‘ನನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳು’: ಸರ್ಕಾರದ ವಿರುದ್ಧ ‘ಮೋಸ್ಟ್​ ವಾಟೆಂಡ್’​​ ವಂಚಕ ಚೋಕ್ಸಿ ಕಿಡಿ

webtech_news18
ನ್ಯೂಸ್​-18 ಕನ್ನಡನವದೆಹಲಿ(ಸೆಪ್ಟೆಂಬರ್​​.11): ಬಹುಕೋಟಿ ಪಿಎನ್​​ಬಿ ಹಗರಣದ ಪ್ರಮುಖ ಆರೋಪಿ ಮೆಹುಲ್​​ ಚೋಕ್ಸಿ ಅವರು, ಜಾರಿ ನಿರ್ದೇಶನಾಲಯ ತಮ್ಮ ವಿರುದ್ಧ ಎಸಗಿರುವ ಆರೋಪಗಳೆಲ್ಲವೂ ಸುಳ್ಳು ಮತ್ತು ಆಧಾರ ರಹಿತ ಎಂದು ತಿಳಿಸಿದ್ದಾರೆ. ನನ್ನ ಮೇಲೆ ಉರುಳಿಲ್ಲದ ಆರೋಪ ಮಾಡಿ, ಕಾನೂನು ಬಾಹಿರವಾಗಿ ಆಸ್ತಿ ಜಪ್ತಿಯನ್ನು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತನ್ನ ಮೇಲಿನ ಆರೋಪಗಳ ಕುರಿತಂತೆ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಉದ್ಯಮಿ ಚೋಕ್ಸಿ, ಜಾರಿ ನಿರ್ದೇಶನಾಲಯ ಎಸಗಿರುವ ಆರೋಪಗಳೆಲ್ಲವೂ ಸುಳ್ಳು. ಸುಖಾಸುಮ್ಮನೇ ಸತ್ಯಾಂಶಗಳೇ ಇಲ್ಲದ ಆರೋಪ ಮಾಡಿದ್ದಾರೆ. ಅಲ್ಲದೇ ಕಾನೂನು ಬಾಹಿರವಾಗಿ ನನ್ನ ಅನುಮತಿಯಿಲ್ಲದೆ ಆಸ್ತಿಯ ವಶಕ್ಕೆ ಪಡೆದುಕೊಂಡಿದೆ ಎಂದು ಜಾರಿ ನಿರ್ದೇಶನಾಲಯದ ವಿರುದ್ಧ ಕಿಡಿಕಾರಿದ್ದಾರೆ.


ಕಳೆದ ಫೆ.16 ರಂದು ನನ್ನ ಪಾಸ್'ಪೋರ್ಟ್'ನ್ನು ಭಾರತ ರದ್ದುಗೊಳಿಸಿದೆ. ಬಳಿಕ ಫೆ.20  ರಂದು ನನಗೆ ಪಾಸ್'ಪೋರ್ಟ್ ತಡೆಹಿಡಿದ ಬಗ್ಗೆ ಅಧಿಕಾರಿಗಳಿಂದಲೇ ಮೇಲ್ ಮೂಲಕ ಮಾಹಿತಿ ​​ಬಂದಿದೆ. ಮೇಲ್​ನಲ್ಲಿ ದೇಶದ ಆಂತರಿಕ ಭದ್ರತೆಗಾಗಿ ತೊಡಕಾಗದೆ ಎಚ್ಚರವಹಿಸುವ ಸಲುವಾಗಿ ಪಾಸ್'ಪೋರ್ಟ್ ತಡೆಹಿಡಿದಿರುವುದಾಗಿ ತಿಳಿಸಿದ್ಧಾರೆ.ಅಲ್ಲದೇ ಈ ಕುರಿತು ಮುಂಬೈ ಪ್ರಾದೇಶಿಕ ಪಾಸ್​ಪೋರ್ಟ್ ಕಚೇರಿಗೆ ಸ್ಪಷ್ಟೀಕರಣ ನೀಡುವಂತೆ ಮನವಿ ಮಾಡಿದರೂ ಇಲ್ಲಿಯವರೆಗೂ ಯಾವುದೇ ಉತ್ತರ ಬಂದಿಲ್ಲ ಎಂದಿದ್ಧಾರೆ. ಹೀಗಾಗಿ ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲವೂ ಉರಳಿಲ್ಲದ ಸುಳ್ಳು ಮತ್ತು ಸುಖಾಸುಮ್ಮನೇ ಈ ರೀತಿಯಾಗಿ ಸರ್ಕಾರ ನನ್ನೊಂದಿಗೆ ನಡೆದುಕೊಳ್ಳುತ್ತಿದೆ ಎಂದು ಚೋಕ್ಸಿ ಆರೋಪಿಸಿದ್ದಾರೆ.


ಈ ಹಿಂದೆ ಜಾರಿ ನಿರ್ದೇಶನಾಲಯವು ಮುಂಬೈ ಕೋರ್ಟ್ ಆದೇಶದ ಮೇರೆಗೆ ಭಾರತ, ಯುಕೆ ಮತ್ತು ಯುಎಇಯಲ್ಲಿ ಇರುವ ಚೋಕ್ಸಿಯ ಸಾವಿರಾರು ಕೋಟಿ ರುಪಾಯಿ ಆಸ್ತಿಯನ್ನು ವಶಪಡಿಸಿಕೊಂಡಿತ್ತು. ಭಾರತಕ್ಕೆ ಹಿಂತಿರುಗುವಂತೆ ಸರ್ಕಾರ ಮನವಿ ಮಾಡಿದರೂ, ಸಾರ್ವಜನಿಕರು ನನ್ನನ್ನು ಕೊಂದು ಬಿಡಬಹುದು. ಹೀಗಾಗಿ ವಾಪಸ್ ಬರುವುದಿಲ್ಲ ಎಂದು ಚೋಕ್ಸಿ ಹೇಳಿದ್ದನ್ನು ನಾವು ಸ್ಮರಿಸಬಹುದು.

Trending Now