ಬಿಜೆಪಿ ಶಾಸಕರ ಸೆಳೆಯಲು ಮುಂದಾದ ಜೆಡಿಎಸ್​-ಕಾಂಗ್ರೆಸ್​​: ತಮ್ಮ ಪಡೆಯನ್ನು ಹಿಡಿದಿಟ್ಟುಕೊಳ್ಳಲು ಬಿಎಸ್​ವೈ ಸರ್ಕಸ್​​

webtech_news18
ನ್ಯೂಸ್​-18 ಕನ್ನಡಬೆಂಗಳೂರು(ಸೆಪ್ಟೆಂಬರ್​.12): ಕಾಂಗ್ರೆಸ್​​ ನಾಯಕರು, ಶಾಸಕ ಜಾರಕಿಹೊಳಿ ಬ್ರದರ್ಸ್​ಗೆ ಬಿಜೆಪಿ ಗಾಳ ಹಾಕುತ್ತಿದೆ ಎಂಬ ಬೆನ್ನಲ್ಲೇ ಕೇಸರಿ ಪಕ್ಷದ ಶಾಸಕರನ್ನು ಸೆಳೆಯಲು ಜೆಡಿಎಸ್​​-ಕಾಂಗ್ರೆಸ್​​ ಮುಂದಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಹೀಗಾಗಿ, ಎಚ್ಚೆತ್ತ ಬಿ‌.ಎಸ್. ಯಡಿಯೂರಪ್ಪ ಅವರು, ತಮ್ಮ ಪಕ್ಷದ 104 ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸರ್ಕಸ್​​ ನಡೆಸುತ್ತಿದ್ಧಾರೆ ಎನ್ನಲಾಗಿದೆ.


ಬಿಜೆಪಿಯ 104 ಶಾಸಕರಿಗೂ ಪ್ರತ್ಯೇಕ ತಂಡ ರಚಿಸಿ, ಮುಖ್ಯಸ್ಥರನ್ನು ನೇಮಕ ಮಾಡಲಾಗಿದೆ. ಹೈದರಾಬಾದ್ ಕರ್ನಾಟಕ ಭಾಗದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಜವಾಬ್ದಾರಿ ಬಿ.ಶ್ರೀರಾಮುಲು, ಭಗವಂತ ಖೂಬಾ, ಕರಡಿ ಸಂಗಣ್ಣ ಹೆಗಲಿಗೆ ಬಿಎಸ್​ವೈ ವಹಿಸಿದ್ದಾರೆ ಎನ್ನುತ್ತಿವೆ ಆಪ್ತ ಮೂಲಗಳು.ಮುಂಬಯಿ ಕರ್ನಾಟಕ (ಉತ್ತರ ಕರ್ನಾಟಕ) ಭಾಗದ ಶಾಸಕರ ಜವಾಬ್ದಾರಿ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ ಹೆಗಲಿಗೆ ಮತ್ತು ಕರಾವಳಿ ಹಾಗೂ ಮಲೆನಾಡು ಭಾಗದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಜವಾಬ್ದಾರಿ ಶೋಭಾ ಕರಂದ್ಲಾಜೆ, ಕೆ.ಎಸ್. ಈಶ್ವರಪ್ಪ, ಸಿ.ಟಿ.ರವಿ ಮತ್ತು ನಳಿನ್‌ಕುಮಾರ್ ಕಟೀಲ್​ಗೆ ಜವಾಬ್ದಾರಿ ನೀಡಿದ್ದಾರೆ.ಮೈಸೂರು, ತುಮಕೂರು ಹಾಗೂ ಬೆಂಗಳೂರಿನ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಜವಾಬ್ದಾರಿ ಆರ್.ಅಶೋಕ್, ಅರವಿಂದ ಲಿಂಬಾವಳಿ ಮತ್ತು ಎಸ್.ಸುರೇಶ್ ಕುಮಾರ್, ಡಿ.ವಿ.ಸದಾನಂದಗೌಡರಿಗೆ ನೀಡಲಾಗಿದೆ. ಅಲ್ಲದೇ ಮಧ್ಯ ಕರ್ನಾಟಕ ಭಾಗದ ಶಾಸಕರ ಜವಾಬ್ದಾರಿ ಪ್ರಹ್ಲಾದ್ ಜೋಷಿ ಮತ್ತು ಜಿ.ಎಂ.ಸಿದ್ದೇಶ್ವರ್ ವಹಿಸಿಕೊಂಡಿದ್ದಾರೆ.ನಮ್ಮ 104 ಶಾಸಕರನ್ನು ಹಿಡಿದಿಟ್ಟಕೊಳ್ಳಲೇಬೇಕು. ಇಲ್ಲಿ ಯಾವುದೇ ಎಡವಟ್ಟು ಆಗಬಾರದು. ನಮ್ಮಲ್ಲಿ ಯಾರು ಅಸಮಾಧಾನದಲ್ಲಿದ್ದಾರೆ? ಹಾಗೂ ಅವರ ಅಸಮಾಧಾನಕ್ಕೆ ಕಾರಣವೇನು? ಎಂದು ಕೇಳಿ ತಕ್ಷಣವೇ ಬಗೆಹರಿಸೋಣ ಎಂದು ಪ್ಲಾನ್​ ಮಾಡಲಾಗಿದೆ.ಯಾರು ಬಿಜೆಪಿಯನ್ನು ತೊರೆಯದ ಹಾಗೇ ನೋಡಿಕೊಳ್ಳಿ ಎಂದು ಸೂಚಿಸಿರುವ ಬಿ.ಎಸ್.ಯಡಿಯೂರಪ್ಪ, ಪ್ರಕಾಶ್ ಜಾವ್ಡೇಕರ್‌ಗೆ ರಾಜ್ಯ ರಾಜಕೀಯದ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಆಪರೇಷನ್ ಕಮಲ ಆಗಲೇಬೇಕೆಂದು ಪಟ್ಟು ಹಿಡಿದು, ಹೈಕಮಾಂಡ್​ ಮೇಲೆ ಒತ್ತಡ ಹಾಕುವಂತೆ ಬಿಎಸ್​ವೈ ಮನವಿ ಮಾಡಿದ್ದಾರೆ.ಸದ್ಯ ಕಾಂಗ್ರೆಸ್‌ನ 14, ಜೆಡಿಎಸ್‌ನ 3 ಹಾಗೂ ಪಕ್ಷೇತರರು 2 ಶಾಸಕರನ್ನು ಸಂಪರ್ಕಿಸಿದ್ದೇವೆ. ಎಲ್ಲರೂ ನಮ್ಮ ಜೊತೆಗೆ ಇದ್ದಾರೆ. ಹೈಕಮಾಂಡ್ ನಿಲುವು ಸ್ಪಷ್ಟಪಡಿಸಲೀ. ಮುಂದಿನದ್ದು ನಾನೇ ನೋಡಿಕೊಳ್ಳುತ್ತೇನೆ ಎಂದು ದೂರವಾಣಿ ಮೂಲಕ ಬಿಎಸ್​ವೈ ಕೇಂದ್ರ ಸಚಿವ ಜಾವ್ಡೇಕರ್ ಅವರಿಗೆ ತಿಳಿಸಿದ್ಧಾರೆ. ​

Trending Now