ರೈತರ ಪ್ರತಿಭಟನೆಯಲ್ಲಿ ಯೋಗೇಂದ್ರ ಯಾದವ್​​ ಮೇಲೆ ಪೊಲೀಸ್​ ದೌರ್ಜನ್ಯ: ಮೊಬೈಲ್​ ಕಸಿದು ಅಸಭ್ಯ ವರ್ತನೆ

webtech_news18
ನ್ಯೂಸ್​-18 ಕನ್ನಡಚೆನ್ನೈ(ಸೆಪ್ಟೆಂಬರ್​​.09): ಪ್ರತಿಭಟನಾ ನಿರತ ರೈತರ ಭೇಟಿಗೆ ತೆರಳಿದ್ದ ಸ್ವರಾಜ್ ಇಂಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್ ಅವರನ್ನು ವಶಕ್ಕೆ ಪಡೆದ ಪೊಲೀಸರು ಅಸಭ್ಯವಾಗಿ ವರ್ತಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಅಲ್ಲದೇ ಯೋಗೆಂದ್ರ ಯಾದವ್​​ ಅವರ ಬಳಿಯ ಫೋನ್ ಕಸಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.


ತಮಿಳುನಾಡು ಸರ್ಕಾರ 10 ಸಾವಿರ ಕೋಟಿ ರೂ ವೆಚ್ಚದಲ್ಲಿ ಸೇಲಂ-ಚೆನ್ನೈ ಎಕ್ಷ್ಪ್ರೆಸ್ ಅಷ್ಟಪಥ ಯೋಜನೆ ಕೈಗೊಂಡಿದೆ. ಇದನ್ನು ವಿರೋಧಿಸಿ ಸ್ಥಳೀಯ ರೈತಪರ ಸಂಘಟನೆ ಪ್ರತಿಭಟನೆಯನ್ನು ನಡೆಸುತ್ತಿವೆ. ರೈತರು ಆಹ್ವಾನದ ಮೇರೆಗೆ ಪ್ರತಿಭಟನೆಯಲ್ಲಿ ಭಾಗವಹಸಲು ತೆರಳಿದ್ದ ಯಾದವ್ ಅವರನ್ನು  ತಿರುವಣ್ಣಾಮಲೈ ಪೊಲೀಸರು ತಡೆ ಹಿಡಿದಿದ್ದಾರೆ. ಅಲ್ಲದೇ ಹಿಗ್ಗಾಮುಗ್ಗಾ ಥಳಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನುತ್ತಿವೆ ಮೂಲಗಳು.


ಈ ಸಂಬಂಧ ಟ್ವೀಟ್ ಮಾಡಿರುವ ಯೋಗೇಂದ್ರ ಯಾದವ್ " ಅಷ್ಟಪಥ ಎಕ್ಸ್ಪ್ರೆಸ್ ವೇ ಯೋಜನೆ ವಿಚಾರವಾಗಿ ರೈತರ ಭೂಮಿಯನ್ನು ಸ್ವಾದೀನಪಡಿಸಿಕೊಂಡಿರುವ ಬಗ್ಗೆ ಜಿಲ್ಲಾಧಿಕಾರಿ ಕಂದಸ್ವಾಮಿಯವರೊಂದಿಗೆ ಮಾತನಾಡಿರುವೆ. ಆದರೆ, ನಮ್ಮೊಂದಿಗೆ ಸಂವಾದ ನಡೆಸಲು ಮುಂದಾಗದೆ, ಇದನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಬಳಿಕ ಪೊಲೀಸರು ಬಂದು ನಮ್ಮನ್ನು ತಡೆ ಹಿಡಿದರು" ಎಂದಿದ್ಧಾರೆ.


ತಮಿಳುನಾಡು ಸರ್ಕಾರದ ಎಕ್ಸ್ಪ್ರೆಸ್ ಮಾರ್ಗದ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ರೈತರು ಮತ್ತು ಸ್ಥಳೀಯರು ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲಿದ್ದಾರೆ. ಪರಿಸರ ತಜ್ಞರು ಕೂಡ ಈ ಯೋಜನೆಗೆ ಭಾರಿ ಪ್ರಮಾಣದಲ್ಲಿ ಗಿಡ ಮರಗಳ ಬೆಲೆ ತೆರಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಆಮ್‌‌ ಆದ್ಮಿ ಪಾರ್ಟಿಯಿಂದ ಯೋಗೆಂದ್ರ ಯಾದವ್​​ ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ ನಡುವೆ ಭಿನ್ನಾಭಿಪ್ರಾ ಉಂಟಾಗಿತ್ತು. ಪಕ್ಷವನ್ನು ಒಡೆಯುತ್ತಿದ್ದಾರೆ ಎಂದು ಆರೋಪಿಸಿ ಯೋಗೆಂದ್ರ ಯಾದವ್​ ಅವರನ್ನು ಉಚ್ಛಾಟನೆ ಮಾಡಲಾಯ್ತು.ಈ ರೀತಿ ಪಕ್ಷದಲ್ಲಿ ಅಪಸ್ವರ ಮತ್ತು ಭಿನ್ಯಾಭಿಪ್ರಾಯದಿಂದ ಪ್ರಶಾಂತ್​ ಭೂಷಣ್​​ ಕೂಡ ಆಪ್​ನಿಂದ ಹಿಂದೆ ಸರಿದರು.ಸರಿಪಡಿಸಲು ದೆಹಲಿಯ ಮಾಜಿ ಮುಖ್ಯ ಮಂತ್ರಿ ಅರವಿಂದ ಕೆಜ್ರಿವಾಲ ಪ್ರಯತ್ನ ಪಟ್ಟರು ಎನ್ನಲಾಗಿದೆ. ಇಬ್ಬರ ನಡುವೆ ದೀರ್ಘ ಕಾಲದ ಮಾತು ಕತೆ ಕೂಡ ನಡೆದಿತ್ತು. ಆಗ ಯೋಗೇಂದ್ರ ಯಾದವ್​​ ಕೆಲವು ಸವಾಲುಗಳನ್ನು ಎತ್ತಿದ್ದರು. ಬಳಿಕ ತಮ್ಮ ಪ್ರಶ್ನೆಗಳಿಗೆ ಉತ್ತರಿಸಿಲ್ಲ ಎಂದು ಯೋಗೆಂದ್ರ ಯಾದವ್​​ ಮತ್ತು ಭೂಷಣ್​​ ಇಬ್ಬರು ಪಕ್ಷದಿಂದ ಹೊರ ನಡೆದರು.

Trending Now