ದಾಖಲೆಯ ಏರಿಕೆ ಕಂಡ ಇಂಧನ ಬೆಲೆ; ಮುಂಬೈನಲ್ಲಿ ಪೆಟ್ರೋಲ್ 87.89​, ಡೀಸೆಲ್​ 77.09 ರೂ.ಗೆ ಮಾರಾಟ

webtech_news18 , Advertorial
ನ್ಯೂಸ್​18 ಕನ್ನಡನವದೆಹಲಿ (ಸೆ. 9): ಪೆಟ್ರೋಲ್​ ಬೆಲೆ ಇಂದು ದಾಖಲೆಯ ಏರಿಕೆ ಕಂಡಿದ್ದು, ಮುಂಬೈನಲ್ಲಿ ಒಂದು ಲೀಟರ್​ ಪೆಟ್ರೋಲ್​ಗೆ 87.89 ರೂ. ಮತ್ತು ಡೀಸೆಲ್​ 77.09 ರೂ. ದಾಖಲಾಗಿದೆ.

ಇಂಧನ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಇದರಿಂದ ಬಡ ಮತ್ತು ಮಧ್ಯಮವರ್ಗದವರ ಮೇಲಿನ ಹೊರೆ ಹೆಚ್ಚಾಗುತ್ತಲೇ ಇದೆ. ನವದೆಹಲಿಯಲ್ಲಿ ಪೆಟ್ರೋಲ್​ಗೆ 80.50 ರೂ., ಡೀಸೆಲ್​ಗೆ 72.61 ರೂ. ಮಾರಾಟವಾಗುತ್ತಿದೆ. ಕೋಲ್ಕತದಲ್ಲಿ ಪೆಟ್ರೋಲ್​ 83.39 ರೂ., ಡೀಸೆಲ್​ 75.46 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್​ 83.66 ಮತ್ತು ಡೀಸೆಲ್ ದರ 76.75 ಇದೆ.ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ದೆಹಲಿಯಲ್ಲಿ ಪೆಟ್ರೋಲ್​ ದರ 10.41 ರೂ. ಹೆಚ್ಚಾಗಿದೆ. ಡೀಸೆಲ್​ ದರ 12.81 ರೂ. ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್​ ದರ 83.22 ರೂ. ಮತ್ತು ಡೀಸೆಲ್​ 75.03 ರೂ. ದಾಖಲಾಗಿತ್ತು.ಇಂಧನ ದರದ ಹೆಚ್ಚಳವನ್ನು ವಿರೋಧಿಸಿ ನಾಳೆ ಕಾಂಗ್ರೆಸ್​ ಪಕ್ಷ ದೇಶಾದ್ಯಂತ ಭಾರತ್​ ಬಂದ್​ ಆಯೋಜಿಸಿದೆ.  ಮಹಾರಾಷ್ಟ್ರದಲ್ಲಿ ಶಿವಸೇನಾ ಪಕ್ಷದಿಂದ ಮೋದಿ ಅವರ ಭರವಸೆಯ ಅಚ್ಚೇ ದಿನ್​ ಎಂದರೆ ಇದೇನೋಡಿ ಎಂದು ಪೆಟ್ರೋಲ್​ ದರದ ಪಟ್ಟಿಯನ್ನು ಹಾಕಿ ಕೇಂದ್ರ ಸರ್ಕಾರವನ್ನು ಅಣಕಿಸಲಾಗುತ್ತಿದೆ. 


ಇಂಡಿಯನ್​ ಆಯಿಲ್ ಕಾರ್ಪೋರೇಷನ್​ ಪ್ರಕಾರ ಪೆಟ್ರೋಲ್​ ಬೆಲೆ ಏರುತ್ತಲೇ ಇದೆ. ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರಗಳು ಹೆಚ್ಚುತ್ತಿವೆ. ಅದರ ಜೊತೆಗೆ ಡಾಲರ್​ ಎದುರು ರೂಪಾಯಿ ಮೌಲ್ಯ ಇಳಿಮುಖವಾಗಿರುವುದ ಕೂಡ ಇಂಧನ ಬೆಲೆ ಏರಿಕೆಗೆ ಮತ್ತೊಂದು ಮುಖ್ಯ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

Trending Now