ಚಾರುಲತಾ ಗೂಗ್ಲಿಗೆ ಸಂಜು ಸ್ಯಾಮ್ಸನ್ ಕ್ಲೀನ್ ಬೌಲ್ಡ್

webtech_news18 , Advertorial
-ನ್ಯೂಸ್ 18 ಕನ್ನಡಭಾರತೀಯ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ತುಂಬಾ ಗೌಪ್ಯವಾಗಿ ಇರಿಸಿಕೊಂಡಿದ್ದ ಪ್ರೇಮದ ವಿಚಾರವನ್ನು ಕೊನೆಗೂ ಯುವ ಆಟಗಾರ ಬಹಿರಂಗ ಪಡಿಸಿದ್ದು, ಡಿಸೆಂಬರ್ 22 ರಂದು ತಮ್ಮ ಕಾಲೇಜು ದಿನಗಳ ಪ್ರೇಯಸಿಯನ್ನು ವಿವಾಹವಾಗುವುದಾಗಿ ತಿಳಿಸಿದ್ದಾರೆ.


ಐಪಿಎಲ್ ಮೂಲಕ ಮುನ್ನಲೆಗೆ ಬಂದ ಕೇರಳದ ಹೊಡಿ ಬಡಿ ದಾಂಡಿಗ ತಮ್ಮ ಮನೆಯವರ ಸಮ್ಮತಿಯೊಂದಿಗೆ ಪ್ರೇಯಸಿ ಚಾರುಲತಾರನ್ನು ವರಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿಕೊಂಡಿದ್ದಾರೆ. ಚಾರು-ಸಂಜು ಜೋಡಿ ಕಳೆದ ಐದು ವರ್ಷಗಳಿಂದ ಪ್ರೀತಿ ಪ್ರೇಮ ಎಂದು ಸುತ್ತಾಡಿದ್ದರೂ ಸುದ್ದಿಗಳು ಬಹಿರಂಗವಾಗದಂತೆ ನೋಡಿಕೊಂಡಿದ್ದರು. ಆದರೆ ಇವರ ಪ್ರೇಮ್ ಕಹಾನಿ ತನ್ನ ನೆಚ್ಚಿನ ಕ್ರಿಕೆಟಿಗ ಗುರು ರಾಹುಲ್ ದ್ರಾವಿಡ್ ಅವರಿಗೆ ತಿಳಿದಿತ್ತು ಎಂಬ ವಿಚಾರವನ್ನು ಸಂಜು ಬಹಿರಂಗ ಪಡಿಸಿದ್ದಾರೆ.ಈ ಹಿಂದೆಯೇ ವಿವಾಹಿತರಾಗಲು ತೀರ್ಮಾನಿಸಿದ್ದರೂ ಕ್ರಿಕೆಟ್​ನಲ್ಲಿ ಬಿಝಿಯಾಗಿದ್ದರಿಂದ ಮದುವೆ ವಿಚಾರ ಮುಂದಕ್ಕೆ ಹೋಗಿದೆ. ಇದೀಗ ಡಿಸೆಂಬರ್​ನಲ್ಲಿ ಬಿಡುವಿದ್ದು, ಅದೇ ವೇಳೆ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡಲು ತೀರ್ಮಾನಿಸಿದ್ದಾರೆ. ಫೇಸ್​ಬುಕ್​ ಮೂಲಕ ತಮ್ಮ ಪ್ರೀತಿ ಕಿತಾಬು ತೆರೆದಿಟ್ಟಿರುವ ಸಂಜು ತಮ್ಮ ಮೊದಲ ಪ್ರೇಮ ಸಂದೇಶವನ್ನು ಪೋಸ್ಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿರುವ ಸಂಜು ಸ್ಯಾಮ್ಸನ್  ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡ ಸ್ಟಾರ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. 2015ರಲ್ಲಿ ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟಿಗೆ ಸಂಜು ಸ್ಯಾಮ್ಸನ್ ಪದಾರ್ಪಣೆ ಮಾಡಿದ್ದರು.

Trending Now