ಐದು ದಿನ ಜೀವನ್ಮರಣ ಹೋರಾಟ ನಡೆಸಿದ ಉತ್ತರ ಪ್ರದೇಶದ ಐಪಿಎಸ್​ ಅಧಿಕಾರಿ ಸಾವು

webtech_news18 , Advertorial
ನ್ಯೂಸ್​ 18 ಕನ್ನಡಕಾನ್ಪುರ್​​ (ಸೆ.9) : ಐದುದಿನಗಳ ಸಾವು ಬದುಕಿನ ಹೋರಾಟದ ಬಳಿಕ  ಉತ್ತರ ಪ್ರದೇಶದ ಐಪಿಎಸ್​ ಅಧಿಕಾರಿ ಇಂದು ಸಾವನ್ನಪ್ಪಿದ್ದಾರೆ.


ಸುರೇಂದ್ರ ಕುಮಾರ್​ ದಾಸ್​ (30) ಸಾವನ್ನಪ್ಪಿದ ಅಧಿಕಾರಿ. ಕಳೆದ ಐದು ದಿನಗಳ  ಹಿಂದೆ ಸುರೇಂದ್ರ ಕುಮಾರ್​ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದರು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವರನ್ನು ರೆಜೆನ್ಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಆತ್ಮಹತ್ಯೆಗೆ ಕಾರಣಭ ಏನೆಂಬುದು  ತಿಳಿದು ಬಂದಿಲ್ಲ.ಆತ್ಮಹತ್ಯೆಗೆ ಮುನ್ನ ಸಾಯುವುದು ಹೇಗೆ? ಎಂದು ಗೂಗಲ್​ ಮಾಡಿದ್ದ ಐಪಿಎಸ್​​: ಸಾವು-ಬದುಕಿನ ನಡುವೆ ಹೋರಾಟ2014ರ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿದ್ದ ದಾಸ್​ ಕಾನ್ಪುರ್​ನ ಪೂರ್ವ ವಲಯ ಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.


ದಾಸ್​ ಆತ್ಮಹತ್ಯೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸೇರಿದಂತೆ ಅಲ್ಲಿನ ಡಿಜಿಪಿ  ಸಂತಾಪ ವ್ಯಕ್ತಪಡಿಸಿದ್ದಾರೆ.ಕಳೆದ ಮೇಯಲ್ಲಿ ಭಯೋತ್ಪಾದನೆ ನಿಗ್ರಹಪಡೆಯ ಹಿರಿಯ ಪೊಲೀಸ್​ ಅಧಿಕಾರಿ ರಾಜೇಶ್​ ಸಹನಿ ತಮ್ಮ ಸೇವಾ ಪಿಸ್ತೂಲಿನಲ್ಲಿ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದರು.

Trending Now