ರಾಜೀವ್ ಹತ್ಯೆ ಪ್ರಕರಣ: ನಳಿನಿ ಸೇರಿ 7 ಅಪರಾಧಿಗಳ ಬಿಡುಗಡೆಗೆ ತಮಿಳುನಾಡು ಸರಕಾರದ ಶಿಫಾರಸು

webtech_news18
- ನ್ಯೂಸ್18 ಕನ್ನಡಚೆನ್ನೈ(ಸೆ. 09): ರಾಜೀವ್ ಗಾಂಧಿ ಹಂತಕರಿಗೆ ಶೀಘ್ರದಲ್ಲೇ ಜೈಲಿಂದ ಬಿಡುಗಡೆಯ ಭಾಗ್ಯ ಸಿಗಲಿದೆ. ಪ್ರಕರಣದಲ್ಲಿ ಈಗಾಗಲೇ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳ ಬಿಡುಗಡೆಗೆ ತಮಿಳುನಾಡು ಸಂಪುಟವು ಒಪ್ಪಿಕೊಂಡಿದೆ. ಪ್ರಮುಖ ಆರೋಪಿ ನಳಿಸಿ ಸೇರಿದಂತೆ ಏಳು ಅಪರಾಧಿಗಳ ಬಿಡುಗಡೆಗೆ ಶಿಫಾರಸು ಮಾಡಿ ಕೂಡಲೇ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರಿಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ. ಹಂತಕರ ಬಿಡುಗಡೆಗೆ ಕೇಂದ್ರ ಸರಕಾರದ ವಿರೋಧದ ನಡುವೆಯೂ ಈ ಬೆಳವಣಿಗೆ ನೀಡಿದೆ.


ರಾಜೀವ್ ಹಂತಕರ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮೃತ ರಾಜೀವ್ ಗಾಂಧಿಯವರ ಕುಟುಂಬ ಹಾಗೂ ದೇಶದ ನ್ಯಾಯಾಲಯಗಳು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ರಾಜೀವ್ ಹಂತಕರನ್ನು ಕ್ಷಮಿಸಲು ನಿರ್ಧರಿಸಿದ್ದು, ನಳಿನಿ ಮತ್ತಿತರರ ಅಪರಾಧಿಗಳ ಬಿಡುಗಡೆಗೆ ಎಡೆಮಾಡಿಕೊಟ್ಟಿದೆ.ಈಗ ನಳಿನಿ ಮತ್ತಿತರರ ಬಿಡುಗಡೆಯ ಅಂತಿಮ ನಿರ್ಧಾರವು ರಾಜ್ಯಪಾಲರ ಕೈಯಲ್ಲಿದೆ. ಸಂವಿಧಾನದ 161ನೇ ಕಲಂನಲ್ಲಿ ಕೈದಿಗಳ ಬಿಡುಗಡೆಗೆ ನ್ಯಾಯಾಂಗೀಯ ಅಧಿಕಾರವು ರಾಜ್ಯಪಾಲರಿಗೆ ಇರುತ್ತದೆಂದು ತಿಳಿಸಿದೆ.ನಳಿನಿ ಶ್ರೀಹರನ್ ಅವರು ಮಾನವೀಯ ನೆಲೆಯಲ್ಲಿ ತಮ್ಮ ಬಿಡುಗಡೆ ಕೋರಿ ಹಲವು ಬಾರಿ ಮನವಿ ಮಾಡಿಕೊಂಡಿದ್ದರು. 2014ರಲ್ಲಿ ರಾಜ್ಯ ಸರಕಾರಕ್ಕೂ ಮನವಿ ಮಾಡಿದ್ದರು. 2015ರಲ್ಲಿ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮದ್ರಾಸ್ ಹೈಕೋರ್ಟ್​ಗೂ ಮೊರೆ ಹೋಗಿದ್ದರು. 2016ರ ಜುಲೈ 20ರಂದು ಹೈಕೋರ್ಟ್ ಈ ಬಗ್ಗೆ ತೀರ್ಪು ನೀಡಿ, ಕೈದಿಗಳ ಬಿಡುಗಡೆಯನ್ನ ಅಧಿಕಾರಿಗಳ ವಿವೇಚನೆಗೆ ಬಿಟ್ಟಿತು. ಈ ತೀರ್ಪನ್ನು ಆಕ್ಷೇಪಿಸಿ ಸುಪ್ರೀಂಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಯಿತು. ಸುಪ್ರೀಂಕೋರ್ಟ್ ಕೂಡ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು, ರಿಟ್ ಅರ್ಜಿಯನ್ನು ತಿರಸ್ಕರಿಸಿತು.ಕೇಂದ್ರದ ಆಕ್ಷೇಪವೇನು?
ರಾಜೀವ್ ಹಂತಕರನ್ನು ಜೈಲಿನಿಂದ ಬಿಡುಗಡೆ ಮಾಡಿದರೆ ಕೆಟ್ಟ ಪರಂಪರೆಗೆ ನಾಂದಿ ಹಾಡಿದಂತಾಗುತ್ತದೆ. ಅಲ್ಲದೆ, ಈ ಬೆಳವಣಿಗೆಯು ಅಂತಾರಾಷ್ಟ್ರೀಯವಾಗಿ ದುಷ್ಪರಿಣಾಮಗಳನ್ನ ಮಾಡಲಿದೆ. ಒಬ್ಬ ಪ್ರಧಾನಿಯನ್ನು ಹತ್ಯೆ ಮಾಡಿದವರಿಗೆ ಯಾವುದೇ ಕಾರಣಕ್ಕೂ ಬಿಡುಗಡೆ ಮಾಡುವುದು ಸರಿಯಲ್ಲ ಎಂಬುದು ಕೇಂದ್ರ ಸರಕಾರದ ಪ್ರಬಲ ಅನಿಸಿಕೆ. ಸುಪ್ರೀಂಕೋರ್ಟ್​​ನಲ್ಲಿ ಕೇಂದ್ರ ಮಾಡಿದ ವಾದಕ್ಕೆ ಮನ್ನಣೆ ಸಿಗಲಿಲ್ಲ.1991ರ ಮೇ 21ರಂದು ಚೆನ್ನೈ ಸಮೀಪದ ಶ್ರೀಪೆರಂಬುದೂರು ಬಳಿ ಚುನಾವಣಾ ರ್ಯಾಲಿ ವೇಳೆ ರಾಜೀವ್ ಗಾಂಧಿ ಅವರನ್ನ ಎಲ್​ಟಿಟಿಇ ಸಂಘಟನೆಯವರು ಹತ್ಯೆಗೈಯಲಾಗಿತ್ತು. ಧನು ಎಂಬಾಕೆ ರಾಜೀವ್​ಗೆ ಹಾಕಿದ ಹಾರದಲ್ಲಿ ಬಾಂಬ್ ಅಡಗಿಸಿಟ್ಟಿದ್ದಳು. ಅದು ಸ್ಫೋಟಗೊಂಡು ರಾಜೀವ್, ಧನು ಸೇರಿ 15 ಮಂದಿ ಬಲಿಯಾಗಿದ್ದರು. ಆ ಪ್ರಕರಣದಲ್ಲಿ ಸಂಚು ರೂಪಿಸಿದ್ದ ವ್ಯಕ್ತಿಗಳನ್ನ ಬೆಂಗಳೂರಿನ ಕೋಣನಕುಂಟೆಯಲ್ಲಿ ಬಂಧಿಲಾಯಿತು. ಏಳು ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

Trending Now