ಬಿಗ್ ಬಾಸ್​ ಮನೆಯಲ್ಲಿ ಅವಘಡ: ಮಹಡಿಯಿಂದ ಬಿದ್ದು ವ್ಯಕ್ತಿ ಸಾವು

webtech_news18 , Advertorial
-ನ್ಯೂಸ್ 18 ಕನ್ನಡಖ್ಯಾತ ನಟ ಕಮಲ್ ಹಾಸನ್ ಅವರ ನಿರೂಪಣೆಯಲ್ಲಿ ತಮಿಳಿನಲ್ಲಿ ಮೂಡಿಬರುತ್ತಿರುವ ಬಿಗ್​ ಬಾಸ್ ಮನೆಯಲ್ಲಿ ಅವಘಡ ಸಂಭವಿಸಿದೆ. ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿರುವ ಮನೆಯ ಎರಡನೇ ಮಹಡಿಯಿಂದ ವ್ಯಕ್ತಿಯೊಬ್ಬರು ಬಿದ್ದು ಮೃತ ಪಟ್ಟಿರುವ ಘಟನೆ ನಡೆದಿದೆ. ಚೆನ್ನೈ ನಗರದ ಸಮೀಪದಲ್ಲಿರುವ ಪೂನಮಲ್ಲಿ ಇವಿಪಿ ಫಿಲ್ಮ್ ಸಿಟಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸಾವನ್ನಪ್ಪಿದ ವ್ಯಕ್ತಿ ಗುಣಶೇಖರನ್ ಎಂದು ಗುರುತಿಸಲಾಗಿದೆ.


ಇವರು ಮನೆಯ ಎರಡನೇ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ.  ಫಿಲ್ಮ್ ಸಿಟಿಯಲ್ಲಿ ಎಸಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿರುವ 30ರ ಹರೆಯದ ಗುಣಶೇಖರನ್ ರಾತ್ರಿಯ ವೇಳೆ ಕೆಲಸ ಮಾಡುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಆಯಾ ತಪ್ಪಿ ಬಿದ್ದ ಗುಣಶೇಖರನ್ನು ಇತರೆ ಕಾರ್ಮಿಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುಣಶೇಕರನ್ ಮೃತ ಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಈ ಬಗ್ಗೆ ನಜರತ್​ ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಕಮಲ್ ಹಾಸನ್ ನಡೆಸಿ ಕೊಡುತ್ತಿರುವ ತಮಿಳಿನ ಬಿಗ್ ಬಾಸ್ ಮೊದಲ ಆವೃತ್ತಿ ಯಶಸ್ವಿಯಾಗಿದ್ದು, ಇದರ ಎರಡನೇ ಭಾಗದ ಚಿತ್ರೀಕರಣ ಇವಿಪಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ.

Trending Now