ಹೆಂಡತಿಗೆ ಕೊನೆಯ ಬಾರಿ ವಿದಾಯ ಹೇಳಿದ್ದ ನವಾಜ್​ ಷರೀಫ್​: ವೈರಲ್​ ಆಯ್ತು ಭಾವನಾತ್ಮಕ ವಿಡಿಯೋ

webtech_news18
ನ್ಯೂಸ್​ 18 ಕನ್ನಡಇಸ್ಲಮಾಬಾದ್​(ಸೆ.12): ಮಂಗಳವಾರದಂದು ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್​ ಷರೀಫ್​ರವರ ಹೆಂಡತಿ ಕುಲ್​ಸೂಮ್​ ನವಾಜ್​ ಲಂಡನ್​ನಲ್ಲಿ ನಿಧನರಾಗಿದ್ದಾರೆ. ಇವರ ನಿಧನದ ಬಳಿಕ ನವಾಜ್​ ಷರೀಫ್​ರವರ ಈವರೆಗೂ ಕಾಣಲು ಸಿಗದ ಭಾವನಾತ್ಮಕ ವಿಡಿಯೋ ಒಂದು ವೈರಲ್​ ಆಗಿದ್ದು, ಇದರಲ್ಲಿ ಅವರು ತಮ್ಮ ಹೆಂಡತಿಗೆ ಕೊನೆಯ ಬಾರಿ ವಿದಾಯ ಹೇಳುತ್ತಿರುವುದನ್ನು ಕಾಣಬಹುದಾಗಿದೆ.


ಈ ವಿಡಿಯೋದಲ್ಲಿ ನವಾಜ್​ ಷರೀಫ್​ ಬಹಳಷ್ಟು ಭಾವುಕರಾಗಿರುವುದನ್ನು ಕಾಣಬಹುದಾಗಿದೆ. ಇದನ್ನು ಜುಲೈ 12 ರಂದು ಅವರು ಜೈಲು ಶಿಕ್ಷೆಗಾಗಿ ಪಾಕಿಸ್ತಾನಕ್ಕೆ ಮರಳುವ ಮೊದಲು ಚಿತ್ರೀಕರಿಸಿದ್ದೆನ್ನಲಾಗಿದೆ. ಇದರಲ್ಲಿ ಅವರು ಲಂಡನ್​ನ ಆಸ್ಪತ್ರೆಯಲ್ಲಿದ್ದ ತಮ್ಮ ಪ್ರಜ್ಞಾಹೀನ ಹೆಂಡತಿಯನ್ನು ಮಾತನಾಡಲು ಪ್ರಯತ್ನಿಸುತ್ತಿರುವುದನ್ನು ಗಮನಿಸಬಹುದಾಗಿದೆ.ಇಲ್ಲಿ ಮೊದಲು ನವಾಜ್​ ಷರೀಫ್​ ಹೆಂಡತಿಯ ಬಳಿ ಕಣ್ಣು ತೆರೆಯುವಂತೆ ಕೇಳಿಕೊಂಡರೆ, ಬಳಿಕ "ಅಲ್ಲಾ ನಿಮಗೆ ಆರೋಗ್ಯ ಕರುಣಿಸಲಿ, ಶೀಘ್ರವಾಗಿ ಗುಂಣಮುಖರಾಗುವಂತೆ ಮಾಡಲಿ" ಎಂದಿದ್ದಾರೆ.

ಲಂಡನ್​ನಿಂದ ಪಾಕಿಸ್ತಾನಕ್ಕೆ ಬಂದಿದ್ದ ನವಾಜ್​ ಷರೀಫ್​ ತನ್ನ ಹೆಂಡತಿ ಕೊನೆಗೂ ಕೆಲ ಕ್ಷಣಗಳಿಗೆ ತನ್ನ ಹೆಂಡತಿ ಕಣ್ಣು ತೆರೆದಿದ್ದರು. ಆದರೆ ಆಕೆಯನ್ನು ಇಂತಹ ಸ್ಥಿತಿಯಲ್ಲಿ ಬಿಟ್ಟು ಬಂದಿದ್ದಕ್ಕಾಗಿ ನನಗೆ ದುಃಖ ಇದೆ ಎಂದಿದ್ದರು. ಹೀಗಿದ್ದರೂ ಅಲ್ಲಾಹುವಿನ ಭರವಸೆ ಮೇಲೆ ಅವರನ್ನು ಬಿಟ್ಟು ಪಾಕಿಸ್ತಾನಕ್ಕೆ ಹಿಂತಿರುಗಿದ್ದು, ಜೈಲು ಶಿಕ್ಷೆಯಾದರೂ, ಗಲ್ಲು ಶಿಕ್ಷೆಯಾದರೂ ಚಿಂತೆ ಇಲ್ಲ ಎಂದಿದ್ದರು.ನವಾಜ್​ ಷರೀಫ್​ ಹೆಂಡತಿ ಕುಲ್​ಸೂಮ್​ ನವಾಜ್​ ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಗಂಟಲು ಕ್ಯಾನ್ಸರ್​ನಿಂದ ಬಳಲುತ್ತಿದ್ದರೆನ್ನಲಾಗಿದೆ. ಸದ್ಯ ನವಾಜ್​ ಷರೀಫ್​, ಅವರ ಮಗಳು ಮರಿಯಮ್​ ಹಾಗೂ ಅಳಿಯ ಕ್ಯಾಪ್ಟನ್​ ಮೊಹಮ್ಮದ್​ ಸಫ್ರದ್​ ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧಿಗಳೆಂದು ಪರಿಗಣಿಸಿ ರಾವಲ್ಪಿಂಡಿಯ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

Trending Now