ಭಾರತದ 292ನೇ ಟೆಸ್ಟ್​ ಆಟಗಾರನಾಗಿ ಹನುಮ ವಿಹಾರಿ ಪದಾರ್ಪಣೆ

webtech_news18 , Advertorial
ನ್ಯೂಸ್ 18 ಕನ್ನಡಭಾರತ-ಇಂಗ್ಲೆಂಡ್ ನಡುವಣ 5ನೇ ಟೆಸ್ಟ್​ ಪಂದ್ಯಕ್ಕೆ ಎರಡು ಪ್ರಮುಖ ಬದಲಾವಣೆ ಮಾಡಲಾಗಿದ್ದು, ಆರ್. ಅಶ್ವಿನ್ ಬದಲು ರವೀಂದ್ರ ಜಡೇಜಾ ಸ್ಥಾನ ಗಿಟ್ಟಿಸಿಕೊಂಡರೆ, ಹಾರ್ದಿಕ್ ಪಾಂಡ್ಯ ಬದಲು ಇದೇ ಮೊದಲ ಬಾರಿಗೆ ಆಂಧ್ರ ಪ್ರದೇಶ ಮೂಲದ ಹನುಮ ವಿಹಾರಿ ಅಂತರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​​ ಆಡಲಿದ್ದಾರೆ.

ಈ ಮೂಲಕ 292ನೇ ಭಾರತದ ಟೆಸ್ಟ್ ಆಟಗಾರನಾಗಿ 24 ವರ್ಷ ಪ್ರಾಯದ ಹನುಮ ವಿಹಾರಿ ಟೆಸ್ಟ್ ಕ್ರಿಕೆಟ್​ಗೆ ಇಂಗ್ಲೆಂಡ್ ವಿರುದ್ಧ 5ನೇ ಪಂದ್ಯದ​ ಮೂಲಕ ಪದಾರ್ಪಣೆ ಮಾಡಿದ್ದಾರೆ. ಬಲಗೈ ಬ್ಯಾಟ್ಸ್​ಮನ್​ ಆಗಿರುವ ವಿಹಾರಿ ಬಲಗೈ ಆಫ್ ಸ್ಪಿನ್ನರ್ ಕೂಡ ಹೌದು. 2012ರಲ್ಲಿ ನಡೆದ ಅಂಡರ್-19 ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುರುವ ವಿಹಾರಿ, ಐಪಿಎಲ್​​​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಪರ ಆಡಿದ್ದಾರೆ. ಟೀಂ ಇಂಡಿಯಾ ಆಯ್ಕೆಗಾರ ಎಂಎಸ್​ಕೆ ಪ್ರಸಾದ್ ನಂತರ ಭಾರತ ಟೆಸ್ಟ್​ ತಂಡಕ್ಕೆ ಆಯ್ಕೆಯಾದ ಮೊದಲ ಆಂಧ್ರ ಆಟಗಾರ ಆಟಗಾರ ಹನುಮ ವಿಹಾರಿಯಾಗಿದ್ದಾರೆ. 


ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ 63 ಪಂದ್ಯವನ್ನು ಆಡಿರುವ ವಿಹಾರಿ 5142 ರನ್ ಕಲೆಹಾಕಿದ್ದಾರೆ. ಅಜೇಯ 302 ರನ್ ಸಿಡಿಸಿರುವುದು ಇವರ ಗರಿಷ್ಠ ಸ್ಕೋರ್ ಆಗಿದೆ. ಅಂತೆಯೆ ಎ ತಂಡದಲ್ಲಿ 56 ಪಂದ್ಯವಾಡಿದ್ದು, 2268 ರನ್ ಬಾರಿಸಿದ್ದಾರೆ. 169 ರನ್ ವಿಹಾರಿ ಅವರ ಗರಿಷ್ಠ ಸ್ಕೋರ್ ಆಗಿದೆ.

Trending Now