ವಿಚ್ಛೇದನದ ನಂತರ ವರದಕ್ಷಿಣೆ ಕಿರುಕುಳ ಕೇಸ್​ ದಾಖಲಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

webtech_news18 , Advertorial
ನ್ಯೂಸ್​ 18 ಕನ್ನಡನವದೆಹಲಿ,(ಸೆ.09): ವಿಚ್ಛೇದನದ ನಂತರ ಮಹಿಳೆಯು ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಆತನ ಮತ್ತು ಕುಟುಂಬ ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.


ಐಪಿಸಿ ಸೆಕ್ಷನ್ 498 ಎ ​ ಅಥವಾ ವರದಕ್ಷಿಣೆ ನಿಷೇಧ ಕಾಯಿದೆಯ ಯಾವುದೇ ನಿಬಂಧನೆಯಡಿಯಲ್ಲಿ, ದಂಪತಿಗಳ ಪ್ರತ್ಯೇಕತೆಯ ನಂತರ ಕಾನೂನು ಕ್ರಮವು ಸಮರ್ಥನೀಯವಾಗಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ವರದಕ್ಷಿಣೆ ನಿಬಂಧನೆಗಳ ಅಡಿಯಲ್ಲಿ, ದಂಡ ಮತ್ತು ಗರಿಷ್ಠ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.ನ್ಯಾಯಮೂರ್ತಿ ಎಸ್.ಎ. ಬಾಬೆಡೆ ಮತ್ತು  ಎಲ್.ನಾಗೇಶ್ವರ ರಾವ್ ಪೀಠವು  ಐಪಿಸಿ  ಸೆಕ್ಷನ್ 498 ಎ  "ಗಂಡ ಅಥವಾ ಮಹಿಳೆಯ ಗಂಡನ ಸಂಬಂಧಿ" ಎಂದು ಹೇಳುತ್ತದೆ. ಇದರ ನಂತರ, ಯಾವುದೇ ಪ್ರಕರಣದಲ್ಲಿ ವಿಚ್ಛೇದನ ಬಂದಾಗ, ವಿಭಾಗ 498A ಇಲ್ಲಿ ಅನ್ವಯಿಸುವುದಿಲ್ಲ ಎಂದು ಹೇಳಿದೆ. ಅಂತೆಯೇ, ವರದಕ್ಷಿಣೆ ನಿಷೇಧ ಕಾಯಿದೆ, 1961 ರ ಸೆಕ್ಷನ್ 3/4 ರ ಅಡಿಯಲ್ಲಿ ಪ್ರಕರಣವನ್ನು ನೋಂದಾಯಿಸಲಾಗುವುದಿಲ್ಲ.ಉತ್ತರ ಪ್ರದೇಶದ ಜಲ್ನಾ ಜಿಲ್ಲೆಯಲ್ಲಿ ಎಫ್ಐಆರ್ ರದ್ದುಗೊಳಿಸಲು 2016 ರಲ್ಲಿ ಸಲ್ಲಿಸಿದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.

Trending Now