ತೆಲಂಗಾಣದಲ್ಲಿ ಭೀಕರ ಅಪಘಾತ: 6 ಮಕ್ಕಳು ಸೇರಿ ಒಟ್ಟು 40 ಮಂದಿ ಸಾವು!

webtech_news18
ನ್ಯೂಸ್​ 18 ಕನ್ನಡಹೈದರಾಬಾದ್​(ಸೆ.11): ತೆಲಂಗಾಣದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ತೆಲ್ಲಂಗಾಣ ತರಾಜ್ಯ ಸಾರಿಗೆ ಸಂಸ್ಥೆಯ ಬಸ್ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ 6 ಮಕ್ಕಳು ಸೇರಿ ಒಟ್ಟು 40 ಮಂದಿ ಸಾವಿಗೀಡಾಗಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ಬಸ್​ ಕೊಂಡಾಗಟ್ಟುವಿನಿಂದ ಜಗತೀಯಾಲ್​ ಕಡೆಗೆ ಹೊರಟಿತ್ತು, ಇದೇ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಸ್​ ಬ್ರೇಕ್​ ಫೇಲ್​ ಆಗಿದ್ದರಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.


ಬಸ್​ನಲ್ಲಿ 70ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರು. ಮೃತರಲ್ಲಿ ಕನಿಷ್ಟ 6 ಮಕ್ಕಳಿದ್ದರೆನ್ನಲಾಗಿದೆ. ಮೃತರೆಲ್ಲರೂ ಭಕ್ತರೆನ್ನಲಾಗಿದ್ದು, ಮಂಗಳವಾರವಾಗಿದ್ದರಿಂದ ದೇವಸ್ಥಾನಕ್ಕೆ ತೆರಳಿ ಹಿಂತಿರುಗುತ್ತಿದ್ದರು. ಹೀಗಿರುವಾಗ ಗುಡ್ಡಗಾಡು ಪ್ರದೇಶದಲ್ಲಿ ಈ ಭೀಕರ ಅಘಟನೆ ಸಂಭವಿಸಿದೆ. ಇನ್ನು ಮುಖ್ಯಮಂತ್ರಿ ಚಂದ್ರಶೇಖರ್​​ ರಾವ್​ ಅಪಘಾತದಲ್ಲಿ ನಿಧನರಾದ ಪ್ರತಿಯೊಬ್ಬ ಪ್ರಯಾಣಿಕರಿಗೆ ತಲಾ 5 ಲಕ್ಷ ಪರಿಹಾರ ಧನ ಘೋಷಿಸಿದ್ದಾರೆ.ಇಲ್ಲಿನ ಚಾಲಕರಿಗೆ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ನಿರ್ದೇಶಿಸಲಾಗಿದೆ. ಆದರೆ ಘಟನೆಯನ್ನು ಗಮನಿಸಿದರೆ ಚಾಲಕ ನಿಯಮಗಳನ್ನು ಪಾಲಿಸದಿರುವುದು ಗಮನಕ್ಕೆ ಬರುತ್ತದೆ. ದುರ್ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸ್ಥಳಿಯ ಆಡಳಿತ ಹಾಗೂ ಸಾರ್ವಜನಿಕರು ರಕ್ಷಣಾ ಕಾರ್ಯಕ್ಕಾಗಿ ಧಾವಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕೊಯಂಬತ್ತೂರಿನಲ್ಲೂ ಇಂತಹುದೇ ಘಟನೆ ಸಂಭವಿಸಿತ್ತು. ಇಲ್ಲಿ ನಡೆದ ಬಸ್​ ಅಪಘಾತವೊಂದರಲ್ಲಿ 30 ಮಂದಿಗೆ ಗಾಯಗಳಾಗಿತ್ತು.

Trending Now