ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆ; ಗಣೇಶ ಹಬ್ಬದ ಬಳಿಕ ಮೈತ್ರಿ ಸರ್ಕಾರಕ್ಕೆ ಕುತ್ತು?

webtech_news18 , Advertorial
ನ್ಯೂಸ್ 18 ಕನ್ನಡಬೆಂಗಳೂರು (ಸೆ.12): ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆ ಆಗುವ ಸಾಧ್ಯತೆ ಇದೆ. 16ರ ನಂತರ ರಾಜ್ಯ ಬಿಜೆಪಿ ಶಾಸಕರ ಸಭೆ ನಡೆಯುವ ಸಾಧ್ಯತೆ ಇದ್ದು, ಗಣೇಶ ಹಬ್ಬದ ನಂತರ ಮೈತ್ರಿ ಸರ್ಕಾರಕ್ಕೆ ಕುತ್ತು ಬರುವ ಸಾಧ್ಯತೆಗಳು ಗೋಚರಿಸುತ್ತಿವೆ.


ಗಣೇಶ ಹಬ್ಬದ ನಂತರ ಎಲ್ಲ ಬಿಜೆಪಿ ಶಾಸಕರೂ ಬೆಂಗಳೂರಿನಲ್ಲಿ ಇರಲು ಯಡಿಯೂರಪ್ಪ ಎಲ್ಲ ಶಾಸಕರಿಗೆ ಸೂಚನೆ ನೀಡಿದ್ದಾರೆ. ಅದರಂತೆ 16ರ ನಂತರ ಬಿಜೆಪಿ ಶಾಸಕರ ಸಭೆ ನಡೆಯಲಿದ್ದು, ಕಾಂಗ್ರೆಸ್​ ಅಸಮಾಧಾನಿಕ ಶಾಸಕರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನದ ಭಾಗವಾಗಿ ಈ ಸಭೆ ಅತ್ಯಂತ ಮಹತ್ವದ್ದಾಗಿದೆ.ವಿದೇಶ ಪ್ರವಾಸದಲ್ಲಿ ಇರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.15 ರ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರು ಬಂದ ಬಳಿಕ ಜಾರಕಿಹೊಳಿ ಬ್ರದರ್ಸ್ ಜೊತೆ ಸಭೆ ನಡೆಸಲಿದ್ದಾರೆದಿನಕ್ಕೊಂದು ಹೇಳಿಕೆ ನೀಡಿ, ಗೊಂದಲ ಸೃಷ್ಟಿಸುತ್ತಿರುವ ಜಾರಕಿಹೊಳಿ ಬ್ರದರ್ಸ್​ ಸಿದ್ದರಾಮಯ್ಯ ಅವರ ಅಂಕಿತಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್ ರೆಬಲ್ಸ್​ ಶಾಸಕರೊಂದಿಗೆ ಸಿದ್ದರಾಮಯ್ಯ ನಡೆಸಲಿರುವ ಸಭೆ ಮಹತ್ವದ್ದಾಗಿದ್ದು, ಅಂದು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮೈತ್ರಿ ಸರ್ಕಾರದ ಅಸ್ತಿತ್ವ ನಿಂತಿದೆ.ಮತ್ತೊಂದು ಕಡೆ ಕಾಂಗ್ರೆಸ್​ ಅಸಮಾಧಾನಿತ ಶಾಸಕರ ಜೊತೆ ಯಡಿಯೂರಪ್ಪ, ಶ್ರೀರಾಮುಲು ನಿರಂತರ ಸಂಪರ್ಕದಲ್ಲಿ ಇದ್ದಾರೆ. ಮೇಲ್ನೋಟಕ್ಕೆ ಏನೂ ಇಲ್ಲ ಎನ್ನುತ್ತಲೇ‌ ಸತ್ಯ ಬಚ್ಚಿಡುತ್ತಿದ್ದಾರೆ. ಮಂಗಳವಾರ ಮತ್ತು ಬುಧವಾರ ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಆಪ್ತರ ಸಭೆ ನಡೆಸಿದ್ದು, ಎಚ್ಚರಿಕೆಯ ಹೆಜ್ಜೆ ಇಡುವ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನದ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಬಹಿರಂಗವಾಗಿ ಕಾಂಗ್ರೆಸ್​ ಅಸಮಾಧಾನಿತ ಶಾಸಕರ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ಧರಂ ಸಿಂಗ್ ಸರ್ಕಾರ ಇದ್ದಾಗ ಸೈಲೆಂಟಾಗಿ ಆಪರೇಷನ್‌ ನಡೆಸಿದ ರೀತಿಯಲ್ಲೇ ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಎಲ್ಲ ಶಾಸಕರನ್ನು ಯಡಿಯೂರಪ್ಪ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಸೆ.16 ರ ಬಳಿಕ ಸಭೆ ನಡೆಸಿ, ಬಿಜೆಪಿ ನಾಯಕರನ್ನು ರೆಸಾರ್ಟ್​ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ.ಸೋಮವಾರದ ನಂತರ ಕಾಂಗ್ರೆಸ್ ಶಾಸಕರ ರಾಜೀನಾಮೆ?ಮೈತ್ರಿ ಸರ್ಕಾರ ಬೀಳಿಸಿ, ಹಿಂಬಾಗಿಲ ಮೂಲಕ ಅಧಿಕಾರ ಹಿಡಿದರು ಎಂಬ ಅಪಖ್ಯಾತಿ ಸುತ್ತಿಕೊಳ್ಳುವ ಬದಲು ಸೂಕ್ಷ್ಮವಾಗಿ ಪರಿಸ್ಥಿತಿ ನಿಭಾಯಿಸಿ, ಸರ್ಕಾರ ಕೆಡವಲು ಬಿಜೆಪಿ ಮಾಸ್ಟರ್​ ಪ್ಲಾನ್​ ರೂಪಿಸುತ್ತಿದೆ. ಸೋಮವಾರದ ನಂತರ ಕಾಂಗ್ರೆಸ್ ಅಸಮಾಧಾನಿತ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ನಂತರ ಬಿಜೆಪಿ ಅಸಲಿ ಆಟ ಶುರುವಾಗಲಿದೆ ಎನ್ನಲಾಗಿದೆ.ರಮೇಶ್ ಜಾರಕಿಹೊಳಿಗೆ ಡಿಸಿಎಂ ಹಾಗೂ ಉಳಿದ ಶಾಸಕರಿಗೆ ಮಂತ್ರಿಗಿರಿ ಆಫರ್ ಮಾಡಲಾಗಿದ್ದು, ಈ ವಿಚಾರವನ್ನು ಯಡಿಯೂರಪ್ಪ ಅವರು ಪಕ್ಷದ ಶಾಸಕರ ಬಳಿ ಮೊದಲೇ ಹೇಳಿ ವಿಶ್ವಾಸ ಗಳಿಸುತ್ತಿದ್ದಾರೆ.

Trending Now