'ಅಜೇಯ ಭಾರತ, ಅಟಲ್​ ಬಿಜೆಪಿ' ಘೋಷವಾಕ್ಯದ ಮೂಲಕ ಲೋಕಸಭಾ ಚುನಾವಣೆಗೆ ಸಜ್ಜಾದ ಬಿಜೆಪಿ

webtech_news18 , Advertorial
ನ್ಯೂಸ್​ 18 ಕನ್ನಡದೆಹಲಿ (ಸೆ.9): ಅಜೇಯ ಭಾರತ, ಅಟಲ್​ ಬಿಜೆಪಿ ಎಂಬ ಘೋಷವಾಕ್ಯದ ಮೂಲಕ 2019ರ ಲೋಕಸಭಾ ಚುನಾವಣೆ ಎದುರಿಸಲು ಬಿಜೆಪಿ  ಸಜ್ಜಾಗಿದೆ.


ಬಿಜೆಪಿ ಕಾರ್ಯಕಾರಿಣಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ರವಿ ಶಂಕರ್​ ಪ್ರಸಾದ್​, ವಾಜಪೇಯಿ ಅವರ ಕೆಲಸ ಮತ್ತು ಆಲೋಚನೆಗಳನ್ನು ಜನರಿಗೆ ತಲುಪಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಪಕ್ಷ ಯೋಜಿಸಿದೆ ಎಂದು ತಿಳಿಸಿದರು.ಅಟಲ್​ಜಿ ಅವರಿಗೆ ಗೌರವ ಸಲ್ಲಿಸಿದ ಮೋದಿ 'ಅಜೇಯ ಭಾರತ್​, ಅಟಲ್​ ಬಿಜೆಪಿ' ಎಂಬ ಘೋಷ ವಾಕ್ಯವನ್ನು ರಚಿಸಿದರು. ಬಿಜೆಪಿ ಅದರ ತತ್ವಾದರ್ಶಗಳಿಗೆ ಬದ್ಧವಾಗಿದೆ ಎಂದು ಕೂಡ ತಿಳಿಸಿದರು.ಯಾವ ಜನರು ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಿಲ್ಲವೋ ಅವರು ಬೇರೆಯವರೊಂದಿಗೆ ಕೈ ಜೋಡಿಸುತ್ತಾರೆ. ಇದು ನಮ್ಮ ಯಶಸ್ಸು. ಜನರು ನಮ್ಮ ಕಾರ್ಯಕ್ರ,ಮವನ್ನು, ಪಕ್ಷ ಹಾಗೂ ನಾಯಕತ್ವವನ್ನು ಸ್ವೀಕರಿಸಿದ್ದಾರೆ ಎಂದು ಪ್ರಧಾನಿ ಕಾರ್ಯಕಾರಿಣಿ ಸಭೆಯಲ್ಲಿ ತಿಳಿಸಿದರು.ನಮ್ಮ ಪಕ್ಷದ ಕೆಲವರು ಪ್ರಸ್ತುತ ನಾಯಕತ್ವವನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ. ಸಣ್ಣ ರಾಜಕೀಯ ಪಕ್ಷಗಳು ಕೂಡ ಕಾಂಗ್ರೆಸ್​ ನಾಯಕತ್ವವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾಯಕತ್ವ ಎಂಬ ಉನ್ನತ ಹುದ್ದೆ ನಿರ್ವಹಿಸಲು ಅಸಮರ್ಥರಾಗಿದ್ದಾರೆ ಎಂದು ರಾಹುಲ್​ ಗಾಂಧಿ ವಿರುದ್ಧ ಹರಿಹಾಯ್ದರು.ಮಹಾಘಟಬಂಧನ್​ ವಿರುದ್ಧ  ಟೀಕಿಸಿದ ಅವರು ಈ ಬಂಧನಕ್ಕೆ ನಾಯಕತ್ವದ ಕೊರತೆ ಇದೆ.  ಬಿಜೆಪಿ ವಿರುದ್ಧ ಸುಳ್ಳಾಡಲು ವಿಪಕ್ಷಗಳು ವೇದಿಕೆ ರೂಪಿಸಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.2019ರಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ, ಬಿಜೆಪಿ ಇನ್ನು 50 ವರ್ಷಗಳ ಕಾಲ ಭಾರತವನ್ನು ಆಡಳಿದೆ ಎಂದು ವಿಶ್ವಾಸವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ  ವ್ಯಕ್ತಪಡಿಸಿದರು.

Trending Now