(LIVE) ಭಾರತ ಬಂದ್ ಮುಕ್ತಾಯ, ಭಾರೀ ಯಶಸ್ವಿ ಎಂದ ವಿರೋಧ ಪಕ್ಷಗಳು, ಗೂಂಡಾಗಿರಿಯ ಬಂದ್ ಎಂದ ಬಿಜೆಪಿ

webtech_news18
17:02 (IST)

ಕೇಂದ್ರ ಇಂಧನ ಸಚಿವರನ್ನು ಭೇಟಿಯಾದ ಸಿಎಂ ಕುಮಾರಸ್ವಾಮಿ

ಅನಿಲ ಭಾಗ್ಯ ಯೋಜನೆ ಕುರಿತು ಚರ್ಚಿಸುವ ಹಿನ್ನೆಲೆ

ಧರ್ಮೇಂದ್ರ ಪ್ರಧಾನ್ ಭೇಟಿಯಾದ ಸಿಎಂ ಕುಮಾರಸ್ವಾಮಿ

ಧರ್ಮೇಂದ್ರ ಪ್ರಧಾನ್, ಕೇಂದ್ರ ಪೆಟ್ರೋಲಿಯಂ ಸಚಿವ

ಪೆಟ್ರೋಲಿಯಂ ಸಚಿವಾಲಯದಲ್ಲಿ ನಡೆದ ಮಾತುಕತೆ

ಸಿಎಂ ಕುಮಾರಸ್ವಾಮಿಗೆ ಸಚಿವ ಹೆಚ್.ಡಿ.ರೇವಣ್ಣ ಸಾಥ್​

ಕೇಂದ್ರ ಇಂಧನ ಸಚಿವರನ್ನು ಭೇಟಿಯಾದ ಸಿಎಂ ಕುಮಾರಸ್ವಾಮಿ

ಅನಿಲ ಭಾಗ್ಯ ಯೋಜನೆ ಕುರಿತು ಚರ್ಚಿಸುವ ಹಿನ್ನೆಲೆ

ಧರ್ಮೇಂದ್ರ ಪ್ರಧಾನ್ ಭೇಟಿಯಾದ ಸಿಎಂ ಕುಮಾರಸ್ವಾಮಿ

ಧರ್ಮೇಂದ್ರ ಪ್ರಧಾನ್, ಕೇಂದ್ರ ಪೆಟ್ರೋಲಿಯಂ ಸಚಿವ

ಪೆಟ್ರೋಲಿಯಂ ಸಚಿವಾಲಯದಲ್ಲಿ ನಡೆದ ಮಾತುಕತೆ

ಸಿಎಂ ಕುಮಾರಸ್ವಾಮಿಗೆ ಸಚಿವ ಹೆಚ್.ಡಿ.ರೇವಣ್ಣ ಸಾಥ್​

17:00 (IST)

ಗೂಂಡಾಗಿರಿ ಮಾಡಿ ಭಾರತ ಬಂದ್​ ಮಾಡಿಸಿದ್ದಾರೆ

ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆರೋಪ

ಕಾಂಗ್ರೆಸ್​ನವರು ಬಲಾತ್ಕಾರದ ಬಂದ್​ ಮಾಡಿಸಿದ್ದಾರೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆ ಆಗಬೇಕಿದೆ

ರಾಜ್ಯದ ಜನ ವಾಸ್ತವ ಸ್ಥಿತಿ ತಿಳಿಯಲೆಂದು ಮನವಿ ಮಾಡ್ತೀನಿ

ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿಕೆ 

16:59 (IST)

ರಾಜ್ಯದಲ್ಲಿ ಭಾರತ ಬಂದ್​ ಸಂಪೂರ್ಣ ವಿಫಲವಾಗಿದೆ

ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಇದು ಸರ್ಕಾರಿ ಪ್ರಾಯೋಜಿತ ಬಂದ್- ಕೋಟ ಶ್ರೀನಿವಾಸ ಪೂಜಾರಿ

ಬಂದ್ ಹೆಸರಲ್ಲಿ ಕಾಂಗ್ರೆಸ್ ಗಲ್ಲಿ ಗಲ್ಲಿಗಳಲ್ಲಿ ಹಿಂಸಾಚಾರ ನಡೆಸಿದೆ

ಬಂಟ್ವಾಳದಲ್ಲಿ ಬಿಜೆಪಿ ಶಾಸಕರಿಗೆ ಕಲ್ಲು ತೂರಾಟ ನಡೆಸಲಾಗಿದೆ

ಮೈತ್ರಿ ಸರ್ಕಾರ, ಕಾರ್ಯಕರ್ತರ ಕೈಗೆ ದೊಣ್ಣೆ ಕೊಟ್ಟು ಬೀದಿಗಿಳಿಸಿದೆ

ಬಂದ್​ನಿಂದಾಗಿ ರಾಜ್ಯಾದ್ಯಂತ ಕಾಂಗ್ರೆಸ್​ನಿಂದ ಗೂಂಡಾಗಿರಿ ನಡೆದಿದೆ

ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪ

ರಾಜ್ಯದಲ್ಲಿ ಭಾರತ ಬಂದ್​ ಸಂಪೂರ್ಣ ವಿಫಲವಾಗಿದೆ

ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಇದು ಸರ್ಕಾರಿ ಪ್ರಾಯೋಜಿತ ಬಂದ್- ಕೋಟ ಶ್ರೀನಿವಾಸ ಪೂಜಾರಿ

ಬಂದ್ ಹೆಸರಲ್ಲಿ ಕಾಂಗ್ರೆಸ್ ಗಲ್ಲಿ ಗಲ್ಲಿಗಳಲ್ಲಿ ಹಿಂಸಾಚಾರ ನಡೆಸಿದೆ

ಬಂಟ್ವಾಳದಲ್ಲಿ ಬಿಜೆಪಿ ಶಾಸಕರಿಗೆ ಕಲ್ಲು ತೂರಾಟ ನಡೆಸಲಾಗಿದೆ

ಮೈತ್ರಿ ಸರ್ಕಾರ, ಕಾರ್ಯಕರ್ತರ ಕೈಗೆ ದೊಣ್ಣೆ ಕೊಟ್ಟು ಬೀದಿಗಿಳಿಸಿದೆ

ಬಂದ್​ನಿಂದಾಗಿ ರಾಜ್ಯಾದ್ಯಂತ ಕಾಂಗ್ರೆಸ್​ನಿಂದ ಗೂಂಡಾಗಿರಿ ನಡೆದಿದೆ

ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪ

16:56 (IST)

16:55 (IST)

ಸಹಜ ಸ್ಥಿತಿಯತ್ತ ಸಿಲಿಕಾನ್ ಸಿಟಿ ಬೆಂಗಳೂರು

ಬೆಳಗ್ಗೆಯಿಂದ ಬಂದ್ ಆಗಿದ್ದ ಬಸ್ ಸಂಚಾರ ಪ್ರಾರಂಭ

ಕೆಂಪೇಗೌಡ ಬಸ್ ನಿಲ್ದಾಣದಿಂದ ಬಿಎಂಟಿಸಿ ಬಸ್ ಸಂಚಾರ ಪ್ರಾರಂಭ

ಎಂದಿನಂತೆ ಬಿಎಂಟಿಸಿ ಬಸ್ ಗಳು ನಗರದ ವಿವಿಧೆಡೆ ಸಂಚಾರ ಆರಂಭ

16:41 (IST)

ಕಳೆದ ವರ್ಷ ಬಂದ್​ಗಳಾದ ವೇಳೆ ಸಂಸ್ಥೆಗೆ 100 ಕೋಟಿ ನಷ್ಟ

1 ದಿನ‌ ಸಾರಿಗೆ ಸಂಚಾರ ಬಂದ್ ಆದ್ರೆ ಸಂಸ್ಥೆಗೆ 16 ಕೋಟಿ ನಷ್ಟ

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ

ಸಂಸ್ಥೆಗೆ ಟಿಕೇಟ್ ರೂಪದಲ್ಲಿ ಬರುತ್ತಿದ್ದ 15 ರಿಂದ 16 ಕೋಟಿ ರೂ, ನಷ್ಟ

ವರ್ಷದಲ್ಲಿ 4 ಬಂದ್‌ ಆಚರಿಸಿದ್ರೆ 100 ಕೋಟಿ ಸಂಸ್ಥೆಗೆ ಹೊರೆ ಬೀಳುತ್ತೆ

ತೈಲ ಬೆಲೆ ಏರಿಕೆಯಿಂದ ಸಂಸ್ಥೆಗೆ ಹೆಚ್ಚಿನ‌ ಹೊರೆ ಬೀಳ್ತಿದೆ

ಇದನ್ನ ಸರಿದೂಗಿಸಲು ಬಸ್ ಟಿಕೆಟ್​ ದರ ಏರಿಕೆ ಅನಿವಾರ್ಯ 

ಮುಂದಿನವಾರ ಬಸ್ ಟಿಕೆಟ್​ ದರ ಏರಿಕೆಯಾಗಲಿದೆ

ಈ ಬಗ್ಗೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ‌

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ

16:40 (IST)

ದೇಶದೆಲ್ಲೆಡೆ ಇಂದು ನಡೆದ ಭಾರತ ಬಂದ್​ ಅಂತ್ಯವಾಗಿದ್ದ, ಸಹಜ ಸ್ಥಿತಿಯತ್ತ ನಗರ ಮರಳುತ್ತಿದೆ. ಇನ್ನು ಬಂದ್​ ಯಶಸ್ವಿಯಾದ ಹಿನ್ನಲೆ ಜನರಿಗೆ ಕಾಂಗ್ರೆಸ್​ ಧನ್ಯವಾದವನ್ನು ತಿಳಿಸಿದೆ. ಬಂದ್​ಗೆ ಬೆಂಬಲಿಸಿದ 21 ರಾಜಕೀಯ ಪಕ್ಷಗಳು ಹಾಗೂ ದೇಶದ ಜನರಿಗೆ ಕೃತಜ್ಞತೆಗಳು ಎಂದು ಕಾಂಗ್ರೆಸ್​ ನಾಯಕ ರಂದೀಪ್​ ಸುರ್ಜೆವಾಲ ತಿಳಿಸಿದ್ದಾರೆ.

16:28 (IST)

ಮೈಸೂರು ನಗರ, ಗ್ರಾಮಾಂತರ ಸಾರಿಗೆಗೆ 1.25 ಕೋಟಿ ನಷ್ಟ

ಒಂದು ದಿನಕ್ಕೆ ಗ್ರಾಮಾಂತರ ಸಾರಿಗೆಯಿಂದ 1 ಕೋಟಿ ಆದಾಯ 

ಗ್ರಾಮಾಂತರ ಸಾರಿಗೆಯ ಒಂದು ದಿನದ ಲಾಭ ನಷ್ಟವಾಗಿದೆ

ಮೈಸೂರು ನಗರ ಸಾರಿಗೆ 25 ಲಕ್ಷ ರೂಪಾಯಿ ನಷ್ಟವಾಗಿದೆ

ಈ ಕ್ಷಣದಿಂದಲೇ ಬಸ್ ಸಂಚಾರ ಪುನರಾರಂಭ ಮಾಡಲಾಗುವುದು

ನಗರ ಮತ್ತು ಗ್ರಾಮೀಣ ವಿಭಾಗ ನಿಯಂತ್ರಣಾಧಿಕಾರಿಗಳಿಂದ ಮಾಹಿತಿ

16:27 (IST)

ಮೈಸೂರಿನಲ್ಲಿ ಆರಂಭವಾದ ಬಸ್ ಸಂಚಾರ

ಮೈಸೂರು ನಗರ ಸಾರಿಗೆ ಬಸ್​ಗಳ ಸಂಚಾರ ಆರಂಭ

ಮೈಸೂರು ನಗರ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿರುವ ಬಸ್​ಗಳು

ಬಂದ್ ಬಿಸಿ ಕಡಿಮೆಯಾಗುತ್ತಲೆ ಸೇವೆ ಆರಂಭಿಸಿದ ಬಸ್‌ಗಳು

16:27 (IST)

ಮೈಸೂರು-ಬೆಂಗಳೂರು ಸಾರಿಗೆ ಬಸ್ ಸಂಚಾರ ಆರಂಭ

ಮೈಸೂರಿನಿಂದ ಹೊರ ರಾಜ್ಯಗಳಿಗೂ ಬಸ್ ಸೇವೆ ಆರಂಭ

ಇಂದು ಬೆಳಗ್ಗೆಯಿಂದ ಬಂದ್ ಆಗಿದ್ದ ಗ್ರಾಮಾಂತರ ಬಸ್ ಸೇವೆ

ಬಂದ್ ಬಿಸಿ ಕಡಿಮೆಯಾಗುತ್ತಲೇ ಆರಂಭವಾದ ಬಸ್ ಸಂಚಾರ

16:26 (IST)

ಬಂದ್​, ಪ್ರತಿಭಟನೆ ಬಳಿಕ ಸಹಜ ಸ್ಥಿತಿಯತ್ತ ತುಮಕೂರು ನಗರ

ಬಸ್, ಆಟೋ ಸಂಚಾರ ಶುರು, ಅಂಗಡಿಮುಂಗಟ್ಟು ಓಪನ್

ತುಮಕೂರಿನಲ್ಲಿ ಭಾರತ ಬಂದ್​ ಭಾಗಶಃ ಯಶಸ್ವಿ

16:23 (IST)

ಬೆಂಗಳೂರಿನ ಕೆಜಿ ರಸ್ತೆಯಲ್ಲಿರೋ ಚಿತ್ರಮಂದಿರಗಳು ಓಪನ್

ಚಿತ್ರಮಂದಿರಗಳತ್ತ ಆಗಮಿಸುತ್ತಿರುವ ಪ್ರೇಕ್ಷಕರು

ಬಂದ್ ನಿಂದ ಮನೆಯಲ್ಲಿ ಕೂತಿದ್ದ ಪ್ರೇಕ್ಷಕರು ಥಿಯೇಟರ್ ನತ್ತ

ಬೆಂಗಳೂರಿನಲ್ಲಿ ತಣ್ಣಗಾದ ಬಂದ್ ಬಿಸಿ

16:23 (IST)

ಮಂಗಳೂರಿನಲ್ಲಿ ಪ್ರಾರಂಭಗೊಂಡ ಕೆ‌ಎಸ್‌ಆರ್‌ಟಿಸಿ ಸೇವೆ

ಪೊಲೀಸರಿಂದ ಕ್ಲಿಯರೆನ್ಸ್ ದೊರೆತ ಬಳಿಕ ಬಸ್‌ ಸಂಚಾರ ಆರಂಭ

ಜಿಲ್ಲೆ ಹಾಗೂ ಹೊರಜಿಲ್ಲೆಗಳಿಗೆ ಪ್ರಾರಂಭವಾದ ಬಸ್ ಸೇವೆ

ಬೆಂಗಳೂರು, ಅಂಕೋಲ,ಹುಬ್ಬಳ್ಳಿ ಮುಂತಾದೆಡೆ ಬಸ್ ಸೇವೆ ಪ್ರಾರಂಭ

ಸಂಜೆ 4 ಗಂಟೆಯ ಮುನ್ನವೇ ಪ್ರಾರಂಭವಾದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ

ಸಂಜೆ 5.30ರ ಬಳಿಕ ಬೆರಳೆಣಿಕೆಯ ಖಾಸಗಿ ಬಸ್ ಸಂಚಾರ

16:22 (IST)

ಸಹಜಸ್ಥಿತಿಯತ್ತ ಮರಳುತ್ತಿರುವ ಹಾಸನ ಜಿಲ್ಲೆ

ಹಾಸನ ಜಿಲ್ಲೆಯ ಎಲ್ಲೆಡೆ ಬಸ್ ಸಂಚಾರ ಪ್ರಾರಂಭ

ವ್ಯಾಪಾರ ವಹಿವಾಟು ಆರಂಭ, ರಸ್ತೆಗಿಳಿದ ಆಟೋ, ಟ್ಯಾಕ್ಸಿ

16:22 (IST)

ನೆಲಮಂಗಲದಲ್ಲಿ ಬಸ್ ಸಂಚಾರ ಪುನರಾರಂಭ

ಬಂದ್ ಮುಗಿದ ಬಳಿಕ ಎಂದಿನಂತೆ ಸಾರಿಗೆ ಸಂಚಾರ ಆರಂಭ

ನೆಲಮಂಗಲ ಬಸ್‌ ನಿಲ್ದಾಣಕ್ಕೆ ಆಗಮಿಸುತ್ತಿರುವ ಬಸ್‌ಗಳು

ನೆಲಮಂಗಲದಿಂದ ಬೆಂಗಳೂರಿಗೆ ಸಂಚಾರ ಆರಂಭ

ಬೆಂಗಳೂರು(ಸೆ.10): ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಇಂದು ಭಾರತ್ ಬಂದ್​ಗೆ ಕರೆ ನೀಡಿವೆ. ಬಂದ್​ಗೆ ಹಲವು ರಾಜ್ಯಗಳು ಬೆಂಬಲ ವ್ಯಕ್ತಪಡಿಸಿವೆ. ರಾಜ್ಯದಲ್ಲೂ ಬಂದ್​ಗೆ ವ್ಯಾಪಲ ಬೆಂಬಲ ವ್ಯಕ್ತವಾಗಿದ್ದು, ಸೋಮವಾರ ಬೆಳಗ್ಗೆಯಿಂದಲೇ ಕೆಎಸ್​ಆರ್​ಟಿಸಿ, ಬಿಎಂಟಿಸಿ, ಆಟೋ ರಿಕ್ಷಾಗಳು ಸೇರಿದಂತೆ ಖಾಸಗಿ ಟ್ಯಾಕ್ಸಿಗಳು ರಸ್ತೆಗೆ ಇಳಿದಿಲ್ಲ. ಬಸ್​ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಇನ್ನು ದಿನನಿತ್ಯದ ವ್ಯವಹಾರ ಎಂದಿನಂತೆ ಸಾಗಿದೆ.ಬೆಳಿಗ್ಗೆ 6 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಬಂದ್ ನಡೆಯಲಿದೆ. ಬಂದ್​ಗೆ ಕರೆ ನೀಡಿದ್ದು ಕಾಂಗ್ರೆಸ್ ಮತ್ತು ಇನ್ನಿತರ ವಿರೋಧಪಕ್ಷಗಳೇ ಆಗಿರುವುದರಿಂದ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಬಂದ್ ಬಿಸಿ ಹೆಚ್ಚಾಗುವ ಸಾಧ್ಯತೆ ಇದ್ದು, ಕರ್ನಾಟಕಕ್ಕೂ ಆ ಬಿಸಿ ತಟ್ಟಲಿದೆ. ಬಿಎಂಟಿಸಿ ಬಸ್, ಆಟೋ, ಟ್ಯಾಕ್ಸಿ ಸಂಚಾರ ಸ್ಥಗಿತಗೊಳ್ಳಲಿದ್ದು, ಶಾಲೆ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.

ಬಿಜೆಪಿ ಬೆಂಬಲಿಗರು ಬಂದ್ ವಿಫಲಗೊಳಿಸುವ ಯತ್ನ ಕೂಡ ನಡೆಸಿದ್ದು, ಎಂದಿಗಿಂತ ಒಂದುಗಂಟೆ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವಂತೆ ಪ್ರಚಾರ ನಡೆಸಿದ್ದಾರೆ. ‘
ಗೋವಾದಲ್ಲಿ ಕಾಂಗ್ರೆಸ್ ಸಮಿತಿ ಬಂದ್ ಯಶಸ್ವಿಯಾಗುವಂತೆ ನೋಡಿಕೊಳ್ಳಲು ಮುಂದಾಗಿದ್ದು,. ಮಹಾರಾಷ್ಟ್ರದಲ್ಲಿ ಶಿವಸೇನೆ, ತಮಿಳುನಾಡಿನಲ್ಲಿ ಡಿಎಂಕೆ, ಹರ್ಯಾಣದಲ್ಲಿ ಐಎನ್ಎಲ್ಡಿ ಬಂದ್ಗೆ ಬೆಂಬಲಿಸಿದ್ದಾರೆ.ಇನ್ನು ಬಂದ್ ಬಿಸಿ ತಾಗಿದ ಹಿನ್ನಲೆ ರಾಜಸ್ಥಾನ ಮುಖ್ಯಮಂತ್ರಿ ಕಳೆದ ರಾತ್ರಿ ಪೆಟ್ರೋಲ್ ಮೇಲಿನ ಶೇ 4ರಷ್ಟು ವಾಟ್ ಇಳಿಸಿ ಆದೇಶ ಹೊರಡಿಸಿದೆ.ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬಂದ್ ಜನರಿಗೆ ಯಾವ ರೀತಿ ಪರಿಣಾಮ ಬೀರಿದೆ ಎಂಬ ಕುರಿತ ಕ್ಷಣ ಕ್ಷಣದ ಮಾಹಿತಿ ನಿಮ್ಮ ನ್ಯೂಸ್ 18 ಕನ್ನಡದಲ್ಲಿ

Trending Now