ಪೆಟ್ರೋಲ್ ಬಂಕ್ ನಲ್ಲಿ ಧೋನಿ ಕುಳಿತಿರುವ ಫೋಟೋ ವೈರಲ್

webtech_news18 , Advertorial
ನ್ಯೂಸ್ 18 ಕನ್ನಡಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಫೋಟೋ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ನಿನ್ನೆಯಷ್ಟೇ ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಭಾರತ್ ಬಂದ್ ಗೆ ಕರೆ ನೀಡಿದ್ದವು.


ಈ ವೇಳೆ ಧೋನಿ ಪೆಟ್ರೋಲ್ ಬಂಕ್ ನಲ್ಲಿ ಕುಳಿತಿರುವ ಫೋಟೋ ಸಖತ್​ ವೈರಲ್ ಆಗಿತ್ತು. ರಾಜಕೀಯ ಗಣ್ಯರು ಹಾಗೂ ಕೆಲ ಅಭಿಮಾನಿಗಳು ಭಾರತ್ ಬಂದ್ ಗೆ ಧೋನಿ ಬೆಂಬಲ ನೀಡಿದ್ದಾರೆಂದು ಫೋಟೋ ಜೊತೆ ಕಮೆಂಟ್ ಮಾಡಿದ್ರು. ಆದ್ರೆ ಇದು ನಿಜವಲ್ಲ ಎಂದು ಇದೀಗ ಸಾಭೀತಾಗಿದೆ.ಫೋಟೋದಲ್ಲಿ ಧೋನಿ ಹಾಗೂ ಪತ್ನಿ ಸಾಕ್ಷಿ ಪೆಟ್ರೋಲ್ ಬಂಕ್ ಬಳಿ ಕುಳಿತಿರೋದು ಸತ್ಯ. ಆದ್ರೆ ಭಾರತ್ ಬಂದ್ ಗೆ ಬೆಂಬಲಿಸಿ ಧೋನಿ ಮಾಡಿರುವ ಪ್ರತಿಭಟನೆ ಇದಲ್ಲ. ಈ ಫೋಟೋ ಆಗಸ್ಟ್ 29 ರಂದು ತೆಗೆಯಲಾಗಿದೆ.ಧೋನಿ, ಪತ್ನಿ ಜೊತೆ ಶಿಮ್ಲಾಗೆ ಹೋಗ್ತಿರುವಾಗ ದಾರಿ ಮಧ್ಯೆ ಬಂಕ್ ನಲ್ಲಿ ವಿಶ್ರಾಂತಿ ಪಡೆದಿದ್ದಾರೆ. ಇದನ್ನ ಅನಾವಶ್ಯಕ ಪ್ರಚಾರಕ್ಕೆ ಬಳಸಲಾಗಿದೆ ಎಂದು ಧೋನಿ ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ. 

Trending Now