ಕನ್ನಡದಲ್ಲಿ ಹೆಸರಾಂತ ಬರಹಗಾರರಿದ್ದರೂ ಸಿನಿಮಾ ವಿಷಯದಲ್ಲಿ ಮಡಿವಂತಿಕೆ ಬಿಡುತ್ತಿಲ್ಲ - ನಿರ್ದೇಶಕ ರಿಷಬ್ ಶೆಟ್ಟಿ

webtech_news18 , Advertorial
- ಮಂಜುನಾಥ್ ಯಡಳ್ಳಿ, ನ್ಯೂಸ್ 18 ಕನ್ನಡ ಧಾರವಾಡ  (ಸೆ.11) : ಕನ್ನಡದಲ್ಲಿ ಹೆಸರಾಂತ ಬರಹಗಾರರಿದ್ದರೂ ಸಹ ಸಿನಿಮಾ ವಿಷಯದಲ್ಲಿ ಮಡಿವಂತಿಕೆ ಬಿಡುತ್ತಿಲ್ಲ, ಒಳ್ಳೋಳ್ಳೆ ಸಾಹಿತಿಗಳು ಮಡಿವಂತಿಕೆ ಬಿಟ್ಟು ಸಿನಿಮಾಗಳಿಗಾಗಿ ಬರೆಯಬೇಕಿದೆ. ಮಲಯಾಳಂನಲ್ಲಿ ಮಾತ್ರ ದೊಡ್ಡ ದೊಡ್ಡ ಸಾಹಿತಿಗಳೆಲ್ಲ ಸಿನಿಮಾಗಳಿಗೆ ಬರೆಯುತ್ತಿದ್ದಾರೆ ಎಂದು ಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.


ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಮಾತನಾಡಿ, ಕನ್ನಡ ಶಾಲೆಗಳ‌ ಸ್ಥಿತಿಗತಿ‌ ತಿಳಿಸಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ‌ ಕಾಸರಗೋಡು ಸಿನಿಮಾ ಮಾಡಿದ್ದೇವೆ. ಆದರೆ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಅಂತಾ ಹೇಳಲು ನಾವು ಈ ಸಿನಿಮಾ ಮಾಡಿಲ್ಲ. ಆದ್ರೆ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಅನ್ನೋದು ನೋಡಿ ಈ ಸಿನಿಮಾ ಮಾಡಲಾಗಿದೆ ಎಂದರು.ನನಗೆ ಮಕ್ಕಳ ‌ಸಿನಿಮಾ ಮಾಡಬೇಕು ಅನ್ನೋದು ಸಹ ಆಸೆ ಆಗಿತ್ತು. ಹೀಗಾಗಿ ಎರಡನ್ನೂ ಸೇರಿಸಿ ತಿಳಿಹಾಸ್ಯ, ಬಾಲ್ಯವನ್ನು ಸೇರಿಸಿ ಸಿನಿಮಾ ಮಾಡಿದೆ. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕಿತ್ತು ಅನ್ನೋದು ಮಂಗಳೂರಿನ ಎಷ್ಟೋ ಜನರಿಗೆ ಗೊತ್ತಿಲ್ಲ. ಹೀಗಾಗಿ‌ ಕಾಸರಗೋಡು ಕೇರಳದಲ್ಲಿ ಉಳಿದ ಮೇಲೆ ಏನಾಯ್ತು ಅನ್ನೋದನ್ನು ತಿಳಿಸಲು ಕಾಸರಗೋಡನ್ನು ಕೇಂದ್ರವಾಗಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ ಎಂದು ಹೇಳಿದರುಅಲ್ಲದೇ ಚಿತ್ರಮಂದಿರದಲ್ಲಿ ಪ್ರದರ್ಶನ ಮುಗಿದ ಬಳಿಕ ಪ್ರತಿ ಹಳ್ಳಿಯ ಶಾಲೆಯಲ್ಲಿಯೂ‌ ಈ ಸಿನಿಮಾ ತೋರಿಸುವ ಉದ್ದೇಶ ಇದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ‌ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಭೇಟಿ ಮಾಡುತ್ತೆವೆ ಎಂದು ತಿಳಿಸಿದರು. 

Trending Now