ಚರ್ಚ್​ನ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿದ ಮಹಿಳಾ ಪಾದ್ರಿಗಳು; ನ್ಯಾಯಕ್ಕಾಗಿ ಕೇರಳದಲ್ಲಿ ಪ್ರತಿಭಟನೆ

webtech_news18 , Advertorial
ನ್ಯೂಸ್​18 ಕನ್ನಡತಿರುವನಂತಪುರಂ (ಸೆ. 9): ಮಹಿಳಾ ಪಾದ್ರಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಫ್ರಾಂಕೋ ಮುಲಕ್ಕಲ್​ ಅವರನ್ನು ಬಂಧಿಸುವಂತೆ ಆಗ್ರಹಿಸಿ ಕೇರಳದ ಕೊಟ್ಟಾಯಂ ಜಿಲ್ಲೆಯ ಕುರವಿಲಂಗಡ್​ನಲ್ಲಿ ಮಹಿಳಾ ಪಾದ್ರಿಗಳು ನಿನ್ನೆ ಪ್ರತಿಭಟನೆ ನಡೆಸಿದ್ದಾರೆ.


ಇಲ್ಲಿನ ಕ್ಯಾಥೋಲಿಕ್​ ಚರ್ಚ್​ನಲ್ಲಿ ಇದೇ ಮೊದಲ ಬಾರಿಗೆ ಬಹಿರಂಗ ಪ್ರತಿಭಟನೆ ನಡೆಸಿರುವ ಮಹಿಳಾ ಪಾದ್ರಿಗಳು ಲೈಂಗಿಕ ಶೋಷಣೆಯ ವಿರುದ್ಧ ಧ್ವನಿಯೆತ್ತಿದ್ದಾರೆ. ಅತ್ಯಾಚಾರದ ಆರೋಪ ಹೊತ್ತಿರುವ ಜಲಂಧರ್​ನ ಬಿಷಪ್​ ಫ್ರಾಂಕೋ ಮುಲಕ್ಕಲ್​ ಅವರನ್ನು ಚರ್ಚ್ ಪ್ರಾಧಿಕಾರ ಮತ್ತು ಪೊಲೀಸರು ರಕ್ಷಿಸುತ್ತಿದ್ದಾರೆ. ಬಿಷಪ್​ ವಿರುದ್ಧ ದೂರು ದಾಖಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಮಹಿಳಾ ಪಾದ್ರಿಗಳು ಆದಷ್ಟು ಬೇಗ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.Kerala: Nuns in Kochi sit in protest demanding the arrest of Bishop of Jalandhar Franco Mulakkal, accused of allegedly raping a nun. The protest, underway at High Court Junction bus station in the city, has been called by


ಜಲಂಧರ್‌ ಮೂಲದ ಬಿಷಪ್‌ ಫ್ರಾಂಕೊ ಮುಲ್ಲಾಕಲ್‌ 2014ರಿಂದ 2016ರ ಅವಧಿಯಲ್ಲಿ 13 ಬಾರಿ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಿ 44 ವರ್ಷದ ಕ್ರೈಸ್ತ ಮಹಿಳಾ ಪಾದ್ರಿಯೊಬ್ಬರು ಕೇರಳ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇನ್ನೂ ನ್ಯಾಯ ಸಿಗದ ಕಾರಣ ಕೇರಳದ ಕೊಚ್ಚಿ ಹೈಕೋರ್ಟ್​ ಮುಂದೆಯೇ ಸಂತ್ರಸ್ತೆಯ ಕುಟುಂಬದವರೊಡನೆ ಮಹಿಳಾ ಪಾದ್ರಿಗಳು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿರುವ ಕೇರಳದ ಶಾಸಕ ಪಿ.ಸಿ. ಜಾರ್ಜ್​, ತನ್ನ ಮೇಲೆ 13 ಬಾರಿ ಅತ್ಯಾಚಾರವಾದರೂ ಆಕೆ ಸುಮ್ಮನಿದ್ದಾಳೆಂದರೆ ಆಕೆ ಖಂಡಿತವಾಗಿಯೂ ವೇಶ್ಯೆಯೇ ಆಗಿರಬೇಕು. ಇಲ್ಲವಾದರೆ, ಮೊದಲ ಬಾರಿ ಲೈಂಗಿಕ ದೌರ್ಜನ್ಯವಾದಾಗಲೇ ದೂರು ನೀಡುತ್ತಿದ್ದಳು ಎನ್ನುವ ಮೂಲಕ ಮಹಿಳಾ ಪಾದ್ರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 


Trending Now