ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ 4 ಟೆಸ್ಟ್ ಪಂದ್ಯವನ್ನಾಡಿದೆ. ಇದರಲ್ಲಿ ರಾಹುಲ್ ಬ್ಯಾಟ್ನಿಂದ 4, 13, 8, 10, 23, 36, 19, 0, 28 ರನ್ ಸೇರಿ ಒಟ್ಟು ಬಂದಿರುವುದು ಕೇವಲ 141 ರನ್ಗಳಷ್ಟೆ. ಇಷ್ಟೆಲ್ಲಾ ಕಳಪೆ ಆಟ ಪ್ರದರ್ಶಿಸಿದರು ರಾಹುಲ್ ಅವರನ್ನು ಆಯ್ಕೆ ಸಮಿತಿ ಮಾತ್ರ ಕೈ ಬಿಟ್ಟಿಲ್ಲ. ಇದಕ್ಕೂ ಬಲವಾದ ಕಾರಣವಿದೆ. ರಾಹುಲ್ ಬ್ಯಾಟ್ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲವಾದರು, ಫೀಲ್ಡಿಂಗ್ನಲ್ಲಿ ಪೂರ್ಣ ಅಂಕ ಗಳಿಸುವತ್ತ ಚಿತ್ತ ನೆಟ್ಟಿದ್ದಾರೆ. ಹೀಗಾಗೆ ಸಿಕ್ಕ ಕ್ಯಾಚ್ಗಳನ್ನು ಪಡೆದು ರಾಹುಲ್ ಅಬ್ಬರಿಸುತ್ತಿದ್ದಾರೆ.3ನೇ ಟೆಸ್ಟ್ನಲ್ಲಿ ರಾಹುಲ್ ಹಿಡಿದ 7 ಅದ್ಭುತ ಕ್ಯಾಚ್ಗಳು ಪಂದ್ಯ ಗೆಲ್ಲಲು ಪ್ರಮುಖ ಕಾರಣವಾಯಿತು ಎನ್ನಬಹುದು. ಇದರ ಜೊತೆಗೆ ರಾಹುಲ್ ಅವರಿಗೆ ಕ್ರಿಕೆಟ್ ಮೇಲಿರುವ ಶ್ರದ್ಧೆ ಸ್ಥಾನ ಗಿಟ್ಟಿಸಿಕೊಳ್ಳಲು ಕಾರಣವಾಗಿದೆ. ಮೈದಾನದಲ್ಲಿ ಮಾತ್ರವಲ್ಲಿದೆ ಜಿಮ್ನಲ್ಲು ವ್ಯಾಯಾಮ ಮಾಡಿ ರಾಹುಲ್ ಬೆವರು ಹರಿಸುತ್ತಾ ದಿನೇ ದಿನೇ ಹೊಸ ಪಾಠ ಕಲಿಯುತ್ತಿದ್ದಾರೆ. ಇದರ ಜೊತೆಗೆ ರಾಹುಲ್ ಅವರು ರಾಹುಲ್ ದ್ರಾವಿಡ್ ಅವರ ದಾಖಲೆ ಸರಿಗಟ್ಟಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಟೆಸ್ಟ್ ಸರಣಿಯೊಂದರಲ್ಲಿ ಕೆಎಲ್ ರಾಹುಲ್ ಅವರು ಬರೋಬ್ಬರಿ 13 ಕ್ಯಾಚ್ ಪಡೆಯುವ ಮೂಲಕ 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದ್ರಾವಿಡ್ ಮಾಡಿದ ಸಾಧನೆಯನ್ನು ಸರಿಗಟ್ಟಿದ್ದಾರೆ.ಸದ್ಯ ರಾಹುಲ್ ಅವರು ತಮ್ಮ ಟ್ವಿಟ್ ಖಾತೆಯಲ್ಲಿ ಜಿಮ್ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿರುವ ವಿಡಿಯೋ ಒಂದನ್ನು ಹಾಕಿದ್ದು, 'ಏನೇ ಆದರು ಮುಂದೆ ಸಾಗುತ್ತಾ ಇರಬೇಕು' ಎಂದು ಹೇಳಿಕೊಂಡಿದ್ದಾರೆ. ರಾಹುಲ್ ಅವರ ಪ್ರತಿಭೆ, ಕ್ರೀಡೆ ಮೇಲಿರುವ ಶ್ರದ್ಧೆಯನ್ನು ಗಮನಿಸಿಯೆ ಆಯ್ಕೆ ಸಮಿತಿ ತಂಡದಲ್ಲಿ ಸ್ಥಾನ ನೀಡಿದೆ.