ಉತ್ತರ ಪ್ರದೇಶ, ಬಿಹಾರ ಹಾಗೂ ಅಸ್ಸಾಂನಲ್ಲಿ ಕಂಪಿಸಿದ ಭೂಮಿ: ಮನೆಗಳಿಂದ ಹೊರಬಂದ ಜನರು

webtech_news18
ನ್ಯೂಸ್​ 18 ಕನ್ನಡಅಸ್ಸಾಂ(ಸೆ.12): ಉತ್ತರ ಪ್ರದೇಶ, ಬಿಹಾರ ಹಾಗೂಗು ಅಸ್ಸಾಂನ ಕೆಲ ಪ್ರದೇಶಗಳಲ್ಲಿ ಬುಧವಾರ ಬೆಳಗ್ಗೆ ಸುಮಾರು 10 ಗಂಟೆಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ತಮ್ಮ ಮನೆಗಳಿಂದ ಓಡಿ ಬಂಣದಿದ್ದಾಋಎ. ಅಸ್ಸಾಂ ಹಾಗೂ ಬಿಹಾರದ ಉತ್ತರ ಪೂರ್ವ ಪ್ರದೇಶಗಳನ್ನು ಹೊರತುಪಡಿಸಿ ಪಶ್ಚಿಮ ಬಂಗಾಳ, ನಾಗಾಲ್ಯಾಂಡ್​, ಉತ್ತರಖಂಡ್​ನ ಕೆಲ ಪ್ರದೇಶಗಳಲ್ಲೂ ಭೂಕಂಪನದ ಅನುಭವವಾಗಿದೆ ಎನ್ನಲಾಗಿದೆ.

ಭೂಕಂಪನ ಸಮೀಕ್ಷಾ ಸಂಸ್ಥೆಯು ಅಸ್ಸಾಂನ ಕೋಕ್ರಾಝಾರ್​ ಇದರ ಕೇಂದ್ರ ಬಿಂದುವಾಗಿತ್ತು ಎನ್ನುವ ಮೂಲಕ ಭೂಮಿ ಕಂಪಿಸಿರುವುದನ್ನು ಖಚಿತಪಡಿಸಿದ್ದಾರೆ. ಇವರು ನೀಡಿರುವ ವರದಿಯಲ್ಲಿ ಬೆಳಗ್ಗೆ ಸರಿಯಾಗಿ 10 ಗಂಟೆ 20 ನಿಮಿಷ 48 ಸೆಕೆಂಡ್​ಗೆ ಭೂಮಿ ಕಂಪಿಸಿದ್ದು, ಸುಮಾರು 15 ನಿಮಿಷಗಳ ಕಾಲ ಭೂಮಿ ಅಲುಗಾಡಿರುವ ಅನುಭವವಾಗಿದೆ ಎಂದು ತಿಳಿದು ಬಂದಿದೆ. ಭೂಕಂಪನದ ಬಳಿಕ ಹಲವಾರು ಮಂದಿ ತಮ್ಮ ಮನೆಗಳಿಂದ ಹೊರಗೋಡಿ ಬಂದಿದ್ದಾರೆ.ಈವರೆಗೂ ಭೂಕಂಪನದ ತೀವ್ರತೆ ಎಷ್ಟಿತ್ತು ಎಂಬುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲವಾದರೂ ರಿಕ್ಟರ್​ ಮಾಪನದಲ್ಲಿ ಇದರ ಕಂಪನದ ತೀವ್ರತೆ 5 ರಷ್ಟು ದಾಖಲಾಗಿದೆ. ಇನ್ನು ಯಾವುದೇ ಪ್ರದೆಶದಲ್ಲೂ ಸಾವು ನೋವುಗಳಾಗಿರುವ ವರದಿಯೂ ಕೇಳಿ ಬಂದಿಲ್ಲ.ಇದಕ್ಕೂ ಮೊದಲು ಇಂದು ಮುಂಜಾನೆ ಜಮ್ಮು ಕಾಶ್ಮೀರ ಹಾಗೂ ಹರ್ಯಾಣದಲ್ಲಿ ಕಡಿಮೆ ತೀವ್ರತೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತೆಂದು ವರದಿಯಾಗಿತ್ತು. ಅತ್ತ ಹರ್ಯಾಣದಲ್ಲಿ ಝಜ್ಜರ್​ ಭೂಕಂಪನದ ಕೇಂದ್ರ ಬಿಂದು ಎಂದು ದಾಖಲಾಗಿತ್ತು.

Trending Now