'ಪಾಕಿಸ್ತಾನ ಸೂಪರ್ ಲೀಗ್'​ನಲ್ಲಿ ಆಡಲಿದ್ದಾರೆ ಡಿವಿಲಿಯರ್ಸ್​

webtech_news18 , Advertorial
ನ್ಯೂಸ್ 18 ಕನ್ನಡ2016ರಿಂದ ಪಾಕಿಸ್ತಾನದಲ್ಲೂ ಐಪಿಎಲ್ ಮಾಧರಿಯಲ್ಲಿ 'ಪಾಕಿಸ್ತಾನ ಸೂಪರ್ ಲೀಗ್' ಟೂರ್ನಿ ನಡೆಯುತ್ತಿದ್ದು, ಈ ಬಾರಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​ ಕೂಡ ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ.

ಈ ಬಗ್ಗೆ ಎಬಿಡಿ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು ಮುಂದಿನ ವರ್ಷ ಪಿಎಸ್​ಎಲ್(ಪಾಕಿಸ್ತಾನ ಸೂಪರ್ ಲೀಗ್)ನಲ್ಲಿ ಭಾಗಿಯಾಗಲು ತುಂಬಾ ಸಂತಸವಿದೆ. ಇದು ಇತರ ಆಟಗಳಿಗಿಂತ ಭಿನ್ನವಾಗಿದೆ. ಪಿಎಸ್​​​ಎಲ್​​ನಲ್ಲಿ ಆಡಲು ನಾನು ಎದುರು ನೋಡಿತ್ತಿದ್ದೇನೆ ಎಂದು ಬರೆದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. 


ಕಳೆದ ಮೇ. 23ರಂದು ಎಬಿಡಿ ಎಲ್ಲ ಮಾದರಿಯ ಅಂತರಾಷ್ಟ್ರಿಯಾ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಎಬಿ ಡಿವಿಲಿಯರ್ಸ್​ ಅವರಿಗೆ 34 ವರ್ಷವಾಗಿದ್ದು, ಟೆಸ್ಟ್, ಏಕದಿನ ಮತ್ತು ಟಿ-20 ಮೂರೂ ಮಾದರಿಯ ಕ್ರಿಕೆಟ್​ನಲ್ಲೂ ಆಡಿದ್ದಾರೆ. 123 ಟೆಸ್ಟ್​ ಪಂದ್ಯಗಳು, 228 ಏಕದಿನ ಪಂದ್ಯ ಹಾಗೂ 78 ಟಿ-20 ಪಂದ್ಯಗಳನ್ನು ಆಡಿರುವ ಎಬಿಡಿ ವಿಶ್ವದ ಶ್ರೇಷ್ಠ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

Trending Now