ಏಷ್ಯನ್ ಗೇಮ್ಸ್ ವಿಜೇತರಿಗೆ ಕೇಂದ್ರದಿಂದ ನಗದು ಬಹುಮಾನ ನೀಡಿ ಸನ್ಮಾನ

webtech_news18 , Advertorial
ನ್ಯೂಸ್ 18 ಕನ್ನಡಮೊನ್ನೆಯಷ್ಟೇ ಮುಕ್ತಾಯಗೊಂಡ ಏಷ್ಯನ್​​ ಗೇಮ್ಸ್-2018ರಲ್ಲಿ ಪದಕ ಗೆದ್ದ ವಿಜೇತರಿಗೆ ಕೇಂದ್ರ ಸರ್ಕಾರದ ವತಿಯಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು.


ಪದಕ ಗೆದ್ದ ವಿಜೇತರ ಪೈಕಿ ಚಿನ್ನದ ಪದಕ ಗೆದ್ದವರಿಗೆ 40 ಲಕ್ಷ ರೂ. ಬೆಳ್ಳಿ ಹಾಗೂ ಕಂಚಿನ ಪದಕ ವಿಜೇತರಿಗೆ 20 ಹಾಗೂ 10 ಲಕ್ಷ ರೂ. ಬಹುಮಾನ ನೀಡಿ ಗೌರವಿಸಲಾಯಿತು. ಈ ಬಾರಿಯ ಏಷ್ಯನ್ ಗೇಮ್ಸ್​ನಲ್ಲಿ ಭಾರತ ದಾಖಲೆ ಪ್ರಮಾಣದಲ್ಲಿ ಪದಕ ಗೆದ್ದಿದ್ದು, 15 ಚಿನ್ನ, 24 ಬೆಳ್ಳಿ ಹಾಗೂ 30 ಕಂಚು ಸೇರಿದಂತೆ ಒಟ್ಟಾರೆ 69 ಪದಕಗಳನ್ನು ಗೆಲ್ಲುವ ಮೂಲಕ 8ನೇ ಸ್ಥಾನಿಯಾಗಿ ಕ್ರೀಡಾಕೂಟ ಅಂತಿಮಗೊಳಸಿತು.ಆದರೆ ಭಾರತದ ಖಾತೆಗೆ ಮತ್ತೊಂದು ಕಂಚು ದೊರಕುವಲ್ಲಿ ಈ ಬಾರಿ ವಿಫಲವಾಯಿತು. 10 ಸಾವಿರ ಮೀ. ಓಟದ ಸ್ಪರ್ಧೆಯಲ್ಲಿ ಭಾರತದ ಗೋವಿಂದನ್ ಲಕ್ಷಣನ್ ಅವರು 3ನೇ ಸ್ಥಾನಿಯಾಗಿ ಹೊರಹೊಮ್ಮಿದರಾದರು, ಓಟದ ನಡುವೆ ಕಾಲು ಟ್ರ್ಯಾಕ್ ನಿಂದ ಹೊರ ಹೋಗಿತ್ತು ಎಂಬ ಕಾರಣಕ್ಕೆ ತೀರ್ಪುಗಾರರು ಗೋವಿಂದನ್ ಪ್ರದರ್ಶನವನ್ನು ಅನರ್ಹಗೊಳಿಸಿದ್ದರು. ಆದರೆ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಅವರು ಗೋವಿಂದನ್ ಅವರಿಗೆ 10 ಲಕ್ಷ ರೂ. ಬಹುಮಾನ ನೀಡಿ ಸನ್ಮಾನಿಸಿದ್ದಾರೆ. ಈ ಫೋಟೋವನ್ನು ರಾಜ್ಯವರ್ಧನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 


29:44:91 ಸೆಕೆಂಡ್​ಗಳಲ್ಲಿ ಗೋವಿಂದನ್ ಗುರಿ ಮಿಟ್ಟಿದ್ದರು. ಏಷ್ಯನ್ ಗೇಮ್ಸ್​ನ 10 ಸಾವಿರ ಮೀ. ಓಟದಲ್ಲಿ ಗೋವಿಂದನ್ ಕಂಚು ಗೆದ್ದಿದ್ದರೆ, ಏಷ್ಯನ್ ಗೇಮ್ಸ್​ನಲ್ಲಿ 20 ವರ್ಷಗಳ ನಂತರ ಭಾರತ ಪದಕ ಗೆದ್ದ ಖ್ಯಾತಿಗಳಿಸುತ್ತಿತ್ತು.

Trending Now