ಯುಪಿಎ ಸರಕಾರದ ಅವಧಿಯಲ್ಲಿ ಕೆಟ್ಟ ಸಾಲವಿತ್ತು ಎಂದಿದ್ದ ಮಾಜಿ ಆರ್​ಬಿಐ ಗವರ್ನರ್ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

webtech_news18
ನ್ಯೂಸ್​​18 ಕನ್ನಡನವದೆಹಲಿ(ಸೆಪ್ಟೆಂಬರ್​​.11): ಕಾಂಗ್ರೆಸ್​​ ಯುಪಿಎ ಸರ್ಕಾರದ ಅವಧಿಯ ನಿರುಪಯುಕ್ತ ಸಾಲಕ್ಕೆ(Bad Loan​​) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರವೇ ಹೊಣೆ ಎಂಬ ಮಾಜಿ ಆರ್​ಬಿಐ ಗವರ್ನರ್​​ ಹೇಳಿಕೆಗೆ ಕಾಂಗ್ರೆಸ್​ ತಿರುಗೇಟು ನೀಡಿದೆ. ಅಲ್ಲದೇ ಎನ್​ಡಿಎ ಸರ್ಕಾರದ ಅವಧಿಯಲ್ಲಿಯೇ 9.17 ಲಕ್ಷ ಕೋಟಿ ರೂ ಸಾಲ ಹೆಚ್ಚಿದೆ ಎಂದು ಆರೋಪಿಸಿದೆ.


ಮಾಜಿ ಆರ್​​ಬಿಐ ಗವರ್ನರ್​​ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​​ ವಕ್ತಾರ ರಣದೀಪ್​​ ಸುರ್ಜೆವಾಲ ಅವರು, ಯುಪಿಎ ಸರ್ಕಾರ ಅವಧಿಯಲ್ಲಿ ಕೇವಲ 2.83 ಲಕ್ಷ ಕೋಟಿಯಷ್ಟು ನಿರುಪಯುಕ್ತ ಸಾಲವಿತ್ತು. ಬಳಿಕ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಕೇವಲ 56 ತಿಂಗಳಿನಲ್ಲಿ ನಿರುಪಯುಕ್ತ ಸಾಲದ ಪ್ರಮಾಣ 12 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ ಎಂದು ಎದುರೇಟು ನೀಡಿದರು.ಈ ಹಿಂದೆಯೇ ಪ್ರಸಕ್ತ ಸಾಲಿನ 2018 ಮಾರ್ಚ್​​ ವೇಳೆಗೆ ಮರುಪಾವತಿಯಾಗದ ಸಾಲದ ಪ್ರಮಾಣ 10.3 ಲಕ್ಷ ಕೋಟಿಯಷ್ಟು ಏರಿಕೆಯಾಗಿದೆ ಎಂದು ಬಿಜೆಪಿ ಸರ್ಕಾರವೇ ಸಂಸತ್ತಿನಲ್ಲಿ ತಿಳಿಸಿದೆ. ಈಗ ಮತ್ತಷ್ಟು ಸಾಲ ಹೆಚ್ಚಾಗಿದ್ದು, ಭಾರೀ ಗಣನೀಯವಾಗಿ ಏರಿಕೆಯಾಗಿದೆ. ಕೇವಲ 4 ವರ್ಷಗಳಲ್ಲಿ ಬರೋಬ್ಬರಿ 9.17 ಲಕ್ಷ ಕೋಟಿ ರೂಪಾಯಿ ನಿರುಪಯುಕ್ತ ಸಾಲ ಹೆಚ್ಚಿದೆ ಎಂದಿದ್ಧಾರೆ.ನಮ್ಮ ಸರ್ಕಾರದ ಅವಧಿಯ ಸಾಲಕ್ಕೆ ನಮ್ಮನ್ನು ಹೊಣೆಯಾಗಿಸುವುದೇ ಆದರೆ, ಅವರ ಸರ್ಕಾರದ ಅವಧಿಯಲ್ಲಾಗಿರುವ ಕೆಟ್ಟ ಸಾಲಕ್ಕೆ ಪ್ರಧಾನಿ ಜವಾಬ್ದಾರಿಯಾಗಲಿದ್ಧಾರೆಯೇ ಕೇಳಿ ಎಂದು ಸುರ್ಜೆವಾಲ ಸವಾಲ್​​ ಹಾಕಿದ್ದಾರೆ. ಈ ಮೂಲಕ ಮಾಜಿ ಆರ್​​ಬಿಐ ಗವರ್ನರ್​​ ಅವರ ಹೇಳಿಕೆಗೆ ಹಾಗೂ ಬಿಜೆಪಿ ಸರ್ಕಾರಕ್ಕೆ ಸುರ್ಜೆವಾಲ ತಿರುಗೇಟು ನೀಡಿದ್ದಾರೆ.
ನಿರುಪಯುಕ್ತ ಸಾಲ: ನಿರುಪಯುಕ್ತ ಸಾಲಕ್ಕೆ ಕೆಟ್ಟ ಸಾಲ ಎಂದು ಕರೆಯುತ್ತಾರೆ. ಸರ್ಕಾರದ ಆಧಾರದ ಮೇರೆಗೆ ಬ್ಯಾಂಕ್​ಗಳು ನೀಡುವ ಸಾಲ ಮರುಪಾವತಿಯಾಗದೇ ಕೆಟ್ಟ ಸಾಲದ ಪ್ರಮಾಣ ಹೆಚ್ಚಾಗುತ್ತದೆ. ಪ್ರತಿವರ್ಷದಂತೆ ಜನವರಿ–ಮಾರ್ಚ್ ಅವಧಿಯಲ್ಲಿ ಸಾವಿರಾರು ಕೋಟಿ ನಷ್ಟವನ್ನು ಸರ್ಕಾರ ಅನುಭವಿಸುತ್ತದೆ. ಈ ಕಾರಣಕ್ಕಾಗಿಯೇ ಬಹುಪಾಲು ಬ್ಯಾಂಕುಗಳ ಲಾಭಾಂಶ ಇಳಿಕೆಯಾಗಿದೆ ಎನ್ನಲಾಗುತ್ತದೆ.

Trending Now