'2022ಕ್ಕೆ ನವಭಾರತ' ನಿರ್ಮಾಣ; ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪುನರುಚ್ಚರಿಸಿದ ಬಿಜೆಪಿ

webtech_news18 , Advertorial
ನ್ಯೂಸ್ 18 ಕನ್ನಡನವದೆಹಲಿ (ಸೆ.9): ಇಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಎರಡನೇ ದಿನವಾದ ಭಾನುವಾರ '2022ಕ್ಕೆ ನವಭಾರತ' ನಿರ್ಮಾಣ ಘೋಷಣೆಯನ್ನು ಬಿಜೆಪಿ ಪುನರುಚ್ಚರಿಸಿತು ಮತ್ತು ಪ್ರಧಾನಿ ಈ ದೇಶದ ಬಲಿಷ್ಠ ನಾಯಕ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನವಭಾರತ ನಿರ್ಮಾಣ ಸಾಕಾರಗೊಳ್ಳಲಿದೆ ಎಂದು ಹೇಳಿತು.


ದೆಹಲಿಯಲ್ಲಿ ನಡೆಯುತ್ತಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಎರಡನೇ ದಿನವಾದ ಭಾನುವಾರ ಸಭೆಯಲ್ಲಿ ಪಕ್ಷದ ನಿರ್ಣಯವನ್ನು ನಿರೂಪಿಸಿದ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು, ಕೇಸರಿ ಪಕ್ಷವನ್ನು ಸೋಲಿಸಲು ವಿರೋಧ ಪಕ್ಷ ಹಗಲು ಕನಸು ಕಾಣುತ್ತಿದೆ. ಪ್ರತಿಪಕ್ಷಕ್ಕೆ ನೀತಿಯೂ ಇಲ್ಲ, ನೇತಾರರು ಇಲ್ಲ ಎಂದು ಕಾಂಗ್ರೆಸ್​ ಬಗ್ಗೆ ವ್ಯಂಗ್ಯವಾಡಿದರು.ಸುದ್ದಿಗಾರರಿಗೆ ಕಾರ್ಯಕಾರಣಿಯ ಮಾಹಿತಿ ನೀಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ನಾಲ್ಕು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಮತ್ತು 2022ಕ್ಕೆ ನವಭಾರತ ನಿರ್ಮಾಣವಾಗಲಿದೆ ಎಂದ ಅವರು "ಈ ಸರ್ಕಾರದ ದೂರದೃಷ್ಟಿ,  ಪರಿಕಲ್ಪನೆ ಮತ್ತು ಕೆಲಸವನ್ನು ಮುಂದೆ ನೋಡಲಿದ್ದಿರಿ. 2022ಕ್ಕೆ ಈ ದೇಶ ಭಯೋತ್ಪಾದನೆಮುಕ್ತ, ಜಾತಿವಾದ, ಕೋಮವಾದದಿಂದ ಮುಕ್ತವಾಗಲಿದೆ. ಮತ್ತು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸ್ವಂತ ಸೂರು ಇರಲಿದೆ," ಎಂದು ಜಾವಡೇಕರೆ ಹೇಳಿದರು.ಇದನ್ನು ಓದಿ: ದಾಖಲೆಯೊಂದಿಗೆ ಬನ್ನಿ ಚರ್ಚಿಸಲು ಸಿದ್ದ; ಕಾಂಗ್ರೆಸ್​ ನಾಯಕರಿಗೆ ಶಾ ಆಹ್ವಾನಜಾವಡೇಕರ್​ ಅವರಿಗೆ ನ್ಯೂಸ್ 18 ಪ್ರತಿನಿಧಿ ರಫೆಲ್​ ಫೈಟರ್​ ಜೆಟ್​ ಒಪ್ಪಂದದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಜನರಿಗೆ ಒಪ್ಪಂದದಲ್ಲಿ ಯಾವ ಮಧ್ಯವರ್ತಿಯೂ ಇಲ್ಲ ಎಂಬುದು ಅರ್ಥವಾಗುತ್ತದೆ. ಬೊಫೋರ್ಸ್​ ಹಗರಣದಲ್ಲಿ ಇದ್ದ ಮಧ್ಯವರ್ತಿಯಂತೆ ಇಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲ ಎಂದು ಹಿಂದಿನ ಯುಪಿಎ ಸರ್ಕಾರವನ್ನು ಟೀಕಿಸಿದರು. ರಾಮಮಂದಿರ ವಿಚಾರವಾಗಿ ಮಾತನಾಡಿದ ಜಾವಡೇಕರ್, ಇದು ಪಕ್ಷದ 2019ರ ಚುನಾವಣೆಯ ಪ್ರಮುಖ ವಿಚಾರವಾಗಲಿದೆ. ಇದನ್ನು ಕಾರ್ಯಕಾರಣಿಯ ನಿರ್ಣಯದಲ್ಲಿ ಸೇರಿಸಿಲ್ಲ ಎಂದು ಹೇಳಿದರು.ಪ್ರತಿಪಕ್ಷದ ಬಗ್ಗೆ ವಾಗ್ದಾಳಿ ನಡೆಸಿದ ಅವರು ಪ್ರತಿಪಕ್ಷದಲ್ಲಿ ಗುರಿಯೂ ಇಲ್ಲ, ನೇತಾರರು ಇಲ್ಲ ಎಂದು ಟೀಕೆ ಮಾಡಿ, ಮೋದಿ ಈ ದೇಶದ ಪ್ರಸಿದ್ಧ ನಾಯಕ. ಇನ್ನು ನಾಲ್ಕು ವರ್ಷ ಅವರು ಅಧಿಕಾರದಲ್ಲಿ ಇದ್ದರೆ, ಮೋದಿ ಅವರ ಶಕ್ತಿ ಇನ್ನೂ ಹೆಚ್ಚಾಗಲಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಿಂದಿನ ಚುನಾವಣೆಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.

Trending Now