ಏಷ್ಯಾಡ್​ನ ಚಿನ್ನದ ಹುಡುಗಿ ಪೂವಮ್ಮ ಅವರಿಗೆ 40 ಲಕ್ಷ ರೂ. ನೀಡಿ ಗೌರವಿಸಿದ ಸಿಎಂ

webtech_news18 , Advertorial
ನ್ಯೂಸ್ 18 ಕನ್ನಡಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಪೂವಮ್ಮ ಅವರಿಗೆ ಮಂಗಳೂರಿನಲ್ಲಿ ಮುಖ್ಯಮಂತ್ರಿ ಹೆಚ್​. ಡಿ. ಕುಮಾರಸ್ವಾಮಿ ಸನ್ಮಾನಿಸಿದ್ದಾರೆ.


ರಿಲೇಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿರುವ ಪೂವಮ್ಮಗೆ ಚಿನ್ನ ಗೆದ್ದಿದ್ದಕ್ಕೆ 25 ಲಕ್ಷ ರೂ., ಬೆಳ್ಳಿ ಗೆದ್ದಿದ್ದಕ್ಕೆ 15 ಲಕ್ಷ ರೂ. ಒಟ್ಟು‌ 40 ಲಕ್ಷ ರೂಪಾಯಿ ಚೆಕ್ ನೀಡಿ ಗೌರವಿಸಲಾಗಿದೆ. ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಪೂವಮ್ಮ ಅವರು ಸಿಎಂ ಹೆಚ್​ಡಿಕೆ ಅವರ ಸ್ಪಂದನೆ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.ಇನ್ನು ಏಷ್ಯನ್ ಗೇಮ್ಸ್ ಕ್ರೀಡಾಪಟುಗಳಿಗೆ ರಾಜ್ಯದಲ್ಲಿ ಕಡಿಮೆ ಬಹುಮಾನ‌‌ ಮೊತ್ತ ನೀಡಿದ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಬಹುಮಾನ ಮೊತ್ತ ಏರಿಕೆ ವಿಚಾರ ಬಗ್ಗೆ ತಿದ್ದುಪಡಿಗೆ ಸೂಚಿಸಲಾಗಿದೆ ಎಂದಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನಗೆದ್ದ ಪೂವಮ್ಮಗೆ 40ಲಕ್ಷ ರೂ.ನೀಡಲಾಗಿದೆ. ಇಷ್ಟು ವೇಗವಾಗಿ ಹಿಂದಿನ ಯಾವುದೇ ಸರಕಾರ ಗೌರವ ನೀಡಿಲ್ಲ. ಕ್ರೀಡಾಪಟುವಿಗೆ ಪ್ರೋತ್ಸಾಹಿಸುವ ಕೆಲಸ ಮಾಡಿದ್ದೇವೆ. ಪದಕ ವಿಜೇತೆಗೆ ನಿವೇಶನದ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.ಏಷ್ಯನ್ ಗೇಮ್ಸ್​ನ 4*400 ಮೀ. ಮಿಶ್ರ ರಿಲೇ ಸ್ಪರ್ಧೆಯಲ್ಲಿ ಭಾರತದ ಆಟಗಾರ್ತಿಯರಾದ ಹಿಮಾ ದಾಸ್, ಕನ್ನಡತಿ ಎಂ ಆರ್ ಪೂವಮ್ಮ, ಅರೋಕಿಯಾ ಅವರು ಎರಡನೇ ಸ್ಥಾನ ತಲುಪಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು.


Trending Now