ಕುಕ್-ರೂಟ್ ದ್ವಿಶತಕದ ಜೊತೆಯಾಟ: ವಿಕೆಟ್ಗಾಗಿ ಟೀಂ ಇಂಡಿಯಾ ಪರದಾಟ
webtech_news18 , Advertorial
ನ್ಯೂಸ್ 18 ಕನ್ನಡಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ ಅಂತಿಮ ಟೆಸ್ಟ್ ಪಂದ್ಯದಲ್ಲಿ ರೂಟ್ ಪಡೆ ಬೃಹತ್ ಮುನ್ನಡೆಯತ್ತ ದಾಪುಗಾಲಿಡುತ್ತಿದೆ. ಈ ಮಧ್ಯೆ ವಿದಾಯದ ಪಂದ್ಯವನ್ನಾಡುತ್ತಿರುವ ಅಲೆಸ್ಟರ್ ಕುಕ್ ಭರ್ಜರಿ ಶತಕ ಸಿಡಿಸಿ ಬ್ಯಾಟ್ ಬೀಸುತ್ತಿದ್ದೆರೆ, ನಾಯಕ ಜೋ ರೂಟ್ ಕೂಡ ಶತಕ ಬಾರಿಸಿ ಮಿಂಚಿದ್ದಾರೆ.
4ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದು, ಶತಕದ ಜೊತೆಯಾಟವಾಡಿ ತಂಡಕ್ಕೆ ಬೃಹತ್ ಮುನ್ನಡೆ ತಂದು ಕೊಟ್ಟಿದ್ದಾರೆ. ಆಂಗ್ಲರ ವಿಕೆಟ್ಗಾಗಿ ಟೀಂ ಇಂಡಿಯಾ ಬೌಲರ್ಗಳು ಪರದಾಡುತ್ತಿದ್ದಾರೆ.