ನನಗೆ ನನ್ನ ಲವರ್‌ ಹುಡುಕಿ ಕೊಡಿ ಪ್ಲೀಸ್.., ಪ್ರೇಯಸಿಗಾಗಿ ಠಾಣೆ ಮೆಟ್ಟಿಲೇರಿದ ಪ್ರೇಮಿ!

webtech_news18
ಕಿರಣ್.ಕೆ.ಎನ್, ನ್ಯೂಸ್ 18 ಕನ್ನಡಬೆಂಗಳೂರು(ಸೆ.11): ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ರು. ಮದ್ವೆಯಾಗಬೇಕು ಅಂತ ನಿರ್ಧರಿಸಿದ್ರು. ಆದ್ರೆ ಅಷ್ಟರಲ್ಲೇ ಆ ಯುವತಿ ನಾಪತ್ತೆಯಾಗಿದ್ದಾಳೆ. ಯುವಕ ನನಗೆ ನನ್ನ ಲವರ್ ಬೇಕು ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಹಾಗಾದ್ರೆ, ಆ ಯುವತಿ ಎಲ್ಲಿದ್ದಾಳೆ? ಯಾರಾದ್ರೂ ಕಿಡ್ನ್ಯಾಪ್ ಮಾಡಿದ್ರಾ? ಇಲ್ಲಿದೆ ಸಂಪೂರ್ಣ ವಿವರ


ಸಾಗರ್ ಎಂಬಾತ ಸತ್ಯಾ ಎಂಬ ಯುವತಿಯನ್ನು ಲವ್ ಮಾಡುತ್ತಿದ್ದ. ಇನ್ನೇನು ಪ್ರೀತಿಸಿದವಳ ಜೊತೆ ಮದುವೆ ಆಗುವಷ್ಟರಲ್ಲಿ ಸತ್ಯಾ ನಾಪತ್ತೆಯಾಗಿದ್ದಾಳೆ. ತನ್ನ ಪ್ರೇಯಸಿಯನ್ನ ಆಕೆಯ ಪೋಷಕರೇ ಅಪಹರಿಸಿ, ಬಚ್ಚಿಟ್ಟಿದ್ದಾರೆ ಎನ್ನುವುದು ಪ್ರೇಮಿ ಸಾಗರ್ ಆರೋಪ.ಬೆಂಗಳೂರಿನ ಸಾಗರ್, ಶಾಲಾ ದಿನಗಳಿಂದ್ಲೇ ಸತ್ಯಾಳನ್ನ ಪ್ರೀತಿಸ್ತಿದ್ನಂತೆ. ಇತ್ತೀಚೆಗೆ ಪ್ರೀತಿ ವಿಷಯ ಸತ್ಯಾಳ ಮನೆಯಲ್ಲಿ ಗೊತ್ತಾಗಿ, ಗಲಾಟೆ ಆಗಿದೆ. ಜಾತಿ ಬೇರೆಬೇರೆ ಅಂತ ಮದುವೆಗೆ ನಿರಾಕರಿಸಿದ್ದಾರೆ. ಕೊನೆಗೆ ಮಗಳು ಆತ್ಮಹತ್ಯೆ ಯತ್ನ ಮಾಡಿದ ನಂತರ ಮದುವೆಗೆ ಒಪ್ಪಿಕೊಂಡಿದ್ದರಂತೆ.ಈಗ ತನ್ನ ಪ್ರೇಯಸಿ ಹುಡುಕಿಕೊಡಿ ಎಂದು ಸಾಗರ್, ಬಾಣಸವಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಪೊಲೀಸರು, ಸತ್ಯಾಳಿಗಾಗಿ ಹುಡುಕಾಡುತ್ತಿದ್ದಾರೆ.

Trending Now