ನ್ಯಾಷನಲ್ ಹೆರಾಲ್ಡ್ ಪ್ರಕರಣ: ದಿಲ್ಲಿ ಹೈಕೋರ್ಟ್​ನಲ್ಲಿ ಸೋನಿಯಾ, ರಾಹುಲ್ ಅರ್ಜಿ ವಜಾ

webtech_news18
- ನ್ಯೂಸ್18 ಕನ್ನಡನವದೆಹಲಿ(ಸೆ. 10): ಬಿಜೆಪಿ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ ಹಾಕಿದ ಉರುಳು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಬಾಧಿಸುತ್ತಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ 2011-12ರ ಅವಧಿಯಲ್ಲಿನ ತಮ್ಮ ತೆರಿಗೆ ಮೌಲ್ಯಮಾಪನ(ಟ್ಯಾಕ್ಸ್ ಅಸ್ಸೆಸ್ಮೆಂಟ್)ವನ್ನು ಪುನರಾರಂಭಿಸುವ ಕಾರ್ಯವನ್ನು ಪ್ರಶ್ನಿಸಿ ಕಾಂಗ್ರೆಸ್​ನ ಸರ್ವೋಚ್ಚ ಮುಖಂಡರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ನ್ಯಾ| ಎಸ್. ರವೀಂದ್ರ ಭಟ್ ಮತ್ತು ನ್ಯಾ| ಎ.ಕೆ. ಚಾವ್ಲಾ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠವು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಆಸ್ಕರ್ ಫರ್ನಾಂಡಿಸ್ ಅವರ ಅರ್ಜಿಗಳನ್ನ ವಜಾಗೊಳಿಸಿತು.


ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಮಧ, ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ ಖಾಸಗಿ ಕ್ರಿಮಿನಲ್ ದೂರಿನ ಆಧಾರದ ಮೇಲೆ ನಡೆದ ತನಿಖೆಯಿಂದ ಕಾಂಗ್ರೆಸ್ ಮುಖಂಡರ ತೆರಿಗೆ ವಂಚನೆ ಪ್ರಸಂಗಗಳು ಬೆಳಕಿಗೆ ಬಂದಿದ್ದವು.ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲಿಕ ಸಂಸ್ಥೆಯಾದ ಎಜೆಎಲ್ ಅನ್ನು ಅಕ್ರಮ ಮಾರ್ಗದಲ್ಲಿ ವಶಕ್ಕೆ ತೆಗೆದುಕೊಂಡ ಗಂಭೀರ ಆರೋಪ ರಾಹುಲ್ ಗಾಂಧಿ ಮತ್ತಿತರರ ಮೇಲಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಒಡೆತನದ ಯಂಗ್ ಇಂಡಿಯನ್ ಸಂಸ್ಥೆಯು ಅಕ್ರಮವಾಗಿ ಎಜೆಎಲ್​ನ್ನು ಖರೀದಿಸಿತು. ಎಜೆಎಲ್ ಹೆಸರಿನಲ್ಲಿದ್ದ ಅಪಾರ ಸ್ಥಿರಾಸ್ತಿಯನ್ನು ದೋಚಲು ರಾಹುಲ್ ಮತ್ತಿತರರು ಕ್ರಿಮಿನಲ್ ಸಂಚು ರೂಪಿಸಿದ್ದರೆಂಬುದು ಸ್ವಾಮಿ ಆರೋಪ. 2011-12ರ ಅವಧಿಯಲ್ಲಿ ತೆರಿಗೆ ಮೌಲ್ಯಮಾಪನದ ಪ್ರಕಾರ ಯಂಗ್ ಇಂಡಿಯನ್ ಸಂಸ್ಥೆಯಲ್ಲಿನ ರಾಹುಲ್ ಆದಾಯವು 58 ಲಕ್ಷ ಮಾತ್ರ ಎಂದಿತ್ತು. ಆದರೆ, ಅದರ ಮರುಮೌಲ್ಯಮಾಪನ ಮಾಡಿದ ವೇಳೆ ಆ ಮೊತ್ತವು ಬರೋಬ್ಬರಿ 154 ಕೋಟಿ ಎಂಬ ಲೆಕ್ಕಕ್ಕೆ ಬರಲಾಗಿದೆ.

Trending Now