ವಿರಾಟ್ ಕೊಹ್ಲಿ ಸ್ಥಾನಕ್ಕೆ ಕುತ್ತು: ಆರ್​ಸಿಬಿ ತಂಡದಲ್ಲಿ ಮತ್ತೊಂದು ಮಹತ್ವದ ಬದಲಾವಣೆ?

Vinay Bhat , Advertorial
ನ್ಯೂಸ್ 18 ಕನ್ನಡರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 2019ರ ಐಪಿಎಲ್​​​ನಲ್ಲಿ ಹೇಗಾದರು ಮಾಡಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬಂದಿದ್ದು, ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಿವೆ. ಈಗಾಗಲೇ ಆರ್​ಸಿಬಿಯಾ ನೂತನ ಕೋಚ್ ಆಗಿ ದಕ್ಷಿಣ ಆಫ್ರಿಕಾ ಲಿಜೆಂಡ್ ಕ್ರಿಕೆಟಿಗ ಗ್ಯಾರಿ ಕರ್ಸ್ಟನ್ ಆಯ್ಕೆಯಾಗಿದ್ದು, ಇವರ ಜೊತೆ ಆಶೀಶ್ ನೆಹ್ರಾ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಈಗ ಆರ್​ಸಿಬಿ ಫ್ರಾಂಚೈಸಿ ಮತ್ತೊಂದು ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.


2008ರಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ಕೊಹ್ಲಿ 2013ರಿಂದ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಆದರೆ 2019ರ ಐಪಿಎಲ್ ಸೀಸನ್​​ಗೆ ಕೊಹ್ಲಿಯನ್ನು ನಾಯಕನ ಸ್ಥಾನದಿಂದ ತೆಗೆದು ಮಿ. 360 ಎಬಿ ಡಿವಿಲಿಯರ್ಸ್​​ಗೆ ನಾಯಕ ಪಟ್ಟ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆರ್​ಸಿಬಿ ತಂಡದಲ್ಲಿ ಕೊಹ್ಲಿ ಅವರು 2013ರಿಂದ ನಾಯಕನಾಗಿ ಒಟ್ಟು 96 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 44 ಪಂದ್ಯ ಗೆಲುವು ಕಂಡಿದ್ದರೆ, 47 ಪಂದ್ಯದಲ್ಲಿ ಸೋಲುಂಡಿದೆ. ಅಂದರೆ ಶೇ. 48.38 ರಷ್ಟು ಕೊಹ್ಲಿ ನಾಯಕತ್ವದಲ್ಲಿ ಆರ್​​ಸಿಬಿ ಜಯ ಸಾಧಿಸಿದೆ. ಆದರೆ ಕೊಹ್ಲಿ ನೇತೃತ್ವದಲ್ಲಿ ಇದುವರೆಗೆ ಬೆಂಗಳೂರು ತಂಡ ಒಂದು ಬಾರಿಯು ಪ್ರಶಸ್ತಿ ಮುಡಿಗೇರಿಸಿಕೊಂಡಿಲ್ಲ. ಅದರಲ್ಲು ಕಳೆದ ಎರಡು ಸೀಸನ್​​ನಲ್ಲಿ ಆರ್​ಸಿಬಿ ತಂಡದ ಪ್ರದರ್ಶನ ಕಳಪೆ ಮಟ್ಟದ್ದಾಗಿತ್ತು.ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಇಲ್ಲೂ ಕೊಹ್ಲಿ ನಾಯಕತ್ವದಲ್ಲಿ ಸರಣಿ ಗೆಲ್ಲುವ ಕನಸು ಭಗ್ನಗೊಂಡಿದೆ. ಈ ಬಗ್ಗೆ ಇತ್ತೀಚೆಗೆ ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಮಾತನಾಡಿದ್ದು, ನಾಯಕನಾಗಿ ತಂಡವನ್ನು ಮುನ್ನಡೆಸುವಲ್ಲಿ ಕೊಹ್ಲಿ ಎಡವಿದ್ದಾರೆ ಎಂದಿದ್ದರು. ಜೊತೆಗೆ ಕೊಹ್ಲಿ ಒಬ್ಬ ಬ್ಯಾಟ್ಸ್​ಮನ್​ ಆಗಿ ಅತ್ಯುತ್ತಮ ಆಟಗಾರ, ಆದರೆ ನಾಯಕನಾಗಿ ತಂಡವನ್ನು ಮುನ್ನಡೆಸುವಲ್ಲಿ ಫೇಲ್ ಆಗಿದ್ದಾರೆ ಎಂದು ಗವಾಸ್ಕರ್ ಹೇಳಿದ್ದರು.ಐಪಿಎಲ್​​ನ 11 ಸೀಸನ್​ಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಒಟ್ಟು 6 ಬಾರಿ ಲೀಗ್ ಹಂತದಲ್ಲೇ ಮುಗ್ಗರಿಸಿದರೆ, 3 ಬಾರಿ ರನ್ನರ್ ಅಪ್ ಹಾಗೂ 2 ಬಾರಿ ಪ್ಲೇ ಆಫ್​​ಗೆ ಲಗ್ಗೆ ಇಟ್ಟಿತ್ತು. ಸದ್ಯ ಈ ಬಾರಿ ಆದರು ಕಪ್​​ ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಆರ್​ಸಿಬಿ ಫ್ರಾಂಚೈಸಿ ಡಿವಿಲಿಯರ್ಸ್​​ಗೆ ನಾಯಕನ ಪಟ್ಟ ನೀಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ ಆದರೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

Trending Now