ಬೈಲುಕುಪ್ಪೆಯ ಶುಂಠಿ ಫಾರ್ಮ್​ನಲ್ಲಿ ಕೆಲಸ ಮಾಡುತ್ತಿದ್ದ 14 ಜೀತ ಕಾರ್ಮಿಕರ ರಕ್ಷಣೆ

webtech_news18 , Advertorial
ನ್ಯೂಸ್​ 18 ಕನ್ನಡಕೊಡಗು (ಸೆ.9): ಜಿಲ್ಲೆಯ ಪಿರಿಯಾಪಟ್ಟಣದ ಬೈಲುಕುಪ್ಪೆ ಟಿಬೆಟಿಯನ್‌  ಕಾಲೋನಿಯ 10ನೇ ಕ್ಯಾಂಪ್​ನಲ್ಲಿ ದುಡಿಯುತ್ತಿದ್ದ 14 ಜೀತ ಕಾರ್ಮಿಕರನ್ನು ಪೊಲೀಸರು ರಕ್ಷಿಸಿದ್ದಾರೆ


ಅರಸೀಕೆರೆ ಮೂಲದ ಮೂವರು ವ್ಯಕ್ತಿಗಳು ಲೀಸ್‌ಗೆ ಪಡೆದು  25 ಎಕರೆಗೂ ಅಧಿಕ ಜಮೀನಲ್ಲಿ ಶುಂಠಿ ಬೆಳೆಯುತ್ತಿದ್ದರು. ಈ ಜಮೀನಿನ ಕೆಲಸಕ್ಕೆ  ಹುಬ್ಬಳಿ, ಬಳ್ಳಾರಿ, ದಾವಣಗೆರೆ, ಮತ್ತಿತರ ಕಡೆಗಳಿಂದ ಕೂಲಿ ಕಾರ್ಮಿಕರನ್ನು ಕರೆ ತಂದಿದ್ದರು.ದಿನಕ್ಕೆ 350 ರೂ. ಕೂಲಿ ನೀಡುತ್ತೇವೆ ಎಂದು ನಂಬಿಸಿ ಅವರನ್ನು ಬಿಡುವಿಲ್ಲದಂತೆ ದುಡಿಸಿಕೊಳ್ಳುತ್ತಿದ್ದರು.   ಐದಾರು ತಿಂಗಳಿನಿಂದ ನಿರಂತರವಾಗಿ ಕೆಲಸ ಮಾಡಿಸಿಕೊಂಡು ವೇತನ, ರಜೆ ನೀಡದೆ, ಹೊರಗೆ ಹೋಗಲೂ ಬಿಡದೆ ಕೂಡಿ ಹಾಕಿದ್ದರು. ಇಲ್ಲಿ ಕೆಲಸ ಮಾಡುತ್ತಿದ್ದ ಬಿಕಾಂ ಪದವೀಧರ ಕಾರ್ಮಿಕರೊಬ್ಬರು ತಪ್ಪಿಸಿಕೊಂಡು ಹೋಗಿ ಈ ಕುರಿತು ಕುಟುಂಬಸ್ಥರಿಗೆ, ಪೊಲೀಸರಿಗೆ ಮಾಹಿತಿ ನೀಡಿದರು. ಈತ ನೀಡಿದ ಸುಳಿವಿನ ಮೇರೆಗೆ ತಾಲೂಕು ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ ಕಾರ್ಮಿಕರನ್ನು ಬಿಡುಗಡೆ ಮಾಡಿಸಿದ್ದಾರೆ.ಶುಂಠಿ ಫಾರ್ಮ್​ನ ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಉಮೇಶ್‌ ಎಂಬವರನ್ನು ಬಂಧಿಸಲಾಗಿದೆ. ನಿರಂಜನ್‌ಮತ್ತು ಶಂಕರ್‌ ಎಂಬ ಇನ್ನಿಬ್ಬರಿಗಾಗಿ ಶೋಧ ಮುಂದುವರಿದಿದೆ.ಗದಗ ಜಿಲ್ಲೆಯ ರಘು, ಫಕೀರಪ್ಪ, ಚಂದ್ರಶೇಖರ್‌, ಯಲ್ಲಪ್ಪ, ಧಾರವಾಡ ಜಿಲ್ಲೆಯ ಮಹೇಂದ್ರ, ಮಹೇಶ್‌, ಲಕ್ಷಣ, ರಾಜಯಚೂರು ಜಿಲ್ಲೆಯ ಬಸವರಾಜ ಅಲಿಯಾಸ್‌ ಸಣ್ಣಬಸವ, ಹಾವೇರಿ ಜಿಲ್ಲೆಯ ಶಾಂತಪ್ಪ, ಕೊಪ್ಪಳ ಜಿಲ್ಲೆ ಯ ಹನುಮಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜಣ್ಣ ಅಲಿಯಾಸ್‌ ಸಿದ್ದೇಶ್‌, ಮಂಡ್ಯ ಜಿಲ್ಲೆಯ ಮಹಮ್ಮದ್‌ ಅಫ್ತಬ್‌, ದಾವಣಗೆರೆ ಜಿಲ್ಲೆಯ ಕರಿಬಸಪ್ಪ, ಅರ್ಜುನ್‌ ಅಲಿಯಾ ನಾಗಾರ್ಜುನ ಬಂಧಮುಕ್ತಗೊಂಡವರು. ದುಡಿಯಲು ಬಂದು ಜೀತಕ್ಕೆ ಸಿಲುಕಿದ ಕಾರ್ಮಿಕರಲ್ಲಿ ಕೃಷಿ ಅಧಿಕಾರಿಯೊಬ್ಬರ ಪುತ್ರ ಮತ್ತು ಪೊಲೀಸ್‌ ಕಾನ್ಸ್‌ಟೇಬಲ್‌ ಒಬ್ಬರ ತಂದೆಯೂ ಸೇರಿದ್ದಾರೆ.

Trending Now