ಪೆಟ್ರೋಲ್ ಬೆಲೆ ನಿಗದಿಯಾಗೋದು ಹೇಗೆ? ಕೇಂದ್ರ ಮತ್ತು ರಾಜ್ಯಗಳ ತೆರಿಗೆ ಪಾಲು ಎಷ್ಟು? ಇಲ್ಲಿದೆ ಫುಲ್ ಡೀಟೇಲ್ಸ್

webtech_news18
- ನ್ಯೂಸ್18 ಕನ್ನಡಬೆಂಗಳೂರು: ಮೋದಿ ಸರಕಾರದ ಬಂದ ನಂತರ ಪೆಟ್ರೋಲ್ ಮತ್ತು ಡೀಸೆಲ್​ಗೆ ಮಾರುಕಟ್ಟೆ ಆಧಾರಿತ ಬೆಲೆ ನಿಗದಿ ಪದ್ಧತಿಯನ್ನು ಜಾರಿಗೆ ತಂದಿದೆ. ಅದಾದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬಹುತೇ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಈ ಬೆಲೆ ಏರಿಕೆಗೆ ಕೇಂದ್ರ ಸರಕಾರವೇ ಕಾರಣ ಎಂದು ವಿಪಕ್ಷಗಳು ದೂರುತ್ತಿವೆ. ಅಂತೆಯೇ ಭಾರತ್ ಬಂದ್ ಕೂಡ ನಡೆಸಿ ಪ್ರತಿಭಟಿಸಲಾಗಿದೆ. ಹಾಗೆಯೇ, ಪೆಟ್ರೋಲ್ ಬೆಲೆ ಒಂದೊಂದು ರಾಜ್ಯದಲ್ಲೂ ವ್ಯತ್ಯಾಸವಾಗಿರುವುದನ್ನು ಹಲವರು ಗಮನಿಸಿರಬಹುದು. ಒಂದು ರಾಜ್ಯದಲ್ಲೇ ವಿವಿಧ ಪ್ರದೇಶಗಳ ನಡುವೆಯೂ ಸ್ವಲ್ಪ ಬೆಲೆ ವ್ಯತ್ಯಾಸ ಇರುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ದರಕ್ಕೆ ಕಾರಣವಾಗುವ ಅಂಶಗಳ್ಯಾವುವು?


ಪೆಟ್ರೋಲ್ ಬೆಲೆಗೆ ಕಾರಣವಾಗುವ ಅಂಶಗಳು:
1) ಮೂಲ ಪೆಟ್ರೋಲ್ ಬೆಲೆ ಮತ್ತು ಸರಬರಾಜು ವೆಚ್ಚ: ಬ್ಯಾರೆಲ್ ಲೆಕ್ಕದಲ್ಲಿ
2) ಕರೆನ್ಸಿ ವಿನಿಯಮ ದರ: ಡಾಲರ್ ಎದುರು ರೂಪಾಯಿ ಮೌಲ್ಯ
3) ಡೀಲರ್​ಗಳಿಗೆ ಕೊಡುವ ಮೂಲ ದರ
4) ಕೇಂದ್ರದಿಂದ ಅಬಕಾರಿ ಸುಂಕ: ಪ್ರತೀ ಲೀಟರ್ ಪೆಟ್ರೋಲ್​ಗೆ 19.48 ರೂ. ಮತ್ತು ಡೀಸೆಲ್​ಗೆ 15.33 ರೂ.
5) ಡೀಲರ್ ಕಮಿಷನ್: ಪೆಟ್ರೋಲ್​ಗೆ 3ರಿಂದ 3.65 ರೂ; ಹಾಗೂ ಡೀಸೆಲ್​ಗೆ 2ರಿಂದ 2.62 ರೂ.
6) ರಾಜ್ಯಗಳಿಂದ ವ್ಯಾಟ್ ತೆರಿಗೆ: ಪ್ರತೀ ರಾಜ್ಯವೂ ಪ್ರತ್ಯೇಕ ವ್ಯಾಟ್ ಹೇರುತ್ತದೆ. ಅದರ ದರಗಳನ್ನ ಕೆಳಗಿನ ಕೋಷ್ಟಕದಲ್ಲಿ ಕಾಣಬಹುದು.ಹಿಂದಿನ ವಾರದ ದರವನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ದೆಹಲಿಯಲ್ಲಿ ಸೆ. 3ರಂದು ಪೆಟ್ರೋಲ್ ಬೆಲೆ 79.15 ರೂಪಾಯಿ ಇತ್ತು. ಅಷ್ಟು ದರಕ್ಕೆ ಕಾರಣವಾದ ಅಂಶಗಳೇನು ಎಂಬುದನ್ನು ಈ ಕೆಳಗಿನ ಪಟ್ಟಿಯಲ್ಲಿ ನೋಡಬಹುದು.1) ಮೂಲ ಪೆಟ್ರೋಲ್ ಬೆಲೆ ಮತ್ತು ಸರಬರಾಜು ವೆಚ್ಚ: 1 ಬ್ಯಾರಲ್​ಗೆ 84.20 ಡಾಲರ್
2) ಕರೆನ್ಸಿ ವಿನಿಯಮ ದರ: ಒಂದು ಡಾಲರ್​ಗೆ 70.22 ರೂ
3) ಡೀಲರ್​ಗಳಿಗೆ ಮಾರುವ ಮೂಲ ದರ: ಲೀಟರ್​ಗೆ 39.21 ರೂ.
4) ಕೇಂದ್ರದಿಂದ ಅಬಕಾರಿ ಸುಂಕ: 19.48 ರೂ.
5) ಡೀಲರ್ ಕಮಿಷನ್: 3.63 ರೂ
6) ದಿಲ್ಲಿಯಲ್ಲಿ ವ್ಯಾಟ್ ತೆರಿಗೆ: 27%; ಅಂದರೆ 16.83 ರೂ. ಆಗುತ್ತದೆ.ಮೂರರಿಂದ ಆರವರೆಗಿನ ಅಂಶಗಳನ್ನ ಕೂಡಿಸಿದರೆ 79.15 ರೂಪಾಯಿ ದರ ಆಗುತ್ತದೆ.ತೈಲ ರಾಷ್ಟ್ರಗಳ ಅಂತಾರಾಷ್ಟ್ರೀಯ ಕಚ್ಛಾ ತೈಲ ಮಾರಾಟ ದರ ಸಮಾನವಾಗಿರುವುದಿಲ್ಲ. ಅಮೆರಿಕ ಮೊದಲಾದ ರಾಷ್ಟ್ರಗಳಿಗೆ ಕಡಿಮೆ ದರಕ್ಕೆ ತೈಲ ಸಿಗುತ್ತದೆ. ಆದರೆ, ಭಾರತ ತೆರಬೇಕಾದ ಬೆಲೆ ತುಸು ಹೆಚ್ಚು. ಇದರ ಜೊತೆಗೆ ಈ ವಹಿವಾಟು ನಡೆಯುವುದು ಡಾಲರ್ ಕರೆನ್ಸಿಯಲ್ಲೇ. ಹೀಗಾಗಿ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಷ್ಟೂ ಭಾರತ ತೆರಬೇಕಾದ ತೈಲ ಬೆಲೆ ಇನ್ನಷ್ಟು ಹೆಚ್ಚಳವಾಗುತ್ತಲೇ ಇರುತ್ತದೆ.ಕೇಂದ್ರದಿಂದ ವಿಧಿಸಲಾಗುವು ಅಬಕಾರಿ ಸುಂಕವು ನಿರ್ದಿಷ್ಟ ಮೊತ್ತದಾಗಿರುತ್ತದೆ. ಅಂತಾರಾಷ್ಟ್ರಿಯ ಬೆಲೆಗಳು ಎಷ್ಟೇ ಏರಿಳಿಕೆಯಾದರೂ ಅಬಕಾರಿ ಸುಂಕದಲ್ಲಿ ವ್ಯತ್ಯಾಸವಿರುವುದಿಲ್ಲ. ಆದರೆ, ರಾಜ್ಯಗಳು ವಿಧಿಸುವ ವ್ಯಾಟ್ ತೆರಿಗೆಯು ಶೇಕಡಾವಾರು ಲೆಕ್ಕದಲ್ಲಿರುತ್ತದೆ. ಹೀಗಾಗಿ, ಪೆಟ್ರೋಲ್ ಬೆಲೆ ಹೆಚ್ಚಳದಲ್ಲಿ ವ್ಯಾಟ್ ತೆರಿಗೆ ಪಾತ್ರ ಮಹತ್ವದ್ದಿರುತ್ತದೆ.ಪೆಟ್ರೋಲ್​ಗೆ ಹೋಲಿಸಿದರೆ ಡೀಸೆಲ್​ಗೆ ವಿಧಿಸುವ ಅಬಕಾರಿ ಸುಂಕ ಮತ್ತು ವ್ಯಾಟ್ ತೆರಿಗೆ ಮೊತ್ತ ಕಡಿಮೆಯೇ ಇದೆ. ಹೀಗಾಗಿ, ಮೂಲ ಬೆಲೆಯಲ್ಲಿ ಡೀಸೆಲ್ ದರವು ಪೆಟ್ರೋಲ್​ಗಿಂತ ಹೆಚ್ಚೇ ಇದ್ದರೂ ಕಡಿಮೆ ತೆರಿಗೆಯ ಕಾರಣದಿಂದ ರೀಟೇಲ್ ಮಾರಾಟದಲ್ಲಿ ಬೆಲೆ ಕಡಿಮೆ ಇರುತ್ತದೆ.ಇನ್ನು, ಡೀಲರ್ ಕಮಿಷನ್ ಕೂಡ ಪ್ರತೀ ಪ್ರದೇಶಕ್ಕೂ ಸ್ವಲ್ಪ ವ್ಯತ್ಯಾಸ ಹೊಂದಿರುತ್ತದೆ. ಪ್ರತೀ ಲೀಟರ್ ಪೆಟ್ರೋಲ್​ಗೆ 3ರಿಂದ 3.65 ರೂ ಡೀಲರ್ ಕಮಿಷನ್ ಇರುತ್ತದೆ. ಹಾಗೆಯೇ ಡೀಸೆಲ್​ಗೆ 2ರಿಂದ 2.62 ರೂ. ಇರುತ್ತದೆ. ಪೆಟ್ರೋಲ್ ಬಂಕ್​ ಇರುವ ಸ್ಥಳದ ಮೇಲೆ ಈ ದರ ಅನ್ವಯವಾಗುತ್ತದೆ.ತೆರಿಗೆ ಮುಕ್ತಗೊಳಿಸಿದರೆ?
ಇದು ಕಾರ್ಯಸಿಂಧುವಲ್ಲ. ಸರಕಾರದ ತೆರಿಗೆ ಸಂಗ್ರಹಕ್ಕೆ ಅತೀ ದೊಡ್ಡ ಆದಾಯ ಮೂಲವೆಂದರೆ ಪೆಟ್ರೋಲಿಯಂ ಉತ್ಪನ್ನಗಳೇ. ಇವುಗಳಿಗೆ ವಿನಾಯಿತಿ ಕೊಟ್ಟರೆ ಸರಕಾರದ ಬೊಕ್ಕಸ ತುಂಬಿಸುವುದು ಕಷ್ಟವೇ ಸರಿ. ಒಂದು ವೇಳೆ, ಕೇಂದ್ರದ ಎಕ್ಸೈಸ್ ಡ್ಯೂಟಿ ಹಾಗೂ ರಾಜ್ಯ ಸರಕಾರಗಳ ವ್ಯಾಟ್ ತೆರಿಗೆಯೆಲ್ಲವನ್ನೂ ತೆಗೆದುಹಾಕಿದರೆ ಪ್ರತೀ ಲೀಟರ್ ಪೆಟ್ರೋಲ್ ಈಗ ಸುಮಾರು 42 ರೂಪಾಯಿಗೆ ಸಿಗುತ್ತದೆ. ಡೀಸೆಲ್ 45 ರೂಪಾಯಿಗೆ ಸಿಗುತ್ತದೆ. ಅಂದರೆ, ಹೆಚ್ಚೂಕಡಿಮೆ ಅರ್ಧದಷ್ಟು ಹಣವು ತೆರಿಗೆಗೇ ಹೋಗುತ್ತದೆ.ಒಂದು ವೇಳೆ, ಪೆಟ್ರೋಲ್ ಮತ್ತು ಡೀಸೆಲ್​ನ್ನು ಜಿಎಸ್​ಟಿ ವ್ಯಾಪ್ತಿಗೆ ತಂದರೆ ಬೆಲೆಯಲ್ಲಿ ಅಂತಹ ವ್ಯತ್ಯಾಸವಾಗುವುದಿಲ್ಲ. ಯಾಕೆಂದರೆ ಜೆಎಸ್​ಟಿ ಜೊತೆಗೆ ರಾಜ್ಯಗಳೂ ಕೂಡ ವ್ಯಾಟ್​ನಂತಹ ಹೆಚ್ಚುವರಿ ತೆರಿಗೆ ವಿಧಿಸುವ ಅವಕಾಶವಿದ್ದೇ ಇರುತ್ತದೆ. ರಾಜ್ಯಗಳಿಂದ ವ್ಯಾಟ್ ತೆರಿಗೆ ಇಲ್ಲದೇ ಜಿಎಸ್​ಟಿ ಮಾತ್ರ ಅನ್ವಯವಾದರೆ ಪೆಟ್ರೋಲ್ ಬೆಲೆ ಸರಾಸರಿ 10 ರೂಪಾಯಿಗಳಷ್ಟು ಇಳಿಕೆ ಕಾಣಬಹುದು.
ರಾಜ್ಯಪೆಟ್ರೋಲ್ಡೀಸೆಲ್
ಮಹಾರಾಷ್ಟ್ರ
(ಮುಂಬೈ, ಥಾಣೆ, ನವಿ ಮುಂಬೈ)
39.12%24.78%
ಮಹಾರಾಷ್ಟ್ರ(ಇತರೆ)38.11%21.89%
ಮಧ್ಯಪ್ರದೇಶ35.78%23.22%
ಆಂಧ್ರಪ್ರದೇಶ35.77%28.08%
ಪಂಜಾಬ್35.12%16.74%
ತೆಲಂಗಾಣ33.31%26.01%
ತಮಿಳುನಾಡು32.16%24.08%
ಅಸ್ಸಾಮ್30.90%22.79%
ಕೇರಳ30.37%23.81%
ಕರ್ನಾಟಕ30.28%20.23%
ಸಿಕ್ಕಿಮ್27.87%15.71%
ಜಮ್ಮು-ಕಾಶ್ಮೀರ27.36%17.02%
ಉತ್ತರಾಖಂಡ್27.15%16.82%
ದೆಹಲಿ27%17.24%
ಉತ್ತರಪ್ರದೇಶ26.90%16.84%
ಛತ್ತೀಸ್​ಗಡ26.87%25.74%
ಹರಿಯಾಣ26.25%17.22%
ರಾಜಸ್ಥಾನ26%18%
ಜಾರ್ಖಂಡ್25.72%23.21%
ಗುಜರಾತ್25.45%25.55%
ಪಶ್ಚಿಮ ಬಂಗಾಳ25.25%17.54%
ಬಿಹಾರ24.71%18.34%
ಒಡಿಶಾ24.62%25.04%
ಹಿಮಾಚಲಪ್ರದೇಶ24.43%14.38%
ಮಣಿಪುರ23.67%13.97%
ನಾಗಾಲ್ಯಾಂಡ್23.21%13.60%
ತ್ರಿಪುರಾ23.15%16.18%
ಮೇಘಾಲಯ22.44%13.77%
ಅರುಣಾಚಲಪ್ರದೇಶ20%12.50%
ಮಿಝೋರಾಮ್18.88%11.54%
ಗೋವಾ16.66%18.88%
ಅಂಡಮಾನ್ ನಿಕೋಬಾರ್6%6%
ಚಂದೀಗಡ19.76%11.42%
ದಾದ್ರಾ-ನಾಗರ್ ಹವೇಲಿ20%15%
ದಮನ್, ದಿಯು20%15%
ಪುದುಚೇರಿ21.15%17.15%

      

Trending Now