ಹೆಲ್ಮೆಟ್ ಹಾಕ್ಕೊಂಡೇ ಡಾಕ್ಟರ್ ಚಿಕಿತ್ಸೆ ಕೊಡ್ತಾರೆ, ಈ ಆಸ್ಪತ್ರೆಗೆ ಇದೆಂಥ ಸ್ಥಿತಿ ನೋಡಿ..!

webtech_news18 , Advertorial
ನ್ಯೂಸ್ 18 ಕನ್ನಡಹೈದರಾಬಾದ್ ( ಸೆ. 09) :  ವೈದ್ಯರ ಜೀವಕ್ಕೆ ಸುರಕ್ಷತೆ ಇಲ್ಲದ ಪರಿಸ್ಥಿತಿ ಹೈದರಾಬಾದ್ ನ ಒಸ್ಮಾನಿಯಾ ಆಸ್ಪತ್ರೆಯಲ್ಲಿ ಎದುರಾಗಿದೆ. ಸರ್ಕಾರದ ಆಡಳಿತಕ್ಕೆ ಒಳಪಟ್ಟಿರುವ  ಈ ಆಸ್ಪತ್ರೆಯ ಕಟ್ಟಡದ ಸ್ಥಿತಿ ಹೆಲ್ಮೆಟ್ ಹಾಕಿಕೊಂಡಿರುವ ವೈದ್ಯರನ್ನು ನೀಡಿದ್ರೆ ತಿಳಿಯುತ್ತೆ.


ಒಸ್ಮಾನಿಯಾ ಆಸ್ಪತ್ರೆಯ ಕಟ್ಟಡ ಯಾವಾಗ ಬೇಕಾದರೂ ಬೀಳಬಹುದು. ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯ ಮೇಲೆ ಕಟ್ಟಡ ಕುಸಿದು, 5 ಜನರು ಗಾಯಗೊಂಡಿದನ್ನು ನೋಡಿ ಇಲ್ಲಿನ ವೈದ್ಯರು ಹೆದರಿ ಹೋಗಿದ್ದರು. ಅಲ್ಲದೇ ಆಸ್ಪತ್ರೆಯ ಸಮರ್ಪಕ ಕಟ್ಟಡ ನಿರ್ಮಿಸಿ ಎಂದು ಸತತ 4 ತಿಂಗಳಿನಿಂದ ಪ್ರತಿಭಟನೆ ನಡೆಸಿದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ.ಆದರೆ ಆರೋಗ್ಯ ಸಚಿವ ಡಾ.ಲಕ್ಷ್ಮಾ ರೆಡ್ಡಿ ಕಟ್ಟಡ ನಿರ್ಮಿಸಿಕೊಡುವುದಾಗಿ ಬರವಸೆ ನೀಡಿದ ಮೇಲೆ ವೈದ್ಯರು ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಂಡಿದ್ದರು. ಆದರೆ, ಆರೋಗ್ಯ ಸಚಿವರು ಭರವಸೆ ನೀಡಿದರೂ ಯಾವುದೇ ರೀತಿಯ ಕಾಮಗಾರಿ ಪ್ರಗತಿಯಲಿಲ್ಲ.ಆಸ್ಪತ್ರೆಯ ಕಟ್ಟಡ ಕುಸಿಯುವುದು, ಸೀಲಿಂಗ್​​ನಿಂದ ಸಿಮೇಂಟ್​​ ಬೀಳುತ್ತಿದೆ. ಇದರಿಂದಾಗಿ ಯಾವ ಕ್ಷಣದಲ್ಲಿ ಬೇಕಾದರೂ ನೆಲಸಮ ಆಗಬಹುದಾದ ಆಸ್ಪತ್ರೆಯ ಕಟ್ಟಡಕ್ಕೆ ಇಲ್ಲಿನ ವೈದ್ಯರು ಹೆದರಿಕೊಂಡು ತಲೆಗೆ ಹೆಲ್ಮೆಟ್​ ಧರಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

Trending Now