ತೆರೆಗಪ್ಪಳಿಸಲಿದ್ದಾನೆ ರಶ್ಮಿಕಾ-ನಾಗಾರ್ಜುನ ಅಭಿನಯದ 'ದೇವದಾಸ್'​..!

webtech_news18 , Advertorial
ನ್ಯೂಸ್​ 18 ಕನ್ನಡ ಟಾಲಿವುಡ್​ನಲ್ಲಿ ಬಹುನಿರೀಕ್ಷಿತ ಸಿನಿಮಾ 'ದೇವದಾಸ್​'. ಅಕ್ಕಿನೇನಿ ನಾಗಾರ್ಜುನ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಈ ಸಿನಿಮಾ ಟಾಲಿವುಡ್​ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ತೆರೆಕಂಡ ಮೇಲೆ ದಾಖಲೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತದೆ.


ನಾಗಾರ್ಜುನ ಅವರ ತಂದೆ ಅಕ್ಕಿನೇನಿ ನಾಗೇಶ್ವರ ರಾವ್​ ಅವರು ಬಹಳ ಹಿಂದೆಯೇ 'ದೇವದಾಸು' ಸಿನಿಮಾದ ಹೆಸರನ್ನೇ ಕೊಂಚ ಬದಲಾಯಿಸಿ, ಈ ಸಿನಿಮಾಗೆ 'ದೇವದಾಸ್​' ಎಂದು ಇಡಲಾಗಿದೆ. ಈ ಸಿನಿಮಾದಲ್ಲಿ ನಾಗಾರ್ಜುನ ಅವರೊಂದಿಗೆ ನಾನಿ ಸಹ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ನಾಗ್​ 'ದೇವ' ಎಂಬ ಡಾನ್​ ಪಾತ್ರದಲ್ಲಿ ಕಾಣಿಸಿಕೊಂಡರೆ, ನಾನಿ 'ದಾಸ್​' ಪಾತ್ರಧಾರಿಯಾಗಿದ್ದಾರೆ. ಅದಕ್ಕಾಗಿಯೇ ಈ ಸಿನಿಮಾಗೆ 'ದೇವದಾಸ್​' ಎಂದು ಶೀರ್ಷಿಕೆ ನೀಡಲಾಗಿದೆ.ಬಿರುಸಿನಿಂ ದಸಾಗಿದ್ದ ಚಿತ್ರೀಕರಣಕ್ಕೆ ಈಗ ತೆರೆ ಬಿದ್ದಿದ್ದು, ಈ ವಿಷಯವನ್ನು ಖುದ್ದು ನಾಗಾರ್ಜುನ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.


ವೈಜಯಂತಿ ಮೂವೀಸ್​ ಬ್ಯಾನರ್​ ಅಡಿಯಲ್ಲಿ ಅಶ್ವಿನಿ ದತ್ ನಿರ್ಮಿಸಿರುವ ಈ ಸಿನಿಮಾವನ್ನು ಶ್ರೀರಾಮ್​ ಆದಿತ್ಯ ನಿರ್ದೇಶನ ಮಾಡಿದ್ದಾರೆ. ಇನ್ನು ಇದೇ ತಿಂಗಳ 27ರಂದು ತೆರೆ ಕಾಣಲಿರುವ ಈ ಸಿನಿಮಾದ ಕಥೆ, ಪರಿಕಲ್ಪನೆ ವಿಭಿನ್ನವಾಗಿದ್ದು, ಪ್ರೇಕ್ಷಕರಲ್ಲಿ ಇದನ್ನು ಕಣ್ತುಂಬಿಕೊಳ್ಳುವ ಕಾತುರ ಹೆಚ್ಚಿದೆ.

Trending Now