ತಿರುಮಲ ತಿರುಪತಿಯಲ್ಲಿ ಸೆ.13ರಿಂದ ಬ್ರಹ್ಮೋತ್ಸವ

webtech_news18 , Advertorial
ನ್ಯೂಸ್​ 18 ಕನ್ನಡಹೈದ್ರಾಬಾದ್​ (ಸೆ.11): ತಿರುಮಲ ತಿರುಪತಿ ದೇವಾಲಯದಲ್ಲಿ ನಡೆಯುವ ವೈಭವಯುತ ಒಂಬತ್ತುದಿನಗಳ ಬ್ರಹ್ಮೋತ್ಸವ ಇದೇ ತಿಂಗಳ 13ರಿಂದ ಪ್ರಾರಂಭವಾಗಲಿದೆ ಎಂದು ಟಿಟಿಡಿ ಕಾರ್ಯಕಾರಿ ಅಧಿಕಾರಿ ಅನಿಲ್​ ಕುಮಾರ್​ ಸಿಂಗಲ್​ ತಿಳಿಸಿದ್ದಾರೆ.


ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್​. ಚಂದ್ರಬಾಬು ನಾಯ್ಡು ಮೊದಲ ದಿನದ ಬ್ರಹ್ಮೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಅವರು, ರೇಷ್ಮೆ ವಸ್ತ್ರವನ್ನು ನೀಡಲಿದ್ದಾರೆ ಎಂದು ಅವರು ತಿಳಿಸಿದರು.ಸೆ.17ರಂದು ಗರುಡ ಸೇವೆ, 18ರಂದು ಸ್ವರ್ಣ ರಥಮ್, 20ರಂದು ರಥೋತ್ಸವ ಹಾಗೂ ಸೆ. 21ರಂದು ಚಕ್ರಂ ಸ್ನಾನಂ ಸೇವೆಗಳು ನಡೆಯಲಿದೆ. ಈ ಬಾರಿ ವಾಹನ ಸೇವೆ ಹಾಗೂ ಗರುಡ ಸೇವೆ ರಾತ್ರಿ 7 ಮತ್ತು 8ಗಂಟೆಗೆ ನಡೆಯಲಿದೆ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.ಬ್ರಹೋತ್ಸವ ನಿಮ್ಮಿತ್ತ ಸುರಕ್ಷೆ ದೃಷ್ಟಿಯಿಂದ 3000 ಪೊಲೀಸರು ರಕ್ಷಣೆಗೆ ನಿಯೋಜಿಸಲಾಗಿದೆ, ಗರುಡ ಸೇವೆಗೆ ಹೆಚ್ಚುವರಿಯಾಗಿ ಸಾವಿರ ಜನರನ್ನು ರಕ್ಷಣೆಗೆ ನೇಮಿಸಲಾಗಿದೆ, ಭಕ್ತಾದಿಗಳ ಸೇವೆಗಾಗಿ 1000 ಮಂದಿ ಸ್ಕೌಟ್​ ಮತ್ತು ಗೈಡ್​ಗಳ ನೇಮಕ ಮಾಡಲಾಗಿದೆ. ಎನ್​ಡಿಆರ್​ಎಫ್​ ತಂಡ ಮತ್ತು ನುರಿತ ಈಜುಪಟುಗಳು ಕೂಡ ಇರಲಿದ್ದಾರೆ ಎಂದು ಕೂಡ ತಿಳಿಸಿದರು.ಬ್ರಹ್ಮೋತ್ಸವ ವೀಕ್ಷಣೆಗಾಗಿ 31 ಎಲ್​ಇಡಿ ಪರದೆ, 11 ಪ್ರಥಮ ಚಿಕಿತ್ಸಾ ಕೇಂದ್ರ, 12 ಅಂಬುಲೆನ್ಸ್​, 800 ಹೆಚ್ಚುವರಿ ಶುಚಿತ್ಸ ಸಿಬ್ಬಂದಿಗಳನ್ನು ಕೂಡ ನೇಮಕ ಮಾಡಲಾಗಿದೆ. ಈ ಉತ್ಸವದಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸುವುದರಿಂದ 7000 ವಾಹನ ಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ, ಅಲಿಪಿರಿ ಮತ್ತು ಘಾಟ್ ರಸ್ತೆಯಲ್ಲಿ 24 ಗಂಟೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.ಬ್ರಹೋತ್ಸವದಲ್ಲಿ ಮಣಿಪುರ, ಗುಜರಾತ್​ ತಂಡ ಸಾಂಸ್ಕೃತಿಕ ಕಾರ್ಯಕ್ರಮ  ಪ್ರದರ್ಶಿಸಲಿದೆ. ಬಂದ ಭಕ್ತರಿಗೆ ತೊಂದರೆಯಾಗದಂತೆ ಅನ್ನಪ್ರಸಾದ, ಆರೋಗ್ಯ, ವಸತಿ ಸೇವೆಯನ್ನು ಏರ್ಪಡಿಸಲಾಗಿದೆ, ವಾಹನ ಸೇವೆ ಕುರಿತಾಗಿ ಟಿಟಿಡಿಯ ವಾಹಿಸಿ ಎಸ್​ವಿಬಿಸಿಯಲ್ಲಿ ಸೇವೆಯ ಪ್ರಸಾರ ಮಾಡಲಾಗುವುದು 

Trending Now