200, 2000 ಮೌಲ್ಯದ ಹರಿದ ನೋಟುಗಳ ಬದಲಾವಣೆಗೆ ಆರ್​ಬಿಐನಿಂದ ಹೊಸ ನಿಯಮ ಜಾರಿ

webtech_news18 , Advertorial
-ನ್ಯೂಸ್​ 18 ಕನ್ನಡನವದೆಹಲಿ, (ಸೆ.21): ಹರಿದ ನೋಟುಗಳ ಬದಲಾವಣೆಗೆ ಆರ್​ಬಿಐ ಹೊಸ ನಿಯಮ ಜಾರಿಗೆ ತಂದಿದ್ದು, 200 ಮತ್ತು 2000 ಮೌಲ್ಯದ ನೋಟು ಸೇರಿದಂತೆ ಹರಿದ ಎಲ್ಲಾ ಹೊಸ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.


ನೋಟು ಅಮಾನ್ಯೀಕರಣದ ನಂತರ ಬಿಡುಗಡೆಯಾದ ಹೊಸ ನೋಟುಗಳ ಬದಲಾವಣೆಗೆ ಆರ್​ಬಿಐ ಈ ಹೊಸ ನಿಯಮವನ್ನು ರೂಪಿಸಿದೆ. ಈ ಹಿಂದೆ ಬಿಡುಗಡೆ ಮಾಡಿದ ಆರ್​ಬಿಐ ನಿಯಮಾವಳಿಗಳಲ್ಲಿ ಹರಿದ 2 ಸಾವಿರ ಹೊಸ ನೋಟುಗಳ ಬದಲಾವಣೆಗೆ ನಿಯಮಗಳನ್ನು ಸೇರಿಸಿರಲಿಲ್ಲ. ಹಾಗಾಗಿ ಈ ನೋಟುಗಳ ಬದಲಾವಣೆ ಸಾಧ್ಯವಾಗಿರಲಿಲ್ಲ.ಇದೀಗ ಆರ್​ಬಿಐ ಹೊಸ ನಿಯಮ ಜಾರಿಗೆ ತಂದಿದ್ದು, ಹರಿದ ನೋಟುಗಳ ಪೂರ್ಣ ಅಥವಾ ಅರ್ಧ ಮೌಲ್ಯವನ್ನು ವಾಪಸ್​ ಪಡೆಯಬಹುದಾಗಿದೆ. ಎಷ್ಟು ಅಳತೆಯಲ್ಲಿ ಹರಿದ ನೋಟುಗಳಿಗೆ ಎಷ್ಟು ಮೌಲ್ಯ ನೀಡಲಾಗುತ್ತದೆ ಎಂದು ಆರ್​ಬಿಐ ನಿಯಮಾವಳಿ ಪ್ರಕಟಿಸಿದೆ.  ಹೊಸ 2 ಸಾವಿರ ನೋಟಿನ ಒಟ್ಟು ಅಳತೆ 109.56 ಚದರ ಸೆ.ಮೀ ಇದ್ದು, ಕನಿಷ್ಟ 80 ಚದರ ಸೆಂಟಿಮೀಟರ್​​ ಹರಿದ 2 ಸಾವಿರ ನೋಟಿಗೆ ಅದರ ಪೂರ್ಣ ಮೌಲ್ಯವನ್ನು ಪಡೆಯಬಹುದಾಗಿದೆ. 80 ಚದರ ಸೆಂಟಿಮೀಟರ್​ಗಿಂತಲೂ ಹೆಚ್ಚು ಹರಿದ ಹಾಗೂ 40 ಚದರ ಸೆಂಟಿಮೀಟರ್​ಗಿಂತಲೂ ಕಡಿಮೆ ಹರಿದ 2 ಸಾವಿರ ಮೌಲ್ಯದ ನೋಟಿಗೆ ಅರ್ಧ ಮೌಲ್ಯವನ್ನು ಪಡೆಯಬಹುದಾಗಿದೆ.ಆರ್​ಬಿಐ ಬಿಡುಗಡೆ ಮಾಡಿರುವ ಹೊಸ ನೋಟುಗಳಾದ 500, 200, 100, 50, 20, 10 ಎಲ್ಲ ನೋಟುಗಳನ್ನು ಹೊಸ ನಿಯಮದ ಅನ್ವಯ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಬದಲಾವಣೆ ಮಾಡಲು ಹಾಗೂ ಮೌಲ್ಯ ಪಡೆಯಲು ನೋಟುಗಳು ಹರಿದಿರಬೇಕಾದ ಪರಿಮಾಣವನ್ನು ಆರ್​ಬಿಐ ತಿಳಿಸಿದೆ.

Trending Now