ಭಾರತ್​ ಬಂದ್​ ನಂತರವೂ ದೇಶದಲ್ಲಿ ತೈಲ​ ಬೆಲೆ ಏರಿಕೆ; 90 ರ ಗಡಿ ದಾಟಿದ ಪೆಟ್ರೋಲ್​ ದರ!

webtech_news18 , Advertorial
-ನ್ಯೂಸ್​ 18 ಕನ್ನಡನವದೆಹಲಿ,(ಸೆ.11): ತೈಲ ಬೆಲೆ ಏರಿಕೆ ವಿರೋಧಿಸಿ ಸೋಮವಾರ ವಿರೋಧ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಸೇರಿ ಭಾರತ್​ ಬಂದ್​ ನಡೆಸಿ, ಪ್ರತಿಭಟನೆ ಮಾಡಿದ್ದರೂ ಸಹ ಮಂಗಳವಾರ ಪೆಟ್ರೋಲ್​ ಬೆಲೆಯಲ್ಲಿ ಏರಿಕೆ ಕಂಡಿದೆ.


ರಾಜಧಾನಿ ನವದೆಹಲಿ, ಮುಂಬೈ ಸೇರಿದಂತೆ ಇನ್ನೂ ಪ್ರಮುಖ ನಗರಗಳಲ್ಲಿ ಡೀಸೆಲ್​ ಮತ್ತು ಪೆಟ್ರೋಲ್​ ದರ ನಿನ್ನೆಗಿಂತ ಅಧಿಕವಾಗಿದೆ. ದೆಹಲಿಯಲ್ಲಿ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 80.87 ರೂ.  ಡೀಸೆಲ್​ ಬೆಲೆ ಪ್ರತಿ ಲೀಟರ್​ಗೆ 72.97 ರೂ.ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್​ಗೆ  88.26 ರೂ.  ಡೀಸೆಲ್​ಗೆ 77.47 ರೂ. ಅಧಿಕವಾಗಿದೆ. ಮಹಾರಾಷ್ಟ್ರದ ಪರ್ಬಾನಿ ನಗರದಲ್ಲಿ ಮಂಗಳವಾರ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 90.05 ಆಗಿದೆ.ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಸತತ ಬದಲಾವಣೆಯಾಗುತ್ತಿರುವುದರಿಂದ ದೇಶದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದೆ. ಮೂರು ವಾರಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ 3.65 ರೂ, ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ 4.06 ರೂ ಹೆಚ್ಚಳವಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದ್ದು, ದೇಶದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ.ತೈಲ ಬೆಲೆ ಎರಿಕೆ ವಿರೋಧಿಸಿ ಸೋಮವಾರ ದೇಶಾದ್ಯಂತ ಬಂದ್​ಗೆ ಕರೆ ನೀಡಿ ಪ್ರತಿಭಟನೆ ನಡೆಸಿದ್ದರೂ ಸಹ, ಕೇಂದ್ರ ಸರ್ಕಾರ ಇಂಧನದ ಮೇಲೆ ವಿಧಿಸುತ್ತಿರುವ ತೆರಿಗೆಯನ್ನು ಕಡಿತಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.ಸೋಮವಾರ ಭಾರತ್​ ಬಂದ್​ಗೆ ಬೆಂಬಲಿಸಿದ 4 ರಾಜ್ಯಗಳಲ್ಲಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಆಂಧ್ರಪ್ರದೇಶ ಪೆಟ್ರೋಲ್​ಗೆ 22.15 ರೂ, ಡೀಸೆಲ್​ಗೆ 16.87 ರೂ., ಕರ್ನಾಟಕ ಪೆಟ್ರೋಲ್​ಗೆ 18.88 ರೂ, ಡೀಸೆಲ್​ಗೆ 12.23 ರೂ., ಕೇರಳ ಪೆಟ್ರೋಲ್​ಗೆ ​ 19.09 ರೂ. ಡೀಸೆಲ್​​ಗೆ 14.51 ರೂ. ಮತ್ತು ಪಂಜಾಬ್ ಪೆಟ್ರೋಲ್​ಗೆ​ 21.81 ರೂ. ಡೀಸೆಲ್​ಗೆ 10.07 ರೂ. ತೆರಿಗೆ ಸಂಗ್ರಹ ಮಾಡಿವೆ ಎಂದು ಪಿಟಿಐ ವರದಿ ಮಾಡಿದೆ.ಪೆಟ್ರೋಲ್ ದರದಲ್ಲಿ ಮುಂಬೈ ಶೇ. 39.12 ಗರಿಷ್ಠ ವ್ಯಾಟ್ ಹೊಂದಿದ್ದರೆ, ತೆಲಂಗಾಣದಲ್ಲಿ ಡೀಸೆಲ್ ಮೇಲೆ ಶೇ. 26 ರಷ್ಟು ಗರಿಷ್ಠ ವ್ಯಾಟ್ ಇದೆ. ದೆಹಲಿ ಪೆಟ್ರೋಲ್ ಮೇಲೆ ಶೇ.27 ರಷ್ಟು, ಮತ್ತು ಡೀಸೆಲ್​ ಮೇಲೆ ಶೇ. 17.24 ರಷ್ಟು ವ್ಯಾಟ್ ವಿಧಿಸಿದೆ.

Trending Now