ಪಿಎನ್​ಬಿ ಬ್ಯಾಂಕ್ ವಂಚಕ ನೀರವ್ ಮೋದಿ ಸಹೋದರಿಯ ವಿರುದ್ಧ ರೆಡ್​ ಕಾರ್ನರ್​​ ನೋಟಿಸ್​​

webtech_news18 , Advertorial
ನ್ಯೂಸ್ 18 ಕನ್ನಡನವದೆಹಲಿ (ಸೆ.10) :  ಪಂಜಾಬ್ ನ್ಯಾಷನಲ್ ಗೆ ಬಹುಕೋಟಿ ವಂಚಿಸಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ ನೀರವ್ ಮೋದಿಗೆ ಕಷ್ಟಗಳ ಮೇಲೆ  ಕಷ್ಟಗಳು  ಎದುರಾಗುತ್ತಿವೆ.


ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಂತರಾಷ್ಟ್ರೀಯ ಪೊಲೀಸ್ ಸಂಸ್ಥೆ ಇಂಟರ್​ ಪೋಲ್ ನೀರವ್ ಮೋದಿ ಸಹೋದರಿ ಪುರ್ವಿ ಮೋದಿ ವಿರುದ್ದ ರೆಡ್ ಕಾರ್ನರ್ ನೋಟಿಸ್ ಹೊರಡಿದೆ.ಪಿಎನ್​ಬಿ ಹಗರಣ: ನೀರವ್ ಮೋದಿ ವಿರುದ್ಧ ಇಂಟರ್ಪೋಲ್​ನಿಂದ ರೆಡ್ ಕಾರ್ನರ್ ನೋಟಿಸ್ವಾರದ ಹಿಂದೆ ನೀರವ್ ಮೋದಿ ಸಹಚರ ಫೈರ್ ಸ್ಟಾರ್ ಸಿಇಒ ಮಿಹಿರ್ ಬನ್ಸಾಲಿ ವಿರುದ್ಧ ರೆಡ್​ ಕಾರ್ನರ್ ನೋಟಿಸ್ ಹೊರಡಿಸಿತ್ತು. ಇದೀಗ ಅವರ ಸಹೋದರಿಯ ವಿರುದ್ದ ನೋಟಿಸ್ ಹೊರಡಿಸಿದೆ.ಇನ್ನು ನೀರವ್ ಮೋದಿ ಹಗರಣಕ್ಕೆ ಸಂಬಂಧಿಸಿದಂತೆ  ಕೇಂದ್ರದ ವಿರುದ್ಧ ವಿಪಕ್ಷಗಳು ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಕುಡ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಇಂಟರ್ ಪೋಲ್ ಸಹಾಯ ಕೇಳಿತ್ತು ಎನ್ನಲಾಗಿದೆ.

Trending Now