ಭಾರತ್​​ ಬಂದ್​ ಬಿಸಿ; ಪೆಟ್ರೋಲ್​,ಡಿಸೇಲ್​ ಮೇಲೆ  ಶೇ.4ರಷ್ಟು ವ್ಯಾಟ್​ ಕಡಿತಗೊಳಿಸಿದ ರಾಜಸ್ಥಾನ ಸಿಎಂ

webtech_news18 , Advertorial
ನ್ಯೂಸ್​ 18 ಕನ್ನಡಜೈಪುರ (ಸೆ.9): ಇಂಧನ ಬೆಲೆ ಹೆಚ್ಚಳ ವಿರೋಧಿಸಿ ಸೋಮವಾರ ಭಾರತ್​ ಬಂದ್​ಗೆ ಕಾಂಗ್ರೆಸ್​ ಸೇರಿದಂತೆ ವಿಪಕ್ಷಗಳು ಕರೆ ನೀಡಿರುವ ಬಂದ್​ ಬಿಸಿ ರಾಜಸ್ಥಾನ ಸರ್ಕಾರಕ್ಕೆ ಮುಟ್ಟಿದೆ. ಈ ಹಿನ್ನಲೆಯಲ್ಲಿ ಪೆಟ್ರೋಲ್​ ಮತ್ತು ಡಿಸೇಲ್​ ಮೇಲಿಮ ಶೆ 4ರಷ್ಟು ಮೌಲವರ್ಧಿತ ತೆರಿಗೆಯನ್ನು ಕಡಿತ ಮಾಡಲು ಮುಂದಾಗಿದ್ದಾರೆ.


ಭಾನುವಾರ ರಾತ್ರಿ ಈ ಕುರಿತು ಸ್ಪಷ್ಟನೆ ನೀಡಿದ ರಾಜಸ್ಥಾನ ಮುಕ್ಯಮಂತ್ರಿ ವಸುಂಧರ ರಾಜೇ ಪೆಟ್ರೋಲ್​, ಡಿಸೇಲ್​ ಮೇಲಿನ ಬೆಲೆ ರೂ 2.5ದಷ್ಟು ಕಡಿತಗೊಳಿಸಲಾಗಿದೆ ಎಂದರು,ಪೆಟ್ರೋಲ್​ ಮೇಲೆ 30ರಿಂದ 26 ರಷ್ಟು ಹಾಗೂ ಡಿಸೇಲ್​ ಮೇಲೆ 22 ರಿಂದ 18ರಷ್ಟು ವ್ಯಾಟ್​ ಕಡಿತಗೊಳಿಸಲಾಗಿದೆ. ಈ ಕಡಿತದಿಂದಾಗಿ 2,000 ಕೋಟಿ ಖರ್ಚು ಸರ್ಕಾರದ ಮೇಲೆ ಬೀಳಲಿದೆ ಎಂದರು.ಭಾನುವಾರ ಕೂಡ ಕಚ್ಚಾ ತೈಲ ಏರಿಕೆ ಕಂಡಿದ್ದು, ರೂಪಾಯಿ ಮೌಲ್ಯ ಕುಸಿತ ಮುಂದುವರೆಸಿದೆ, ಈ ಹಿನ್ನಲೆಯಲ್ಲಿ ವಿಪಕ್ಷಗಳು ಸೋಮವಾರ ಬಂದ್​ಗೆ ಕರೆ ನೀಡಿದೆ.ರಾಜಸ್ಥಾನ ಮುಖ್ಯಮಂತ್ರಿಗಳ ಕ್ರಮದ ವಿರುದ್ಧ ವಾಗ್ದಾಳಿ ನಡೆಸಿರು ಗೆಹ್ಲೋಟ್​  ದೇಶವ್ಯಾಪಿ ಕಾಂಗ್ರೆಸ್​ ಬಂದ್​ಗೆ ಕರೆ ನೀಡಿದ ಹಿನ್ನಲೆ ವಸುಂಧರ ರಾಜೇ ಬೆದರಿ ವ್ಯಾಟ್​ ಇಳಿಸಲು ಮುಂದಾಗಿದ್ದಾರೆ ಎಂದಿದ್ದಾರೆ. 


ಅಲ್ಲದೇ ವ್ಯಾಟ್​ ಅನ್ನು ಶೇ. 4ರಷ್ಟು ಕಡಿತಗೊಳಿಸಿರುವುದು ಸಮಾಧಾನಕರವಲ್ಲ. ಗ್ಯಾಸ್​ ಸಿಲಿಂಡರ್​ ಮೇಲಿನ ತೆರಿಗೆಯನ್ನು ತೆಗೆಯಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.ಈ ವರ್ಷದ ಅಂತ್ಯದಲ್ಲ ವಿಧಾನಸಭಾ ಚುನಾವಣೆಗೆ ರಾಜಸ್ಥಾನ ಸಜ್ಜಾಗಿರುವುದರಿಂದ ಜನರ ಓಲೈಕೆಗಾಗಿ ಅಲ್ಲಿನ ನಾಯಕರು ಕಸರತ್ತು ಮಾಡುತ್ತಿದ್ದಾರೆ.

Trending Now