ಸುದ್ದಿ 18 ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು
>

Street Dog: ಬೀದಿ ನಾಯಿಗೆ ಅನ್ನ ಹಾಕ್ತೀರಾ? ಹಾಗಿದ್ರೆ ಅದು ಜನರಿಗೆ ಕಚ್ಚಿದರೆ ನೀವೇ ಹೊಣೆ!

ಬೀದಿ ನಾಯಿಗಳಿಗೆ ನೆನಪಾದಾಗ ಅನ್ನ ಆಹಾರ ಹಾಕಿ, ಬಿಸ್ಕತ್ತು, ಮನೆಯಲ್ಲಿ ಉಳಿದ ನಾನ್ ವೆಜ್ ಹಾಕಿ, ಫೋಸ್ ಕೊಟ್ಟು ಫೋಟೋ ತೆಗೆಸಿಕೊಂಡು ಸುಮ್ಮನಾಗ್ತೀರಾ? ಹಾಗಿದ್ರೆ ನೀವು ಮಾಡುತ್ತಿರೋದು ಸರಿಯಲ್ಲ. ಒಂದು ವೇಳೆ ನೀವು ಆಹಾರ ಹಾಕಿ ಸಾಕುತ್ತಿರುವ ಆ ಬೀದಿ ನಾಯಿಗಳು ಯಾರನ್ನಾದರೂ ಕಚ್ಚಿದರೇ ಅದರ ಜವಾಬ್ದಾರಿ ನೀವೇ ಹೊರಬೇಕಾಗುತ್ತದೆ!

Street Dog: ಬೀದಿ ನಾಯಿಗೆ ಅನ್ನ ಹಾಕ್ತೀರಾ? ಹಾಗಿದ್ರೆ ಅದು ಜನರಿಗೆ ಕಚ್ಚಿದರೆ ನೀವೇ ಹೊಣೆ!
ಸಾಂಕೇತಿಕ ಚಿತ್ರ

ನವದೆಹಲಿ: ನೀವು ಪ್ರಾಣಿ ಪ್ರಿಯರೇ (Animal Lover)? ಅದರಲ್ಲೂ ಬೀದಿ ನಾಯಿಗಳ (Street Dogs) ಮೇಲೆ ನಿಮಗೆ ಅಪಾರ ಪ್ರೀತಿ, ಕಾಳಜಿ (Care) ಇದೆಯಾ? ಹಾಗಿದ್ರೆ ಸೂಪರ್, ನಿಮ್ಮ ಕಾಳಜಿಯನ್ನು ಮೆಚ್ಚಲೇ ಬೇಕು. ಹಾಗಂತ ಬರೀ ಬೀದಿ ನಾಯಿಗಳಿಗೆ ನೆನಪಾದಾಗ ಅನ್ನ ಆಹಾರ (Food) ಹಾಕಿ, ಬಿಸ್ಕತ್ತು (Biscuit), ಮನೆಯಲ್ಲಿ ಉಳಿದ ನಾನ್ ವೆಜ್ (Nonveg) ಹಾಕಿ, ಫೋಸ್ ಕೊಟ್ಟು ಫೋಟೋ (Photo) ತೆಗೆಸಿಕೊಂಡು ಸುಮ್ಮನಾಗ್ತೀರಾ? ಹಾಗಿದ್ರೆ ನೀವು ಮಾಡುತ್ತಿರೋದು ಸರಿಯಲ್ಲ. ಒಂದು ವೇಳೆ ನೀವು ಆಹಾರ ಹಾಕಿ ಸಾಕುತ್ತಿರುವ ಆ ಬೀದಿ ನಾಯಿಗಳು ಯಾರನ್ನಾದರೂ ಕಚ್ಚಿದರೇ ಅದರ ಜವಾಬ್ದಾರಿ ನೀವೇ ಹೊರಬೇಕಾಗುತ್ತದೆ. ಆ ನಾಯಿಯಿಂದ ಕಚ್ಚಿಸಿಕೊಂಡ ವ್ಯಕ್ತಿಯ ಚಿಕಿತ್ಸೆ (Treatment) ವೆಚ್ಚವನ್ನು ನೀವೇ ಭರಿಸಬೇಕಾಗುತ್ತದೆ. ಹೀಗಂತ ಖುದ್ದು ಸುಪ್ರೀಂ ಕೋರ್ಟೇ (Supreme Court) ಖಡಕ್ ಸೂಚನೆ ನೀಡಿದೆ.

ಬೀದಿ ನಾಯಿ ಕಚ್ಚಿದರೆ ಹೊಣೆ ಹೊರಬೇಕು

ಬೀದಿನಾಯಿ ಸಮಸ್ಯೆಯನ್ನು ಪರಿಹರಿಸಲು ತರ್ಕಬದ್ಧ ಪರಿಹಾರವನ್ನು ಕಂಡುಹಿಡಿಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೇ ಕುರಿತಾದ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಿದೆ. ಬೀದಿ ನಾಯಿಗಳ ಹಾವಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ ನ್ಯಾಯಪೀಠ, ಬೀದಿ ನಾಯಿಗಳಿಗೆ ವಾಡಿಕೆಯಂತೆ ಆಹಾರ ನೀಡುವ ಜನರನ್ನು ಅವುಗಳ ಲಸಿಕೆಗೆ ಜವಾಬ್ದಾರರನ್ನಾಗಿ ಮಾಡಬಹುದು ಮತ್ತು ಆ ಪ್ರಾಣಿಗಳು ಜನರ ಮೇಲೆ ದಾಳಿ ಮಾಡಿದರೆ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಇಂದು ಸಲಹೆ ನೀಡಿದೆ.

ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ

ಈ ಬಗ್ಗೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆಕೆ ಮಹೇಶ್ವರಿ ಅವರ ಪೀಠ, ಜನರ ಸುರಕ್ಷತೆ ಮತ್ತು ಪ್ರಾಣಿಗಳ ಹಕ್ಕುಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಹೇಳಿದೆ. ಒಬ್ಬ ವ್ಯಕ್ತಿಯ ಮೇಲೆ ದಾಳಿಯಾದರೆ ಅವರಿಗೆ ಲಸಿಕೆ ಹಾಕುವ ಮತ್ತು ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸುವ ಜವಾಬ್ದಾರಿ ಆ ನಾಯಿಗೆ ಊಟ ಹಾಕುವವನ ಮೇಲಿದೆ ಅಂತ ಪೀಠ ಅಭಿಪ್ರಾಯ ಪಟ್ಟಿದೆ.

ಇದನ್ನೂ ಓದಿ: Healthy Oil For Dogs: ನಿಮ್ಮ ನಾಯಿಗೆ ಬೇಕಾಬಿಟ್ಟಿ ಆಹಾರ ಕೊಡಬೇಡಿ, ಈ ಎಣ್ಣೆಗಳನ್ನು ಮಾತ್ರ ಬಳಸಿ ಸಾಕು

ಆರೈಕೆ ಕೇಂದ್ರಗಳಲ್ಲಿ ಆರೈಕೆ ಮಾಡಲು ಸಲಹೆ

ಬೀದಿ ನಾಯಿಗಳ ಹಾವಳಿಗೆ ಪರಿಹಾರ ಕಂಡುಕೊಳ್ಳುವುದು ಅತ್ಯಗತ್ಯ ಮತ್ತು ಬೀದಿ ನಾಯಿಗಳಿಗೆ ಆಹಾರ ನೀಡುವ ಜನರ ನಡುವೆ ಸಮತೋಲನವನ್ನು ಸೃಷ್ಟಿಸುವುದು ಮತ್ತು ಬೀದಿ ನಾಯಿಗಳ ದಾಳಿಯಿಂದ ಅಮಾಯಕ ಜನರನ್ನು ರಕ್ಷಿಸುವ ಅಗತ್ಯವಿದೆ ಎಂದು ಪೀಠವು ಒತ್ತಿಹೇಳಿತು. ಆಹಾರದ ಕೊರತೆಯಿಂದಾಗಿ ನಾಯಿಗಳು ಉಗ್ರವಾಗಬಹುದು ಅಥವಾ ಅವುಗಳು ಸೋಂಕಿಗೆ ಒಳಗಾಗಬಹುದು. ರೇಬೀಸ್ ಸೋಂಕಿತ ನಾಯಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಆರೈಕೆ ಕೇಂದ್ರದಲ್ಲಿ ಇರಿಸಬಹುದು ಎಂದು ನ್ಯಾಯಪೀಠ ಸಲಹೆ ನೀಡಿದೆ.

ಭಾರತದಲ್ಲಿ 1.5 ಕೋಟಿ ನಾಯಿ ಕಡಿತ ಪ್ರಕರಣಗಳು

2019 ರಿಂದ ಭಾರತದಲ್ಲಿ 1.5 ಕೋಟಿಗೂ ಹೆಚ್ಚು ಪ್ರಾಣಿ ಕಡಿತ ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶದಲ್ಲಿ 27,52,218, ತಮಿಳುನಾಡು 20,70,921, ಮಹಾರಾಷ್ಟ್ರ 15,75,606 ಮತ್ತು ಪಶ್ಚಿಮ ಬಂಗಾಳದಲ್ಲಿ 9,232 ಪ್ರಕರಣಗಳು ದಾಖಲಾಗಿವೆ.  ಮತ್ತೊಂದೆಡೆ ಲಕ್ಷದ್ವೀಪವು ಇದೇ ಅವಧಿಯಲ್ಲಿ ಶೂನ್ಯ ನಾಯಿ ಕಡಿತ ಪ್ರಕರಣಗಳನ್ನು ವರದಿ ಮಾಡಿದೆ.

ಇದನ್ನೂ ಓದಿ: Pune: ಬೀದಿ ನಾಯಿಗಳ ರಕ್ಷಣೆಗೆ ವಿಶಿಷ್ಟ ಕತ್ತು ಪಟ್ಟಿ ತಯಾರಿಸಿದ ಯುವಕ!

ಭಾರತದಲ್ಲಿ ಎಷ್ಟಿವೆ ಬೀದಿನಾಯಿಗಳು?

2019 ರ ಎಣಿಕೆಯ ಪ್ರಕಾರ, ಭಾರತದಲ್ಲಿ 1,53,09,355 ಬೀದಿನಾಯಿಗಳಿವೆ, ಇದು 2012 ರಲ್ಲಿ 1,71,38,349 ಕ್ಕಿಂತ ಕಡಿಮೆಯಾಗಿದೆ. ಉತ್ತರ ಪ್ರದೇಶ 20,59,261, ಒಡಿಶಾ 17,34,399 ಮತ್ತು ಮಹಾರಾಷ್ಟ್ರದಲ್ಲಿ 12,76,399 ಬೀದಿ ನಾಯಿಗಳು ಕಂಡುಬಂದಿವೆ.

Published by:Annappa Achari
First published:September 10, 2022, 21:06 IST