ಪುನರಾವರ್ತಿತ ಮದ್ಯಪಾನದಿಂದ ಮೆದುಳಿನ ಮೇಲೆ ಕೆಟ್ಟ ಪರಿಣಾಮ

webtech_news18 , Advertorial
-ನ್ಯೂಸ್ 18 ಕನ್ನಡಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ನಿರ್ದಿಷ್ಟ ಸಮಯದಲ್ಲಿ ಹೆಚ್ಚು ಮದ್ಯ ಸೇವಿಸುವುದರಿಂದ ಪುರುಷರ ಮತ್ತು ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಈ ಹಿಂದಿನ ಅಧ್ಯಯನದಿಂದ ತಿಳಿದು ಬಂದಿತ್ತು. ಇದೀಗ ಈ ರೀತಿಯ ಕುಡಿತದಿಂದ ಉಂಟಾಗುವ ಮೆದುಳಿನ ಮೇಲಿನ ಪರಿಣಾಮ ಭಿನ್ನವಾಗಿದೆ ಎಂದು ಹೊಸ ಅಧ್ಯಯನ ತಂಡ ತಿಳಿಸಿದೆ.

ಪುನರಾವರ್ತಿತ ಕುಡಿತದ ಮೆದುಳಿನ ನ್ಯೂಕ್ಲಿಯಸ್ ಅಕ್ಯುಂಬೆನ್ಸ್​ನ ಪ್ರತಿಕ್ರಿಯೆಗಳ ಮೇಲೆ ಗಣನೀಯವಾದ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ. ಆದರೆ ಇದುವೇ ಮಹಿಳೆಯರ ಹಾರ್ಮೋನು ಮತ್ತು ರೋಗ ನಿರೋಧಕ ಕ್ರಿಯೆಗಳಿಗೆ ಏರುಪೇರಾಗಿ ಅನಾರೋಗ್ಯ ಉಂಟು ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.ಈ ಹೊಸ ಅಧ್ಯಯನಕ್ಕಾಗಿ ಆಲ್ಕೋಹಾಲ್ ವ್ಯಸನಮುಕ್ತ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿರುವವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಪುರುಷ ಮತ್ತು ಮಹಿಳೆಯರ ಅಸ್ವಸ್ಥತೆಗೆ ಅನುಗುಣವಾಗಿ ಚಿಕಿತ್ಸೆ ನೀಡುವ ಮಹತ್ವದ ಸೂಚನೆಗಳನ್ನು ಈ ಅಧ್ಯಯನ ಒದಗಿಸಿದೆ ಎಂದು ಒರೆಗಾನ್ ಹೆಲ್ತ್ ಅಂಡ್ ಸೈನ್ಸ್ ಯೂನಿವರ್ಸಿಟಿ ಪ್ರೊಫೆಸರ್ ಡೆಬೊರಾ ಫಿನ್ ಹೇಳಿದ್ದಾರೆ.ಪುನರಾವರ್ತಿತ ಕುಡಿತದ ಅವಲಂಬನೆಯು ಆರೋಗ್ಯದ ಮೇಲೆ ಬೀರುವ ಅಪಾಯಕಾರಿ ಅಂಶವಾಗಿದ್ದು, ಇದು ಮೆದುಳಿನ ಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಜರ್ನಲ್ ಫ್ರಾಂಟಿಯರ್ಸ್​ನಲ್ಲಿ ಪ್ರಕಟವಾದ ಅಧ್ಯಯನದಿಂದ ತಿಳಿದು ಬಂದಿದೆ. ಪುನರಾವರ್ತಿತ ಮದ್ಯದ ವ್ಯಸನದಿಂದ ಅಸ್ವಸ್ಥತೆಗೊಂಡಿರುವರ 384 ಜೆನ್​ಗಳನ್ನು ಪರೀಕ್ಷಿಸಲಾಗಿತ್ತು. ಇದರಿಂದ ಪುನರಾವರ್ತಿತ ಕುಡಿತದ ಪರಿಣಾಮದ ಬಗ್ಗೆ ಬೆಳಕು ಚೆಲ್ಲಲು ನೆರವಾಗಿದೆ ಎಂದು ಫಿನ್ ತಿಳಿಸಿದ್ದಾರೆ.ಕುಡಿತಕ್ಕೆ ದಾಸರಾಗಿರುವವರ ರಕ್ತದಲ್ಲಿನ 106 ಜೆನ್​ಗಳು ನಿಯಂತ್ರಿಸಲ್ಪಟ್ಟಿದ್ದು, ಇದರಲ್ಲಿ 14 ಜೆನ್​ ಮಾತ್ರ ಮಹಿಳೆ ಮತ್ತು ಪುರುಷರು ಒಂದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆ. ಇದು ಪುನರಾವರ್ತಿತ ಕುಡಿತದ ಪರಿಣಾಮವನ್ನು ಪ್ರತಿನಿಧಿಸುತ್ತದೆ. ಹಾಗೆಯೇ 14 ರಲ್ಲಿ 4 ಜೆನ್​ಗಳು ಒಂದೇ ದಿಕ್ಕಿನಲ್ಲಿ ನಿಯಂತ್ರಿಸಲ್ಪಟ್ಟರೆ 30 ಜೆನ್​ಗಳು ಗಮನಾರ್ಹವಾಗಿ ಭಿನ್ನವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.ಪುನರಾವರ್ತಿತ ಕುಡಿತದಿಂದ ಪ್ರಭಾವಕ್ಕೊಳಗಾಗಿದ್ದವರ ಚಿಕಿತ್ಸೆಯ ಬಳಿಕ ಪುರುಷರಿಗಿಂತ ಮಹಿಳೆಯರಲ್ಲಿ ಈ ಚಟವು ಕಡಿಮೆಯಾಗಿರುವುದಾಗಿ ಫಿನ್ ತಿಳಿಸಿದ್ದಾರೆ. ಅದೇ ರೀತಿ ಆಲ್ಕೋಹಾಲ್ ಬಳಕೆಯ ಅಸ್ವಸ್ಥತೆ ಚಿಕಿತ್ಸೆಯ ಅಭಿವೃದ್ಧಿಯಲ್ಲಿ ಲೈಂಗಿಕತೆಯ ಪರಿಗಣನೆಯು ವಿಮರ್ಶಾತ್ಮಕವಾಗಿದೆ ಎಂದು ಅವರು ತಿಳಿಸಿದ್ದಾರೆ. 

Trending Now