ಬಳ್ಳಾರಿ ಜಿಲ್ಲೆಯೀಗ ಬಯಲುಬಹಿರ್ದೆಸೆ ಮುಕ್ತ ಶೌಚಾಲಯ; ಆದರೆ ವೈಯಕ್ತಿಕ ಶೌಚಾಲಯ ಬಳಸಲು ಜನರ ಹಿಂದೇಟು

webtech_news18 , Advertorial
- ಶರಣು ಹಂಪಿ, ನ್ಯೂಸ್ 18 ಕನ್ನಡಬಳ್ಳಾರಿ (ಸೆ.13):  ರಾಜ್ಯದಲ್ಲಿ ಅತಿ ಹಿಂದುಳಿದ ಜಿಲ್ಲೆಯಲ್ಲಿ ಬಳ್ಳಾರಿ ಒಂದು. ಇಂಥ ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾಡಳಿತ ಪ್ರಯತ್ನಿಸಿದ್ದರೂ ಇದುವರೆಗೂ ಆ ಕಾರ್ಯ ಪೂರ್ಣಗೊಂಡಿದ್ದಿಲ್ಲ. ಬೇಸ್ ಲೈನ್ ಸರ್ವೆ ಪ್ರಕಾರ ಬಳ್ಳಾರಿ ಜಿಲ್ಲೆ ಇದೀಗ ಬಯಲು ಬಹಿರ್ದೆಸೆ ಮುಕ್ತ ಶೌಚಾಲಯ ಜಿಲ್ಲೆಯಾಗಿ ಮಾರ್ಪಾಟಾಗಿದೆ. ಆದರೆ ಮನೆಯ ಮುಂದೆ ವೈಯಕ್ತಿಕ ಶೌಚಾಲಯವಿದ್ದರೂ ಬಯಲು ಕಡೆ ಹೋಗವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.


ಹಿಂದುಳಿದ ಜಿಲ್ಲೆ ಹಣೆಪಟ್ಟಿ ಹೊತ್ತುಕೊಂಡು ಬಳ್ಳಾರಿ ಜಿಲ್ಲೆ ಇಲ್ಲಿಯವರೆಗೆ ಬಯಲುಮುಕ್ತ ಬಹಿರ್ದೆಸೆ ಜಿಲ್ಲೆಯಾಗಿದ್ದಿಲ್ಲ. ಮನೆಗೊಂದು ಶೌಚಾಲಯ, ಸುಸಜ್ಜಿತ ಸಾಮೂಹಿಕ ಶೌಚಾಲಯವಿಲ್ಲದ ಕಾರಣ ಬಳ್ಳಾರಿ ಜಿಲ್ಲೆ ಬಹಿರ್ದೆಸೆ ಶೌಚಾಲಯವನ್ನು ಹೆಚ್ಚಾಗಿ ಜನರು ಬಳಸುತ್ತಿದ್ದರು. ಆದರೀಗ ಬಳ್ಳಾರಿ ಜಿಲ್ಲಾಡಳಿತ ಅದರಲ್ಲೂ ಜಿಲ್ಲಾಪಂಚಾಯತ್ ಸಿಇಓ ಡಾ ಕೆ ವಿ ರಾಜೇಂದ್ರ ಅವರ ಪರಿಶ್ರಮ ತಾಲೂಕಾಡಳಿತ ಅಧಿಕಾರಿ, ಸಿಬ್ಬಂದಿಗಳ ಸಹಕಾರದಿಂದ ಜಿಲ್ಲೆಯಲ್ಲಿ ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾರ್ಪಾಟು ಮಾಡಿದ್ದಾರೆ.ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನ ಈ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ. 2012 ರ ಬೇಸ್ಲೈನ್ ಸರ್ವೆಯ ಅಂಕಿ ಅಂಶಗಳ ಪ್ರಕಾರ ಬಳ್ಳಾರಿ ಜಿಲ್ಲೆಯ 7 ತಾಲೂಕು ಹಾಗೂ 200 ಗ್ರಾಮ ಪಂಚಾಯತಿಗಳು ಶೇ.100 ರಷ್ಟು ಪ್ರಗತಿ ಸಾಧಿಸಿವೆ. ಜಿಲ್ಲೆಯಲ್ಲಿರುವ 253075 ಕುಟುಂಬಗಳು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿವೆ. ಬಳ್ಳಾರಿ ತಾಲೂಕಿನಲ್ಲಿರುವ 53,338 ಕುಟುಂಬಗಳು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿವೆ. ಹೂವಿನಹಡಗಲಿಯಲ್ಲಿನ 35,333 ಕುಟುಂಬಗಳು, ಹಗರಿಬೊಮ್ಮನಳ್ಳಿ ತಾಲೂಕಿನಲ್ಲಿರುವ 30,593 ಕುಟುಂಬಗಳು, ಹೊಸಪೇಟೆ ತಾಲೂಕಿನ 27,108, ಕೂಡ್ಲಿಗಿ ತಾಲೂಕಿನಲ್ಲಿರುವ 40,837, ಸಂಡೂರು ತಾಲೂಕಿನ 32,138, ಸಿರಗುಪ್ಪ ತಾಲೂಕಿನಲ್ಲಿರುವ 33,728 ಕುಟುಂಬಗಳು ಸೇರಿದಂತೆ ಜಿಲ್ಲೆಯಲ್ಲಿರುವ 2,53,075 ಕುಟುಂಬಗಳು ತಮ್ಮ ಮನೆಗೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡಿವೆ ಎಂದು ಜಿಲ್ಲಾಪಂಚಾಯತ್ ಸಿಇಓ ಡಾ ಕೆ ವಿ ರಾಜೇಂದ್ರ ಮಾಹಿತಿ ನೀಡುತ್ತಾರೆ.ಬಯಲು ಬಹಿರ್ದೆಸೆ ಮುಕ್ತ ಮಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಮನೆ ಮನೆ ಭೇಟಿ, ಬೆಳಗಿನ ಜಾವದಲ್ಲಿ ವೀಜೆಲ್ ಅಭಿಯಾನ ಮಾಡಿದರು. ಸ್ವಚ್ಛತಾ ರಥದ ಮೂಲಕ ಪ್ರಚಾರ ಮಾಡಿ ಶೌಚಾಲಯ ನಿರ್ಮಾಣದ ಕುರಿತು ಜಾಗೃತಿ ಮೂಡಿಸಿದರು. ಕಿರುಚಿತ್ರ ಪ್ರದರ್ಶನ, ಶೌಚಾಲಯ ನಿರ್ಮಾಣಕ್ಕೆ ಅವಶ್ಯ ಇರುವ ಸಾಮಗ್ರಿಗಳನ್ನು ಒದಗಿಸುವ ಮುಖಾಂತರ ಆಂದೋಲನದ ರೀತಿಯಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವಂತೆ ಪ್ರೇರೇಪಿಸಲಾಯಿತು.ಇದರ ಪರಿಣಾಮ ಬಳ್ಳಾರಿ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡಲಾಗಿದೆ. ಸದ್ಯ ಬೇಸ್ ಲೈನ್ ಸರ್ವೆ ಪ್ರಕಾರ ಜಿಲ್ಲೆಯಲ್ಲಿ ಪ್ರತಿ ಮನೆಗೂ ಶೌಚಾಲಯವಿದ್ದರೂ ಇರುವ ವೈಯಕ್ತಿಕ ಶೌಚಾಲಯ ಗೋದಾಮು, ಸಾಮಾನು ಸರಂಜಾಮು ಇಡುವ ಜಾಗವಾಗಿದೆ. ಮೇಲಾಗಿ ವೈಯಕ್ತಿಕ ಶೌಚಾಲಯವಿದ್ದರೂ ಬಯಲು ಶೌಚಾಲಯದತ್ತ ಹೋಗುವವರ ಸಂಖ್ಯೆಯಲ್ಲಿ ಕಡಿಮೆಯೇನಾಗಿಲ್ಲ. ಇದೀಗ ಶೌಚಾಲಯದ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಿಬೇಕಿದೆ ಎನ್ನುತ್ತಾರೆ ಹೋರಾಟಗಾರ ಹಾಲ್ದಳ್ಳಿ ಹನುಮಂತಪ್ಪ.ಹೈದ್ರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶದಲ್ಲಿರುವ ಬಳ್ಳಾರಿ ಜಿಲ್ಲೆ ಇದ್ದುದರಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದಿದೆ. ಆದರೆ ಇಲ್ಲಿಯವರೆಗೆ ಬಯಲುಮುಕ್ತ ಶೌಚಾಲಯ ಪ್ರದೇಶವಾಗಿದ್ದಿಲ್ಲ. ಆದರೀಗ ಜಿಲ್ಲಾಡಳಿತ ಸಾರ್ವಜನಿಕರ ಸಹಕಾರದಿಂದ ಬೇಸ್ ಲೈನ್ ಸರ್ವೆ ಪ್ರಕಾರ ಪ್ರತಿಮನೆಗೆ ಶೌಚಾಲಯಗಳು ಬಂದಿವೆ. ಇದೀಗ ವೈಯಕ್ತಿಕ ಶೌಚಾಲಯ ಬಳಸಲು ಮೂಗಿಮುರಿಯುವ ಬಯಲು ಶೌಚಾಲಯವನ್ನೇ ಬಳಸುವ ಜನರಿಗೆ ತಿಳಿಹೇಳಿ ಜಾಗೃತಿ ಮೂಡಿಸಬೇಕಿದೆ. 

Trending Now