ಈ ವಿಷಯಗಳಿಗೆ ಮಹಿಳೆಯರಿಗೆ ಪುರುಷರ ಸಹಾಯ ಬೇಕಂತೆ

webtech_news18 , Advertorial
-ನ್ಯೂಸ್ 18 ಕನ್ನಡಬಹುತೇಕ ಭಾರತೀಯ ಮಹಿಳೆಯರು ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾರೆ. ಪುರುಷರು ಇಂತಿಷ್ಟು ಸಮಯ ಕೆಲಸ ಮಾಡಿದರೆ, ಮಹಿಳೆಯರು ದಿನಂಪೂರ್ತಿ ಕೆಲಸದಲ್ಲಿ ನಿರತರಾಗಿರುತ್ತಾರೆ. ಆದರೂ ಮನೆಯಲ್ಲಿ ಅಂತಹ ಕೆಲಸವೇನಿದೆ ಎಂದು ಪ್ರಶ್ನಿಸುವವರೇ ಹೆಚ್ಚು. ಈ ಬಗ್ಗೆ ವೆಬ್​ಸೈಟ್​ವೊಂದು ಸಮೀಕ್ಷೆ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ. www.shaadi.com ನಡೆಸಿದ ಸಮೀಕ್ಷೆಯಲ್ಲಿ ಹಬ್ಬ ಹರಿದಿನಗಳ ಸಮಯದಲ್ಲಿ ಪುರುಷರ ಸಹಾಯವನ್ನು ಮಹಿಳೆಯರು ಬಯಸುತ್ತಾರೆ ಎಂದು ತಿಳಿದು ಬಂದಿದೆ. ಇಲ್ಲಿ ಮದುವೆ ಸಮಾರಂಭ ಮತ್ತು ಹಬ್ಬಗಳ ಸಮಯದಲ್ಲಿ ಮಹಿಳೆಯರೊಂದಿಗೆ ಪುರುಷರ ಪಾತ್ರದ ಬಗ್ಗೆ ಪ್ರಶ್ನಿಸಲಾಗಿತ್ತು.


ಹಬ್ಬಗಳ ಸಮಯದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಜವಾಬ್ದಾರಿಗಳಿವೆಯೇ? ಎಂಬ ಬಗ್ಗೆ ಪ್ರಶ್ನಿಸಿದಾಗ ಶೇ.66 ರಷ್ಟು ಮಹಿಳೆಯರು ಇಲ್ಲ ಎಂದರೆ ಶೇ. 34ರಷ್ಟು ಮಂದಿ ಇದೆ ಎಂದು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಇದೇ ಪ್ರಶ್ನೆಯನ್ನು ಪುರುಷರೊಂದಿಗೆ ಕೇಳಿದಾಗ ಶೇ.75ರಷ್ಟು ಮಂದಿ ಇದೆ ಎಂದು ಶೇ.25ರಷ್ಟು ಮಂದಿ ಇಲ್ಲವೆಂದು ತಿಳಿಸಿದ್ದಾರೆ.ಕೆಲಸಗಳ ವಿಷಯ ಬಂದಾಗ ಪುರುಷರ ಮತ್ತು ಮಹಿಳೆಯರು ಸಮಾನ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂಬ ಅಭಿಪ್ರಾಯ ಈ ಸಮೀಕ್ಷೆ ಸೂಚಿಸಿದ್ದು, ಹಬ್ಬಗಳ ಸಂದರ್ಭಗಳಲ್ಲಿ ಎಲ್ಲ ಕಾರ್ಯಗಳನ್ನು ಮಹಿಳೆಯರೊಬ್ಬರೇ ಮಾಡಲಿ ಎಂಬುದನ್ನು ಪುರುಷರು ಕೂಡ ನಿರೀಕ್ಷಿಸುತ್ತಿಲ್ಲ ಎಂದು ಈ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.ಹಾಗೆಯೇ ಮನೆಯ ಎಲ್ಲಾ ಚಟುವಟಿಕೆಗಳು ಮಹಿಳೆಯ ಜವಾಬ್ದಾರಿ ಎಂದು ನೀವು ಭಾವಿಸುತ್ತೀರಾ? ಎಂಬ ಪ್ರಶ್ನೆಗೆ ಮಹಿಳೆ ಮತ್ತು ಪುರುಷರಿಂದ ಶೇ. 100 ರಷ್ಟು ಇಲ್ಲ ಎಂಬ ಉತ್ತರ ಬಂದಿದೆ. ಮನೆಯ ನಿರ್ವಹಣಾ ಜವಾಬ್ದಾರಿಯಲ್ಲಿ ಪುರುಷ ಮತ್ತು ಮಹಿಳೆಯರ ಸಮಾನ ಜವಾಬ್ದಾರಿವಹಿಸಬೇಕೇ? ಎಂಬ ಪ್ರಶ್ನೆಗೂ ಶೇ.100 ರಷ್ಟು ಹೌದು ಎಂಬ ಅಭಿಪ್ರಾಯ ತಿಳಿಸಿದ್ದಾರೆ.ಮಹಿಳೆಯರು ಹಬ್ಬ ಹರಿದಿನಗಳಲ್ಲಿ ಹೆಚ್ಚು ಉತ್ಸಾಹದಿಂದ ಭಾಗಿಯಾಗುತ್ತಾರಾ? ಎಂಬ ಪ್ರಶ್ನೆಗೆ ಶೇ.47ರಷ್ಟು ಜನರು ಹೌದು ಎಂದು ತಿಳಿಸಿದರೆ ಶೇ.11 ರಷ್ಟು ಮಂದಿ ಇಲ್ಲ ಎಂದಿದ್ದಾರೆ.ಅದೇ ರೀತಿ ಪುರುಷರಿಂದ ಮಹಿಳೆಯರು ಯಾವ ರೀತಿಯ ಸಹಾಯವನ್ನು ಅಪೇಕ್ಷೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಶೇ.83ರಷ್ಟು ಜನರು ಮನೆ ಕೆಲಸದಲ್ಲಿ ಸಕ್ರೀಯವಾಗಿ ಸಹಾಯ ಮಾಡಲಿ ಎಂದು ಹೇಳಿದರೆ, ಶೇ.17 ರಷ್ಟು ಮಂದಿ ಮನೆಯ ಸ್ವಚ್ಛತಾ ಕಾರ್ಯದಲ್ಲಿ ನಮ್ಮೊಂದಿಗಿರಲಿ ಎಂದಿದ್ದಾರೆ. ಅದರಲ್ಲಿ ಕೆಲವರು ಅತಿಥಿಗಳಿಗಾಗಿ ವಿಶೇಷ ಅಡುಗೆಗಳ ತಯಾರಿಸುವಾಗ ಸಹಾಯ ಮಾಡಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.ಈ ಸಮೀಕ್ಷೆಯಲ್ಲಿ 24 ರಿಂದ 40 ವರ್ಷದ ಭಾರತೀಯರು ಭಾಗವಹಿಸಿದ್ದರು. ಇದರಲ್ಲಿ ಪುರುಷರು, ಮಹಿಳೆಯರು, ವಿವಾಹಿತರು ಮತ್ತು ಅವಿವಾಹಿತರು ಪಾಲ್ಗೊಂಡಿದ್ದರು. ಇಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸಮೀಕ್ಷೆಯಲ್ಲಿ ಭಾಗವಹಿಸಿದವರಿಂದ 7300 ಅನಿಸಿಕೆಗಳು ವ್ಯಕ್ತವಾಗಿದ್ದವು.ಮದುವೆ ಎಂಬುದು ಸಮಾನತೆಯ ಒಂದು ವೇದಿಕೆಯಾಗಿದ್ದು, ಇದರಿಂದ ವೈವಾಹಿಕ ಜೀವನವು ಸುಖಕರವಾಗಿರುತ್ತದೆ ಎಂದು ಭಾವಿಸುತ್ತೇನೆ. ಈ ಸಮೀಕ್ಷೆಯಿಂದ ಇಂದಿನ ಯುವ ತಲೆಮಾರಿನ ಮನಸ್ಥಿತಿಯು  ಬದಲಾಗಬಹುದು ಎಂಬ ನಿರೀಕ್ಷಿಸುವುದಾಗಿ Shaadi.com ಕಾರ್ಯನಿರ್ವಾಹಕ ಅಧಿಕಾರಿ ಗೌರವ್ ರಕ್ಷಿತ್ ತಿಳಿಸಿದ್ದಾರೆ.

Trending Now