ಲೈಂಗಿಕ ಹಲ್ಲೆ ಪ್ರತಿರೋಧಿಸಿದ್ದಕ್ಕೆ ಮಂಗಳಮುಖಿಗೆ ಬೆಂಕಿ ಹಚ್ಚಿ ಕೊಂದ ಪಾಕ್​ ಪಾಪಿಗಳು

webtech_news18 , Advertorial
-ನ್ಯೂಸ್​ 18 ಕನ್ನಡಲಾಹೋರ್​,(ಸೆ.09): ಮಂಗಳಮುಖಿಯೋರ್ವಳು ಲೈಂಗಿಕ ಹಲ್ಲೆ ಪ್ರತಿರೋಧಿಸಿದ್ದಕ್ಕೆ  ನಾಲ್ವರು ಕಾಮುಕರು ಆಕೆಗೆ ಬೆಂಕಿ ಹಚ್ಚಿ ಕೊಂದಿರುವ ಘಟನೆ ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದೆ.


ಮಂಗಳಮುಖಿ ದೇಹದ ಶೇ.80 ರಷ್ಟು ಭಾಗ ಬೆಂಕಿಯಿಂದ ಸುಟ್ಟು ಕರಕಲಾಗಿತ್ತು. ನರಳಾಡುತ್ತಿದ್ದ ಆಕೆಯನ್ನು ಲಾಹೋರ್​ನ  ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮಂಗಳಮುಖಿ ಸಾವನ್ನಪ್ಪಿದ್ದಾರೆ.ನಾಲ್ಕು ಜನ ಆರೋಪಿಗಳು ಲಾಹೋರ್​ನಿಂದ 250 ಕಿ.ಮೀ. ದೂರದಲ್ಲಿರುವ ಸಾಹಿವಾಲ್​ ಜಿಲ್ಲೆಯ ಟ್ಯಾಕ್ಸಿ ನಿಲ್ದಾಣದ ಬಳಿ ನಿರ್ಜನ ಪ್ರದೇಶಕ್ಕೆ ಮಂಗಳಮುಖಿಯನ್ನು ಕರೆದೊಯ್ದು, ಆಕೆಯ ಮೇಲೆ ಲೈಂಗಿಕ ಹಲ್ಲೆಗೆ ಯತ್ನಿಸಿದ್ದಾರೆ. ಆದರೆ ಮಂಗಳಮುಖಿ ಪ್ರತಿರೋಧಿಸಿದಾಗ ಆಕೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಪಾಕಿಸ್ತಾನದ ಉತ್ತರ ಭಾಗದಲ್ಲಿ ಮಂಗಳಮುಖಿ ಸಮುದಾಯಕ್ಕೆ ಯಾವುದೇ ಸುರಕ್ಷತೆಗಳಿಲ್ಲ. ಭಯದಿಂದಲೇ ಬದುಕುತ್ತಿದ್ದಾರೆ. ಪಾಕಿಸ್ತಾನದ ಖೈಬರ್-ಪಖ್ತುನ್ಖ್ವಾ ಮಾನವ ಹಕ್ಕುಗಳ ನಿರ್ದೇಶನಾಲಯವು ಮಂಗಳಮುಖಿಯರ ವಿರುದ್ಧ ಹೆಚ್ಚುತ್ತಿರುವ  ಹಿಂಸೆ ಮತ್ತು ದೌರ್ಜನ್ಯಗಳ ಬಗ್ಗೆ ಗಂಭೀರ ಸೂಚನೆ ನೀಡಿದೆ. ಇತ್ತೀಚೆಗೆ ಪ್ರತಿದಿನವೂ ಮಂಗಳಮುಖಿಯರ ಹತ್ಯೆಗೆ ಸಂಬಂಧಿಸಿದಂತೆ ತಮ್ಮ ತನಿಖೆಯನ್ನು ಹಂಚಿಕೊಳ್ಳಲು ಎಲ್ಲ ಇಲಾಖೆಗಳಿಗೆ ನಿರ್ದೇಶನ ನೀಡಿದೆ.ಕಳೆದ ವರ್ಷ ಮೇ ತಿಂಗಳಲ್ಲಿ ಪಾಕಿಸ್ತಾನದ ಸಂಸತ್ತು  ಮಂಗಳಮುಖಿ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುವ ಕಾನೂನನ್ನು ಜಾರಿಗೊಳಿಸಿತು. ಮಾಲೀಕರು ಮತ್ತು ಖಾಸಗಿ ವ್ಯವಹಾರ ಮಾಲೀಕರು ಎರಡೂ ತಾರತಮ್ಯವನ್ನು ನಿಷೇಧಿಸಿತು.

Trending Now