ಸುಪ್ರೀಂ ಕೋರ್ಟ್​ ನಮ್ಮದೇ, ರಾಮಮಂದಿರ ನಿರ್ಮಾಣ ಖಚಿತ; ಉತ್ತರ ಪ್ರದೇಶ ಸಚಿವರ ವಿವಾದಾತ್ಮಕ ಹೇಳಿಕೆ

webtech_news18 , Advertorial
ನ್ಯೂಸ್​ 18 ಕನ್ನಡಲಕ್ನೋ (ಸೆ.9): ಸುಪ್ರೀಂ ಕೋರ್ಟ್​ ನಮ್ಮದು. ನಾವು ರಾಮಮಂದಿರವನ್ನು ನಿರ್ಮಾಣ ಮಾಡಿಯೇ ತಿರುತ್ತೇವೆ ಎಂದು  ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್​ ಸರ್ಕಾರದ ಸಚಿವ ಮುಕುಟ್​ ಬಿಹಾರಿ ವರ್ಮಾ ತಿಳಿಸಿದ್ದಾರೆ.


ಬಿಜೆಪಿಯ ಪ್ರಮುಖ ಭರವಸೆಗಳಲ್ಲಿ ಒಂದಾದ ರಾಮಮಂದಿರ ನಿರ್ಮಾಣ ಕುರಿತು ಮಾತನಾಡಿದ ಸಹಕಾರ ಸಚಿವ, "ದೇವಾಲಯಗಳ ವಿಷಯದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದ್ದು. ರಾಮಮಂದಿರ ಅಬಿವೃದ್ಧಿ ಬಗ್ಗೆ ಜನರಿಗೆ ನಾವು ಆಶ್ವಾಸನೆ ನೀಡಿಯೇ ಅಧಿಕಾರ ಚುಕ್ಕಾಣಿ ಹಿಡಿದೆವು. ದೇವಾಲಯ ನಿರ್ಮಾಣ ನಮ್ಮ ಪ್ರಮುಖ ಗುರಿ. ನಾವು ಅದನ್ನು ಶೀಘ್ರದಲ್ಲಿ ಮಾಡುತ್ತೇವೆ ನಮ್ಮ ಮಾತಿಗೆ ನಾವು ಬದ್ಧವಾಗಿದ್ದೇವೆ" ಎಂದರು.ಈ ವಿಷಯ ಸುಪ್ರೀಂ ಕೋರ್ಟ್​ ಅಂಗಳದಲ್ಲಿರುವಾಗ ಹೇಗೆ ನೀವು ದೇವಾಲಯ ನಿರ್ಮಾಣ ಮಾಡುತ್ತೀರಾ ಎಂಬ ಬಗ್ಗೆ ಮಾತನಾಡಿದ ಅವರು, "ಸುಪ್ರೀಂ ಕೋರ್ಟ್​ ನಮ್ಮದೇ. ಅದೇ ಕಾರಣಕ್ಕೆ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಈ ವಿಷಯ ಇದೆ. ಸುಪ್ರೀಂ ಕೋರ್ಟ್​ ಕಾರ್ಯಕಾರಿಣಿ ನಮ್ಮದು. ಶಾಸಕಾಂಗ ನಮ್ಮದು. ದೇಶ ನಮ್ಮದು. ದೇವಾಲಯವೂ ನಮ್ಮದೇ" ಎಂದರು ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.ಈ ವೇಳೆ ಸಚಿವ ವರ್ಮಾ ಪಕ್ಕದಲ್ಲಿದ್ದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್​ ಮೌರ್ಯ ಈ ವಿವಾದಾತ್ಮಕ ಹೇಳಿಕೆಗೆ ಸಮಾಜಾಷಿಸಿ ನೀಡಲು ಮುಂದಾಗಿದ್ದಾರೆ, ಸುಪ್ರೀಂ ಕೋರ್ಟ್​ ಈ ದೇಶದ ಭಾಗವಾಗಿದ್ದು, ಇದು ನಮ್ಮದೇ . ಈ ಹಿನ್ನಲೆಯಲ್ಲಿ ಅಯೋಧ್ಯದಲ್ಲಿ ದೇವಾಲಯ ನಿರ್ಮಾಣವಾಗಲಿದೆ ಎಂದು ನಾವು ಹೇಳಿದೇವು ಎಂದು ಸಮರ್ಥನೆ ಮಾಡಿಕೊಂಡರು.ರಾಮಮಂದಿರ ನಿರ್ಮಾಣ ವಿಚಾರ ಆ ದೇವರು ರಾಮನ ಕೈಯಲ್ಲೇ ಇದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹೇಳಿಕೆ ಬೆನ್ನಲ್ಲೇ ವರ್ಮ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Trending Now