ನಟ ರೆಬೆಲ್​ ಸ್ಟಾರ್​ ಅಂಬರೀಶ್​ ಅಸ್ವಸ್ಥ; ವಿಕ್ರಂ ಆಸ್ಪತ್ರೆಗೆ ದಾಖಲು​

webtech_news18 , Advertorial
ರಕ್ಷಾ ಜಾಸ್ಮೀನ್​,  ನ್ಯೂಸ್​ 18 ಕನ್ನಡಬೆಂಗಳೂರು (ಸೆ.08): ರೆಬೆಲ್​​ಸ್ಟಾರ್​ ಅಂಬರೀಶ್​ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಸ್ವಸ್ಥರಾಗಿದ್ದು, ಎದೆನೋವು ಕಾಣಿಸಿಕೊಂಡ ಹಿನ್ನಲೆ ಅವರನ್ನು ತಕ್ಷಣಕ್ಕೆ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ.


ಕೆಸಿಸಿ ಪಂದ್ಯ ವೀಕ್ಷಣೆಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ ನಟ ಅಂಬರೀಶ್​ ಬೆಳಗ್ಗೆಯಿಂದ ಕ್ರೀಡಾಂಗಣದಲ್ಲಿ ಓಡಾಡಿಕೊಂಡಿದ್ದರು. ಬೆಳಗ್ಗೆಯಿಂದ ಕ್ರೀಡಾಂಗಣದ ತುಂಬ ಓಡಾಡಿಕೊಂಡಿದ್ದ ಅವರು ಆಯಾಸಗಗೊಂಡಿದ್ದಾರೆ,ಚೇರ್​ನಲ್ಲಿ ಕುಳಿತಿದ್ದ ನಟ ಅಂಬರೀಶ್ ಎದ್ದು ನಡೆಯುವಾಗ ಆಯಾಸ ಉಂಟಾಗಿದೆ. ಈ ವೇಳೆ ಎದೆನೋವು, ಕಾಲು ನೋವು ಕೂಡ ಕಾಣಿಸಿಕೊಂಡಿದ್ದು, ಅವರನ್ನು ತಕ್ಷಣಕ್ಕೆ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ,ಕ್ರೀಡಾಂಗಣದಲ್ಲಿ ಬೆಳಗ್ಗೆಯಿಂದ ಹೆಚ್ಚು ಓಡಾಡಿದ್ದರಿಂದ ಅಂಬರೀಶ್​ ಅಸ್ವಸ್ಥರಾಗಿದ್ದಾರೆ ಎಂದು ಅವರ ಜೊತೆಯಲ್ಲಿದ್ದ ರಾಕ್ಲೈನ್ ವೆಂಕಟೇಶ್ ತಿಳಿಸಿದ್ದಾರೆ.ಈ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅಂಬರೀಶ್​ ಅವರು ಇದೇ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಸಿಂಗಪೂರ್​ಗೆ ಕರೆದೊಯ್ಯಲಾಗಿತ್ತು.

Trending Now