ಯುಎಸ್ ಓಪನ್ ಟೆನಿಸ್: 3ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಜೊಕೊವಿಕ್
webtech_news18 , Advertorial
ನ್ಯೂಸ್ 18 ಕನ್ನಡಸರ್ಬಿಯದ ನೊವಾಕ್ ಜೊಕೊವಿಕ್ ಅವರು ಅಮೆರಿಕ ಓಪನ್ ಟೆನಿಸ್ ಕಿರೀಟವನ್ನು 3ನೇ ಗೆದ್ದು ಬೀಗಿದ್ದಾರೆ. ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಅವರನ್ನು 6-3, 7-6, 6-3 ನೇರ ಸೆಟ್ಗಳಿಂದ ಸದೆಬಡಿದು ಜಯ ಸಾಧಿಸಿದ್ದಾರೆ.
ಅಂತಿಮ ಕದನದಲ್ಲಿ 6-3 ಅಂತರದಲ್ಲಿ ಮೊದಲ ಸೆಟ್ ಗೆದ್ದ ಜೊಕೊವಿಕ್, 2ನೇ ಸೆಟ್ನಲ್ಲಿ ಕಠಿಣ ಸವಾಲು ಎದುರಿಸಿದರು. ಬಳಿಕ 3ನೇ ಸೆಟ್ನಲ್ಲಿ ಅದ್ಭುತ ಆಟ ಪ್ರದರ್ಶಿಸಿ ಜೊಕೊವಿಕ್ ಅವರು ಎದುರಾಳಿಯನ್ನು 6-3 ಅಂತರದಲ್ಲಿ ಸೋಲಿಸಿ ಗೆದ್ದುಕೊಂಡರು.ಇದರೊಂದಿಗೆ 14ನೇ ಗ್ರ್ಯಾಂಡ್ಸ್ಲಾಂ ಪ್ರಶಸ್ತಿಯನ್ನು ಜೊಕೊವಿಕ್ ಮುಡಿಗೇರಿಸಿಕೊಂಡಿದ್ದು, ಅತಿ ಹೆಚ್ಚು ಗ್ರ್ಯಾಂಡ್ಸ್ಲಾಂ ಸಿಂಗಲ್ಸ್ ಗೆದ್ದ ಆಟಗಾರರ ಸಾಲಿನಲ್ಲಿ ಇವರು 3ನೇ ಸ್ಥಾನಕ್ಕೇರಿದ್ದಾರೆ.