ಹಣಕಾಸಿನ ವಿಷಯಕ್ಕೆ ಯುವಕನ ಬರ್ಬರ ಹತ್ಯೆ : ರುಂಡವನ್ನೇ ಕೊಂಡೊಯ್ದ ಖದೀಮರು

webtech_news18 , Advertorial
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡಕಲಬುರ್ಗಿ (ಸೆ.12) : ಯುವಕನೋರ್ವನ್ನು ಅಪಹರಿಸಿ, ನಂತರ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರ್ಗಿ ತಾಲೂಕಿನ ಆಲಗೂಡು ಗ್ರಾಮದ ಬಳಿ ನಡೆದಿದೆ. ಕೊಲೆಯಾದ ಯುವಕನನ್ನು ಕಲಬುರ್ಗಿಯ ಭವಾನಿ ನಗರದ ಸಿದ್ಧೋಜಿ ಬೋಸ್ಲೆಎಂದು ಗುರುತಿಸಲಾಗಿದೆ. ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯ ಭವಾನಿ ನಗರದಿಂದ ಸಿದ್ಧೋಜಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದರು.


ಅಪಹರಿಸಿದ ಯುವಕನನ್ನು ಔರಾದ್-ಆಲಗೂಡು ರಸ್ತೆ ಬದಿಯಲ್ಲಿ ಕತ್ತು ಕೊಯ್ತು ಭೀಕರವಾಗಿ ಹತ್ಯೆಗೈಯಲಾಗಿದೆ. ಕೊಲೆ ಮಾಡಿದ ನಂತರ ದುಷ್ಕರ್ಮಿಗಳು ರುಂಡವನ್ನು ತೆಗೆದುಕೊಂಡು ಹೋಗಿದ್ದು, ಸ್ಥಳದಲ್ಲಿ ಕೇವಲ ಮುಂಡ ಮಾತ್ರ ಬಿದ್ದಿದೆ. ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಸಿದ್ಧೋಜಿಯನ್ನು ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಅಪಹರಿಸಲಾಗಿತ್ತು ಎನ್ನಲಾಗಿದೆ.ಅಪಹರಿಸಿಕೊಂಡು ಹೋದ ದುಷ್ಕರ್ಮಿಗಳು ನಂತರ ಯುವಕನನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ. ಯುವಕನ ಗೆಳೆಯರೇ ಈ ಕೃತ್ಯ ಎಸಗಿರಬಹುದೆಂಬ ಅನುಮಾನಗಳೂ ಮೂಡಿವೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Trending Now