ಸುದ್ದಿ 18 ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು
>

Urfi Javed Galaxy Dress: ಪಾಪ್ಸ್ ಬಳಿ ಚೈನ್ ಕೇಳಿದ ಉರ್ಫಿ ಜಾವೇದ್! ಗ್ಯಾಲಕ್ಸಿ ಡ್ರೆಸ್​ನಲ್ಲಿ ಶೈನ್, ತಲೆಯ ಮೇಲೆ ತಾರೆಗಳು!

Urfi Javed: ಕಿರುತೆರೆ ನಟಿ ಉರ್ಫಿ ಜಾವೇದ್ ಅವರು ಈಗ ಹೊಸ ಗ್ಯಾಲಕ್ಸಿ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಏನಪ್ಪಾ ಎಂದರೆ ಪಾಪ್ಪರಾಜಿಯಲ್ಲಿ ನಟಿ ಚೈನ್ ಕೇಳಿದ್ದಾರೆ.

Urfi Javed Galaxy Dress: ಪಾಪ್ಸ್ ಬಳಿ ಚೈನ್ ಕೇಳಿದ ಉರ್ಫಿ ಜಾವೇದ್! ಗ್ಯಾಲಕ್ಸಿ ಡ್ರೆಸ್​ನಲ್ಲಿ ಶೈನ್, ತಲೆಯ ಮೇಲೆ ತಾರೆಗಳು!
ಉರ್ಫಿ ಜಾವೇದ್​

ಉರ್ಫಿ ಜಾವೇದ್ (Urfi Javed) ಈಗ ಟಾಪ್ ಸೆಲೆಬ್ರಿಟಿಗಳನ್ನೂ (Celebrity) ಮೀರಿಸಿ ಫಾಲೋವರ್ಸ್​ಗಳನ್ನು ಪಡೆಯುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ (Social Media) ಅಕ್ಷರಶಃ ಉರ್ಫಿ ರಾಕಿಂಗ್. ತಮ್ಮ ಚಿತ್ರ ವಿಚಿತ್ರ ಉಡುಪುಗಳಿಂದ, ಫ್ಯಾಷನ್​ಗಳಿಂದ ನಟಿ ಟ್ರೋಲ್ (Troll) ಆಗುವುದರ ಜೊತೆ ಜೊತೆಗೆ ಸಿಕ್ಕಾಪಟ್ಟೆ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ. ಸಾಲದ್ದಕ್ಕೆ ಪಾಪ್ಪರಾಜಿಗಳ ಮೋಸ್ಟ್ ಫೇವರೇಟ್ ಆಗಿದ್ದಾರೆ. ಉರ್ಫಿ ಜಾವೇದ್ (Urfi Javed) ಹಾಟ್ ಲ್ಯಾವೆಂಡರ್ ಬ್ಯಾಕ್‌ಲೆಸ್ (Backless) ಮಿನಿ ಡ್ರೆಸ್‌ನಲ್ಲಿ ಉತ್ಕೃಷ್ಟತೆಯನ್ನು ವ್ಯಕ್ತಪಡಿಸಿದ್ದಾರೆ. ಉರ್ಫಿ ಜಾವೇದ್ (Urfi Javed) ಮತ್ತೊಮ್ಮೆ ತಮ್ಮ ವಿಶಿಷ್ಟ ಮತ್ತು ಪ್ರಾಯೋಗಿಕ ಫ್ಯಾಷನ್ ಸೆನ್ಸ್‌ನೊಂದಿಗೆ (Fashion Sense) ಮರಳಿದ್ದಾರೆ. ನೆಟಿಜನ್‌ಗಳು ಉತ್ಸುಕರಾಗಿದ್ದಾರೆ. ತನ್ನ ಬೋಲ್ಡ್ ವ್ಯಕ್ತಿತ್ವ ಮತ್ತು ಸೀದಾ ಸಾದಾ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ಹಾಟ್ ಚೆಲುವೆ ಇತ್ತೀಚೆಗೆ ಗ್ಯಾಲಕ್ಸಿ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಗ್ಯಾಲಕ್ಸಿ ಡ್ರೆಸ್

ತಮ್ಮ ಮೊಬೈಲ್​ನಲ್ಲಿ ಗ್ಯಾಲಕ್ಸಿಯ ಫೋಟೋ ತೋರಿಸಿದ ನಟಿ ಈ ಗ್ಯಾಲಕ್ಸಿ ಫೊಟೋ ನನ್ನ ಈ ಡ್ರೆಸ್​ಗೆ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ. ಶೈನಿಂಗ್ ಆಗಿರುವ ಮಿನಿ ಡ್ರೆಸ್ ಫ್ಯಾಷನಲೆಬಲ್ ಆಗಿದ್ದರೂ ಬಹಳಷ್ಟು ಭಾಗ ಬಟ್ಟೆ ಇಲ್ಲದಂತೆ ಗೋಚರಿಸುತ್ತದೆ.

ತಲೆಯ ಮೇಲೆ ತಾರೆಗಳು

ಉರ್ಫಿ ಗ್ಯಾಲೆಕ್ಸಿ ಫೀಲ್ ಕಂಪ್ಲೀಟ್ ಮಾಡಲು ತಲೆಯ ಮೇಲೆ ತಾರೆಗಳನ್ನೂ ಕೂರಿಸಿದ್ದಾರೆ. ಇದು ಪಾಪ್ಪರಾಜಿಗಳಿಗೆ ಆಕರ್ಷಣೆಯಾಗಿತ್ತು. ನಟಿ ಸ್ವತಃ ತಾವೇ ಪಾಪ್ಪರಾಜಿಗಳನ್ನು ಕರೆದು ತನ್ನ ತಲೆಯ ಮೇಲಿರುವ ತಾರೆಗಳನ್ನು ತೋರಿಸಿದ್ದಾರೆ.

ಪಾಪ್ಪರಾಜಿಗಳಲ್ಲಿ ಚೈನ್ ಕೇಳಿದ ಉರ್ಫಿ

ಮ್ಯಾಚಿಂಗ್ ಮ್ಯಾಚಿಂಗ್, ತಲೆಯಲ್ಲೂ ಚಂದಿರ, ನಕ್ಷತ್ರಗಳಿವೆ. ಇವರ ಚೈನ್ ಎಷ್ಟು ಚೆನ್ನಾಗಿ ಕಾಣಿಸುತ್ತಿದೆ ಎಂದು ಉರ್ಫಿ ಹೇಳಿದ್ದಾರೆ. ನಾನು ತೆಗೆದುಕೊಳ್ಳಲೇ ಎಂದು ಅವರು ಹೇಳಿದ್ದಾರೆ. ಇದಕ್ಕೆ ಉತ್​ತರಿಸಿದ ಪಾಪ್ಪರಾಜಿ ಖಂಡಿತಾ ತೆಗೆದುಕೊಳ್ಳಿ, ನಿಮಗೆ ಸುಂದರವಾಗಿ ಕಾಣಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Urfi Javed: ಲ್ಯಾವೆಂಡರ್ ಬಣ್ಣದ ಬ್ಯಾಕ್​ಲೆಸ್ ಡ್ರೆಸ್​ನಲ್ಲಿ ಮಿಂಚಿದ ಉರ್ಫಿ!

ಅರ್ಧ ಲಕ್ಷ ವ್ಯೂಸ್

ಉರ್ಫಿ ಅವರ ವಿಡಿಯೋವನ್ನು ವೈರಲ್ ಭಯಾನಿ ಶೇರ್ ಮಾಡಿದ್ದು ಈ ವಿಡಿಯೋ ಈಗಾಗಲೇ ಅರ್ಧ ಲಕ್ಷಕ್ಕೂ ಹೆಚ್ಚು ವ್ಯೂಸ್ ಗಳಿಸಿದೆ. 600ಕ್ಕೂ ಹೆಚ್ಚು ಮಂದಿ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.

ಉರ್ಫಿಗೆ ಟ್ರೋಲ್ ಹೊಸದೇನಲ್ಲ

‘ಉರ್ಫಿ ಜಾವೇದ್​ ಟ್ರೋಲ್​ಗೆ ಒಳಗಾಗೋದು ಹೊಸದೇನಲ್ಲ. ಪ್ರತಿ ಭಾರಿ ಟ್ರೋಲ್​ಗೆ ಒಳಗಾಗ್ತಾರೆ. ಆದರೆ, ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ತನಗಿಷ್ಟ ಬಂದ ಉಡುಗೊರೆ ತೊಟ್ಟು ಖುಷಿ ಪಡುತ್ತಾರೆ. ಉರ್ಫಿ ಅಷ್ಟಾಗಿ ಫೇಮಸ್ ಆಗಿರಲಿಲ್ಲ. ಯಾವಾಗ ಬೋಲ್ಡ್ ಅವತಾರದಲ್ಲಿ ಏರ್​​ಪೋರ್ಟ್​ನಲ್ಲಿ(Airport) ಕಾಣಿಸಿಕೊಂಡರೋ ಅಂದಿನಿಂದ ಉರ್ಫಿ ಸಖತ್ ಫೇಮಸ್ ಆದರು.

ಇದನ್ನೂ ಓದಿ: Bigg Boss Kannada OTT: ಅಯ್ಯೋ ಈ ಹೊಟ್ಟೆ ನೋಡೋಕಾಗ್ತಿಲ್ಲ, ಅಂಗಾತ ಮಲಗಿ ಹೊಟ್ಟೆ ಅಲುಗಾಡಿಸುತ್ತಿದ್ದಾರೆ ಗುರೂಜಿ!

ಕೆಲವರು ಉರ್ಫಿ ಜಾವೇದ್‌ರನ್ನ ಫ್ಯಾಶನ್ ಡಿಸಾಸ್ಟರ್(Fashion Disaster) ಅಂತಲೇ ಕರೆಯುತ್ತಿದ್ದಾರೆ. ಪ್ರತಿದಿನ ಚಿತ್ರ, ವಿಚಿತ್ರ ಬಟ್ಟೆಗಳನ್ನು ಧರಿಸಿ ಪಾಪಾರಾಜಿಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ.

ಯಾರು ಏನಾದ್ರೂ ಹೇಳಲಿ ಉರ್ಫಿ ಇರೋದೇ ಹೀಗೆ

ಬಹಳಷ್ಟು ನಟಿಯರು, ಜನರು ನಟಿಯನ್ನು ಟ್ರೋಲ್ ಮಾಡಿ ಕಾಲೆಳೆದರೂ ಉರ್ಫಿ ಒಂಚೂರು ತೆಲೆ ಕೆಡಿಸಿಕೊಳ್ಳುವುದಿಲ್ಲ. ಈ ಕಾರಣದಿಂದಲೇ ನಟಿ ಸೋಷಿಯಲ್ ಮೀಡಿಯಾದಲ್ಲಿ ದಿನದಿಂದ ದಿನಕ್ಕೆ ಫಾಲೋವರ್ಸ್ ಸಂಖ್ಯೆ ಏರಿಸಿಕೊಳ್ಳುತ್ತಲೇ ಇದ್ದಾರೆ.

Published by:Divya D
First published:August 25, 2022, 16:43 IST