಚಾಟ್, ಗೂಗಲ್ ಮ್ಯಾಪ್ಸ್ ಹಾಗೂ ಫೇಸ್‌ಬುಕ್‌ನಂತಹ ಆಪ್‌ಗಳನ್ನು ಜಿಯೋಫೋನ್​ನಲ್ಲಿ ಲಭ್ಯವಿದ್ದು, ಗ್ರಾಹಕರು ಈಗಾಗಲೇ ಆನಂದಿಸುತ್ತಿದ್ದಾರೆ.4. ಡಿಜಿಟಲ್ ಸ್ವಾತಂತ್ರ್ಯ: ಇತರ ಯಾವುದೇ ದುಬಾರಿ 4ಜಿ ಸ್ಮಾರ್ಟ್‌ಫೋನ್ ಬಳಕೆದಾರರಂತೆ, ಜಿಯೋಫೋನ್ ಗ್ರಾಹಕರು ಕೂಡ ಮನರಂಜನೆ, ಶಿಕ್ಷಣ, ಮಾಹಿತಿ ಮತ್ತಿತರ ಪ್ರಮುಖ ಸೇವೆಗಳನ್ನು ತಮ್ಮಇಚ್ಛೆಯಂತೆ ಬಳಸಲು ಶಕ್ತರಾಗಿದ್ದಾರೆ."ಸಂಪರ್ಕದಿಂದ ದೂರವಿರುವವರನ್ನು ಸಂಪರ್ಕಿಸುವ ಈ ಅಭಿಯಾನವನ್ನು ಇನ್ನಷ್ಟು ಬಲಪಡಿಸಲು ಅನೇಕ ಪಾಲುದಾರರು ಮುಂದೆ ಬಂದರು. ಹೀಗೆ ನಮ್ಮೊಡನೆ ನಿಂತ ಪಾಲುದಾರರ ಪೈಕಿ ಫೇಸ್‌ಬುಕ್ ಮತ್ತು ಅದರ ಇಕೋಸಿಸ್ಟಂ ಕೂಡ ಒಂದು. ಈ ಪಾಲುದಾರಿಕೆಯ ಫಲ ಇದೀಗ ಇಡೀ ವಿಶ್ವದ ಮುಂದೆ ಇದೆ. ಇಂದಿನಿಂದ ವಿಶ್ವದಲ್ಲೇ ಅತಿ ಹೆಚ್ಚು ಬಳಕೆಯಾಗುವ ಚಾಟ್ ಅಪ್ಲಿಕೇಶನ್ ಆದ ವಾಟ್ಸ್‌ಆಪ್ ಅನ್ನು ನಾವು ಎಲ್ಲ ಜಿಯೋಫೋನ್‌ಗಳಲ್ಲೂ ನೀಡುತ್ತಿದ್ದೇವೆ. ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಫೇಸ್‌ಬುಕ್ ಹಾಗೂ ವಾಟ್ಸ್‌ಆಪ್ ತಂಡಗಳಿಗೆ ಜಿಯೋ ಧನ್ಯವಾದ ಅರ್ಪಿಸುತ್ತದೆ." ಎಂದು ರಿಲಯನ್ಸ್ ಜಿಯೋ ಇನ್‌ಫೋಕಾಮ್ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದ್ದಾರೆ.ಯಶಸ್ವಿ ಪರೀಕ್ಷೆಗಳ ನಂತರ, ಮೊತ್ತಮೊದಲ ಬಾರಿಗೆ, ಭಾರತದಾದ್ಯಂತ ಜಿಯೋ ಫೋನ್‌ನಲ್ಲಿ ವಾಟ್ಸ್‌ಆಪ್ ಲಭ್ಯವಾಗಲಿದೆ. ಜಿಯೋ - ಕಾಯ್ ಓಎಸ್ ಜಿಯೋಫೋನ್‌ಗಾಗಿಯೇ ತನ್ನ ಖಾಸಗಿ ಮೆಸೇಜಿಂಗ್ ಆಪ್‌ನ ಹೊಸ ಆವೃತ್ತಿಯ ವಾಟ್ಸ್‌ಆಪ್ ರೂಪಿಸಿದ್ದು, ಮಿತ್ರರು ಹಾಗೂ ಕುಟುಂಬದ ಸದಸ್ಯರೊಡನೆ ಸಂವಹನಕ್ಕಾಗಿ ಸರಳ, ವಿಶ್ವಾಸಾರ್ಹ ಹಾಗೂ ಸುರಕ್ಷಿತ ಮಾರ್ಗವನ್ನು ನೀಡುತ್ತಿದೆ.ಚುರುಕಾದ ಹಾಗೂ ವಿಶ್ವಾಸಾರ್ಹವಾದ ಸಂದೇಶ ಮತ್ತು ಚಿತ್ರಗಳನ್ನು ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುವ ಸಾಮರ್ಥ್ಯವಿರುವ  ವಾಟ್ಸ್‌ಆಪ್‌ನ ಅತ್ಯುತ್ತಮ ಸೌಲಭ್ಯಗಳನ್ನು ಈ ಹೊಸ ಆಪ್ ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್‌ನೊಡನೆ ನೀಡಲಿದೆ. ಕೀಪ್ಯಾಡಿನಲ್ಲಿ ಕೆಲವೇ ಕೀಲಿಗಳನ್ನು ಒತ್ತುವ ಮೂಲಕ ಧ್ವನಿರೂಪದ ಸಂದೇಶಗಳನ್ನು ರೆಕಾರ್ಡ್ ಮಾಡಿ ಕಳಿಸುವುದೂ ಸುಲಭವಾಗಿದೆ. ಮೊದಲಿಗೆ ಜಿಯೋಫೋನ್ ಗ್ರಾಹಕರು ತಮ್ಮ ದೂರವಾಣಿ ಸಂಖ್ಯೆಯನ್ನು ದೃಢೀಕರಿಸಬೇಕಿದ್ದು, ಆನಂತರ ಇತರ ವಾಟ್ಸ್‌ಆಪ್ ಬಳಕೆದಾರರೊಡನೆ ಪ್ರತ್ಯೇಕವಾಗಿ ಅಥವಾ ಗುಂಪುಗಳಲ್ಲಿ ಚಾಟ್ ಮಾಡಲು ಪ್ರಾರಂಭಿಸಬಹುದಾಗಿದೆ."ಭಾರತದಾದ್ಯಂತ ಲಕ್ಷಾಂತರ ಜನರು ಇದೀಗ ಜಿಯೋಫೋನ್‌‌ನಲ್ಲಿ ವಾಟ್ಸ್‌ಆಪ್ ಖಾಸಗಿ ಮೆಸೇಜಿಂಗ್ ಅನ್ನು ಬಳಸಬಹುದಾಗಿದೆ," ಎಂದ ವಾಟ್ಸ್‌ಆಪ್ ಉಪಾಧ್ಯಕ್ಷ ಕ್ರಿಸ್ ಡೇನಿಯೆಲ್ಸ್, "ಕಾಯ್ಓಎಸ್‌ಗಾಗಿ ಈ ಹೊಸ ಆಪ್ ಅನ್ನು ರೂಪಿಸುವ ಹಾಗೂ ಜಿಯೋಫೋನ್ ಗ್ರಾಹಕರಿಗೆ ಅತ್ಯುತ್ತಮ ಮೆಸೇಜಿಂಗ್ ಅನುಭವ ನೀಡುವ ಮೂಲಕ, ಭಾರತ ಹಾಗೂ ವಿಶ್ವದ ಯಾರ ಜೊತೆ ಬೇಕಾದರೂ ಸಂವಹನ ನಡೆಸುವ ಸಾಮರ್ಥ್ಯವನ್ನು ಇನ್ನಷ್ಟು ಜನರಿಗೆ ವಿಸ್ತರಿಸಲು ಬಯಸುತ್ತೇವೆ" ಎಂದು ಹೇಳಿದರು. ಒಂದೇ ವರ್ಷದಲ್ಲಿ ಜಿಯೋಫೋನ್ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದೆ:1. ರಿಲಯನ್ಸ್ ರೀಟೇಲ್ ಲಿ. ಮೂಲಕ ಪರಿಚಯಿಸಲಾದ ಜಿಯೋಫೋನ್, ಭಾರತದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುವ ಫೋನ್ ಎಂಬ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.2. ಸದ್ಯ ಮಾರಾಟವಾಗುವ ರೂ. 1,500 ಕ್ಕಿಂತ ಕಡಿಮೆ ಬೆಲೆಯ ಪ್ರತಿ 10 ಫೋನುಗಳ ಪೈಕಿ 8 ಜಿಯೋಫೋನ್‌ಗಳೇ ಆಗಿವೆ.3. ಸ್ಮಾರ್ಟ್‌ಫೋನುಗಳಲ್ಲಿರುವುದಕ್ಕಿಂತ ಐದು ಪಟ್ಟು ಹೆಚ್ಚಿನ ಸಂಖ್ಯೆಯ ವಾಯ್ಸ್ ಕಮ್ಯಾಂಡ್‌ಗಳು ಜಿಯೋಫೋನ್‌ನಲ್ಲಿ ಬಳಕೆಯಾಗುತ್ತಿವೆ.4. ಅಂತರಜಾಲ ಸಂಪರ್ಕ ಹಾಗೂ ಅಪ್ಲಿಕೇಶನ್‌ಗಳನ್ನು ಬಳಸುವಲ್ಲಿ ಜಿಯೋಫೋನ್ ಗ್ರಾಹಕರು ಸ್ಮಾರ್ಟ್‌ಫೋನ್ ಬಳಕೆದಾರರಿಗಿಂತ ಹೆಚ್ಚಿನ ಸಮಯ ವ್ಯಯಿಸುತ್ತಾರೆ.5. ಸಂಪರ್ಕವಿಲ್ಲದ ಸ್ಥಿತಿಯಿಂದ ಸಂಪರ್ಕಿತರಾಗಿ ಬದಲಾಗುವುದಷ್ಟೇ ಅಲ್ಲದೆ, ಜಿಯೋಫೋನ್ ಗ್ರಾಹಕರು ಜಿಯೋಫೋನ್ ಹಾಗೂ ಅಂತರ್ಜಾಲದ ಸಾಮರ್ಥ್ಯಗಳನ್ನು ಒಟ್ಟಾಗಿ ತೋರಿಸುತ್ತಿದ್ದಾರೆ. ಜಿಯೋಫೋನ್‌ನಲ್ಲಿ ವಾಟ್ಸ್‌ಆಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ:* ಇದೇ ಸೆಪ್ಟಂಬರ್ 10ರಿಂದ ಜಿಯೋಫೋನ್ ಆಪ್‌ಸ್ಟೋರಿನಲ್ಲಿ ವಾಟ್ಸ್‌ಆಪ್ ದೊರಕಲಿದ್ದು, 20ನೇ ಸೆಪ್ಟೆಂಬರ್ 2018ರ ವೇಳೆಗೆ ಎಲ್ಲ ಜಿಯೋಫೋನ್‌ಗಳಲ್ಲೂ ಈ ಸೌಲಭ್ಯ ಲಭ್ಯವಾಗಲಿದೆ.* ಜಿಯೋಫೋನ್‌ನಲ್ಲಿ ಲಭ್ಯವಾದ ನಂತರ, ಆಪ್‌ಸ್ಟೋರಿನಲ್ಲಿ ಡೌನ್‌ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಗ್ರಾಹಕರು ಜಿಯೋಫೋನ್ ಹಾಗೂ ಜಿಯೋಫೋನ್ 2 ಎರಡರಲ್ಲೂವಾಟ್ಸ್‌ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.* ಜಿಯೋಫೋನ್ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ರಿಲಯನ್ಸ್ ರೀಟೇಲ್ '1991' ಎಂಬ ವಿಶೇಷ ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಿದೆ.

Trending Now